ವಿನಾಶಕಾರೀ ನಿರ್ಧಾರಕ್ಕೆ ಪ್ರತಿರೋಧದ ದಮನಕ್ಕೆ ಸುಗ್ರೀವಾಜ್ಞೆ: ಸಿಐಟಿಯು ಖಂಡನೆ

ಯುದ್ಧಸಾಮಗ್ರಿ ಕಾರ್ಖಾನೆಗಳ ಮಂಡಳಿ(ಒಎಫ್‌ಬಿ)ಯನ್ನು ವಿಸರ್ಜಿಸಿ ಅದರ ಅಡಿಯಲ್ಲಿರುವ 44 ಕಾರ್ಖಾನೆಗಳನ್ನು ಏಳು ಕಾರ್ಪೊರೇಟ್‌ಗಳಾಗಿ ಮಾಡುವ ಕೇಂದ್ರ ಸರಕಾರದ ನಿರ್ಧಾರ ಕ್ರಮೇಣ ಈ ವಲಯವನ್ನು ಖಾಸಗೀಕರಿಸಿ ವಿದೇಶಿ ಕಂಪನಿಗಳಿಗೆ ತೆರೆಯುವ ಹುನ್ನಾರವನ್ನು ಹೊಂದಿದೆ. ಇದು ದೇಶದ ರಕ್ಷಣಾ ಹಿತಗಳಿಗೆ ವಿನಾಶಕಾರಿ ಎಂದು ಅದನ್ನು ಬಲವಾಗಿ ವಿರೋಧಿಸುತ್ತಿರುವ ರಕ್ಷಣಾ ಉತ್ಪಾದನಾ ವಲಯದ ಕಾರ್ಮಿಕರು ಜೂನ್ 19ರ ಆರಂಭಿಕ ಪ್ರತಿಭಟನೆಯ ನಂತರ ಜುಲೈ 26 ರಿಂದ ಅನಿರ್ದಿಷ್ಟ ಮುಷ್ಕರ ನಡೆಸಲು ನಿರ್ಧರಿಸಿದ್ದರು.

ಇದನ್ನು ಬಗ್ಗುಬಡಿಯಲು ಕೇಂದ್ರ ಸರಕಾರ ಜೂನ್ 30ರಂದು ‘ಅಗತ್ಯ ರಕ್ಷಣಾ ಸೇವೆಗಳ ಸುಗ್ರೀವಾಜ್ಞೆ 2021’ನ್ನು ಜಾರಿ ಮಾಡಿದೆ. ಇದನ್ನು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಬಲವಾಗಿ ಖಂಡಿಸಿದೆ. ರಕ್ಷಣಾ ಉತ್ಪಾದನೆಯನ್ನು ಖಾಸಗೀಕರಿಸುವ ಮತ್ತು ವಿದೇಶಿ ಕಂಪನಿಗಳಿಗೆ ಇದರಲ್ಲಿ ಪ್ರವೇಶಕ್ಕೆ ಅವಕಾಶ ಕೊಡುವ ದೇಶ-ವಿರೋಧಿ ಕ್ರಮಗಳ ವಿರುದ್ಧ ತೀವ್ರ ಹೋರಾಟಕ್ಕೆ ಇಳಿದಿರುವ ರಕ್ಷಣಾ ವಲಯದ ನೌಕರರ ಒಕ್ಕೂಟಗಳ ಜಂಟಿ ವೇದಿಕೆಯ ಐಕ್ಯ ಹೋರಾಟಗಳಿಗೆ ದೇಶದ ಸಮಸ್ತ ಕಾರ್ಮಿಕ ಆಂದೋಲನ ಸಂಪೂರ್ಣ ಬೆಂಬಲವನ್ನು ಕೊಡುತ್ತದೆ ಎಂದಿರುವ ಸಿಐಟಿಯು, ಈ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಮತ್ತು ಯುದ್ಧಸಾಮಗ್ರಿಗಳ ಕಾರ್ಖಾನೆಗಳ ಕಾರ್ಪೊರೇಟೀಕರಣದ ವಿನಾಶಕಾರಿ ನಡೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *