ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ಕ್ಕೆ ರಾಜ್ಯಪಾಲರು ಸಹಿ

ಬೆಂಗಳೂರು: ರಾಜ್ಯಪಾಲರು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ಕ್ಕೆ ಸಹಿ ಹಾಕಿದ್ದೂ, ಈ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳ ಪಾಲಿಗೆಯನ್ನು 7 ಪಾಲಿಕೆಗಳಿಗಿಂತ ಹೆಚ್ಚಿಲ್ಲದಂತೆ ನಗರ ಪಾಲಿಕೆ ರಚಿಸುವ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸಿಕ್ಕಿದೆ.

ಬೆಂಗಳೂರಿನ ಶಾಸಕರು ವಿಧಾನಸಭೆಯಲ್ಲಿ ವಿಧೇಯಕವನ್ನು ಸರ್ಕಾರ ಮಂಡಿಸಿದಾಗ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನಂತರ ಜಂಟಿ ಆಯ್ಕೆ ಸಮಿತಿಗೆ ಇದನ್ನು ವಹಿಸಲಾಗಿತ್ತು.

ಈ ಸಮಿತಿಯ ಶಿಫಾರಸುಗಳೊಂದಿಗೆ ತಿದ್ದುಪಡಿಯ ರೂಪದಲ್ಲಿ ಮಂಡನೆಯಾದ ವಿಧೇಯಕವನ್ನು ಮಾರ್ಚ್ ನಲ್ಲಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿತ್ತು.

ಇದನ್ನೂ ಓದಿ: ಸುಂಕ-ದಾಳಿ: ಬರಿದೇ ಟ್ರಂಪ್ ‘ಹುಚ್ಚುತನ’ ವಲ್ಲ!

ರಾಜ್ಯಪಾಲರು ಸಹಿಗೆ ಅದನ್ನು ಕಳುಹಿಸಿದ್ದು, ಸರ್ಕಾರದಿಂದ ಕೆಲವು ಸ್ಪಷ್ಟನೆಯನ್ನು ಬಯಸಿದ್ದ ರಾಜ್ಯಪಾಲರು ಇದೀಗ ಅಂತಿಮವಾಗಿ ವಿಧೇಯಕಕ್ಕೆ ಸಹಿ ಹಾಕಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಸಮನ್ವಯ ಮತ್ತು ಮೇಲ್ವಿಚಾರಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ಗರಿಷ್ಠ 7 ನಗರ ಪಾಲಿಕೆಗಾಗಿ ವಿಭಜಿಸುವ ಅವಕಾಶ, ವಾರ್ಡ್ ಸಮಿತಿಗಳನ್ನು ನಗರಾಡಳಿತದ ಮೂಲ ಘಟಕಗಳನ್ನಾಗಿಸುವುದನ್ನು ಈ ವಿಧೇಧಯಕ ಒಳಗೊಂಡಿದೆ. ಈ ಹೊಸ ಕಾಯ್ದೆಗೆ ರಾಜ್ಯ ಸರ್ಕಾರ ರಾಜ್ಯ ಪತ್ರ ಪ್ರಕಟಿಸಲಿದೆ.

ಇದನ್ನೂ ನೋಡಿ: ವಚನಾನುಭವ – 27| ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ | ಅಕ್ಕ ಮಹಾದೇವಿ ವಚನ Janashakthi Media

Donate Janashakthi Media

Leave a Reply

Your email address will not be published. Required fields are marked *