ತಿರುವನಂತಪುರಂ: ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಕೇರಳ ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಮನಿರ್ದೇಶನ ಮಾಡಿದ್ದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಸುಧಿ ಸದನ್ ಎಂಬಾತನನ್ನು ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳಲ್ಲಿ ಈತ ಒಬ್ಬ ಎಂದು ಆರೋಪಿಸಲಾಗಿದೆ.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತನಾಗಿರುವ ಸುಧಿ ಸದನ್‌ನನ್ನು, ರಾಜ್ಯಪಾಲ ಆರಿಫ್ ಖಾನ್ ನಾಮನಿರ್ದೇಶನ ಮಾಡಿದ್ದರು. ಅವರು ನಾಲ್ವರು ವಿದ್ಯಾರ್ಥಿ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಿದ್ದರು. ಆದರೆ ಸುಧಿಯನ್ನು ಬಂಧಿಸಿದ ನಂತರ ರಾಜ್ಯಪಾಲರು ಅಂತರ ಕಾಪಾಡಿಕೊಂಡಿದ್ದು, ತನಗೆ ಸುಧಿಯನ್ನು ‘ವೈಯಕ್ತಿಕವಾಗಿ’ ತಿಳಿದಿಲ್ಲ ಎಂದು ಹೇಳಿದ್ದಾರೆ. ಕೇರಳ
ಪಂದಳಂ ಎನ್‌ಎಸ್‌ಎಸ್ ಕಾಲೇಜಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಎಬಿವಿಪಿ ಕಾರ್ಯಕರ್ತರಾದ ಸುಧಿ ಮತ್ತು ವಿಷ್ಣು ಅವರನ್ನು ಪಂದಳಂ ಪೊಲೀಸರು ಬಂಧಿಸಿದ್ದಾರೆ. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ರಾಜ್ಯಪಾಲರ ವಿರುದ್ಧ ಬ್ಯಾನರ್ ಕಟ್ಟಿದ್ದು, ಇದಕ್ಕೆ ಎಬಿವಿಪಿ ಪ್ರತಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ಪರಿಸ್ಥಿತಿ ಉಲ್ಬಣಗೊಂಡು ಡಿಸೆಂಬರ್ 21ರಂದು ಕಾಲೇಜಿನಲ್ಲಿ ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ಎಸ್‌ಎಫ್‌ಐ ಮತ್ತು ಎಬಿವಿಪಿ ಕಾರ್ಯಕರ್ತರು ಘರ್ಷಣೆ ನಡೆಸಿದ್ದರು. ಕೇರಳ
ಇದನ್ನೂ ಓದಿ: ಜನವರಿ 10 ರಿಂದ ದೇಶದಾತ್ಯಂತ RSS & BJP ವಿರುದ್ಧ ಮನೆ ಮನೆ ಭೇಟಿ ಮತ್ತು ಕರಪತ್ರ ವಿತರಣೆ – ಎಸ್‌ಕೆಎಂ
ಈ ಸಂಘರ್ಷದಲ್ಲಿ ವಿಕಲಾಂಗ ವ್ಯಕ್ತಿ ಸೇರಿದಂತೆ ಏಳು ಜನರಿಗೆ ಗಾಯಗಳಾಗಿತ್ತು. ಈ ಘಟನೆಯ ನಂತರ ಪಂದಳಂನಲ್ಲಿರುವ ಆರ್‌ಎಸ್‌ಎಸ್ ಕಚೇರಿ ಮತ್ತು ಎಬಿವಿಪಿ ಕಾರ್ಯಕರ್ತನ ಮನೆಯನ್ನೂ ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಸುಧಿ ಮತ್ತು ವಿಷ್ಣು ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯಪಾಲ ಆರಿಫ್ ಖಾನ್, “ನನಗೆ ಆ ವ್ಯಕ್ತಿ ಪರಿಚಯವಿಲ್ಲ. ನಾನು ಶಿಫಾರಸುಗಳ ಹಿನ್ನೆಲೆಯಲ್ಲಿ ಅವರನ್ನು ನಾಮನಿರ್ದೇಶನ ಮಾಡಿದ್ದೇನೆ. ಅವರನ್ನು ಪ್ರತ್ಯೇಕವಾಗಿ ತಿಳಿದಿಲ್ಲ” ಎಂದು ಹೇಳಿದ್ದಾರೆ. ಆದರೆ ಅವರನ್ನು ನಾಮನಿರ್ದೇಶನ ಮಾಡಲು ತನಗೆ ಶಿಫಾರಸು ನೀಡಿದವರು ಯಾರು ಎಂಬುದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ. ಕೇರಳ
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ನವೆಂಬರ್ 30 ರಂದು ಸೆನೆಟ್‌ಗೆ 17 ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದರು. ಮಹತ್ವದ ಈ ನಾಮನಿರ್ದೇಶನಗಳಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಶ್ಯಾಮ್ ಲಾಲ್ ಮತ್ತು ಕವಿತಾ ಒಬಿ ಮತ್ತು ಶಾಲಾ ಶಿಕ್ಷಕರಾಗಿರುವ ಪಿ.ಎಸ್. ಗೋಪಕುಮಾರ್ ಮತ್ತು ಎಸ್.ಮಿನಿ ವೇಣುಗೋಪಾಲ್ ಅವರನ್ನು ಆಯ್ಕೆ ಮಾಡಿದ್ದರು. ಅಲ್ಲದೆ ವಿದ್ಯಾರ್ಥಿಗಳಾದ ಮಾಳವಿಕಾ ಉದಯನ್ (ಲಲಿತಕಲೆ), ಸುಧಿ ಸದನ್ (ಕ್ರೀಡೆ), ಧ್ರುವಿನ್ ಎಸ್‌ಎಲ್ (ವಿಜ್ಞಾನ), ಮತ್ತು ಅಭಿಷೇಕ್ ಡಿ ನಾಯರ್ (ಮಾನವಶಾಸ್ತ್ರ) ಅವರನ್ನೂ ನಾಮನಿರ್ದೇಶನ ಮಾಡಿದ್ದರು.
ವಿಡಿಯೊ ನೋಡಿ: ತೀವ್ರಗೊಂಡ ಕರವೇ ಕನ್ನಡ ನಾಮಫಲಕ ಹೋರಾಟ Janashakthi Media