ಸರ್ಕಾರಿ ಹಾಸ್ಟೆಲ್, ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಹೋರಾಟಕ್ಕೆ ಜಯ: ಕನಿಷ್ಠ ವೇತನ ಹೆಚ್ಚಳ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ

ಹಾವೇರಿ: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಜಿಲ್ಲಾ ಸಂಘಟನಾ ಸಮಿತಿ ಸಭೆಯಲ್ಲಿ ಕನಿಷ್ಠ ವೇತನ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ತೀರ್ಮಾನವನ್ನು ಸ್ವಾಗತಿಸಿ, ಹಾಸ್ಟೆಲ್ ಹೊರಗುತ್ತಿಗೆ ನೌಕರರರು ಪರಸ್ಪರ ಸಿಹಿ ವಿತರಣೆಯ ಮೂಲಕ ವಿಜಯೋತ್ಸವ ಸಂಭ್ರಮಾಚರಣೆ ಮಾಡಿದರು.

ಸಭೆಯನ್ನು ಉದ್ದೇಶಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರಕ್ಕೆ ಕಾರ್ಮಿಕ ಇಲಾಖೆಯು ಕನಿಷ್ಟ ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಕಳಿಸಿದ್ದು ಸ್ವಾಗತರ್ಹಾ. ಈ ಕೂಡಲೇ ಕನಿಷ್ಠ ವೇತನ ಹೆಚ್ಚಳವನ್ನು ತೀರ್ಮಾನದಂತೆ ಜಾರಿ ಮಾಡಲು ಮುತುವರ್ಜಿಯಿಂದ ಇಲಾಖೆಗಳು ಮುಂದಾಗಬೆಕೆಂದು ಒತ್ತಾಯಿಸಿದರು.

ಇದನ್ನು ಓದಿ :ಬಾಲಕಿ ಹತ್ಯೆಗೈದ ಆರೋಪಿಯ ‘ಎನ್ ಕೌಂಟರ್’ ಪ್ರಕರಣ ಸಿಐಡಿ ತನಿಖೆಗೆ

ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಶಾಂತಕ್ಕ ಗಡ್ಡಿಯವರ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರು ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರು, ಕಾವಲುಗಾರರು, ಡಿ.ಗ್ರೂಪ್ ಸಿಬ್ಬಂದಿಗಳು ಕಳೆದ 15-20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಾಕಷ್ಟು ಹೋರಾಟ ಮಾಡಿದ ಪ್ರತಿಫಲವಾಗಿ ರಾಜ್ಯ ಸರ್ಕಾರ ದಿನಾಂಕ:11-04-2025 ರಂದು ಕಾರ್ಮಿಕ ಇಲಾಖೆಯು 4 ವಲಯಗಳ ಬದಲಾಗಿ 3 ವಲಯಗಳನ್ನು ಮಾಡಿದೆ. ಕನಿಷ್ಟ ವೇತನ 31 ಸಾವಿರ ಕೇಳಿದ್ದಕ್ಕೆ 25,714 ರೂ. ಗಳನ್ನು ನಿಗದಿ ಮಾಡಿ ಗೆಜೆಟಿಯರ್ ನೋಟಿಪಿಕೇಷನ್ ಗೆ ಕಾರ್ಮಿಕ ಇಲಾಖೆ ಮೂಲಕ ರಾಜ್ಯ ಸರ್ಕಾರಕ್ಕೆ ಕಳಿಸಿದೆ. ಇದನ್ನು ನಮ್ಮ ಸಂಘ ಸ್ವಾಗತಿಸುತ್ತದೆ. ಜೊತೆಗೆ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ಅಭಿನಂದನೆಗಳನ್ನು ತಿಳಿಸುತ್ತೇವೆ. ಸಂಘದ ಹೋರಾಟಕ್ಕೆ ಜಯ ಸಿಕ್ಕಿದೆ. ಈ ವಿಜಯೋತ್ಸವವನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಾಡುತ್ತಿದ್ದು ಇದರ ಭಾಗವಾಗಿ ಇಂದು ನಮ್ಮ ಜಿಲ್ಲೆಯಲ್ಲಿ ಮಾಡುತ್ತಿದ್ದೇವೆ ಎಂದರು. ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕನಿಷ್ಟ ವೇತನ 35 ಸಾವಿರ, ಸೇವಾ ಭದ್ರತೆ, ಕಾಯಂಗಾಗಿ ಕಳೆದ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದು ಇದರ ಬಗ್ಗೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಕಾಳಜಿ ವಹಿಸಬೇಕಾಗಿ ತಮ್ಮ ಮಾಧ್ಯಮದ ಮೂಲಕ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದರು.

ಇದನ್ನು ಓದಿ :ಚಿತ್ರದುರ್ಗ| ಉದ್ಯಮಿಗೆ ಜೈಲಲ್ಲಿರುವ ಕೊಲೆ ಆರೋಪಿಯಿಂದ ಜೀವ ಬೆದರಿಕೆ

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಮುಖಂಡರಾದ ಹೆಚ್. ಹೆಚ್. ನಾದಫ್, ಶಿವರಾಜ ಮಾರನಬೀಡಾ, ಶೋಭ ಸಿ ಡೊಳ್ಳೇಶ್ವರ, ಫಕ್ಕಿರೇಶ ಪೂಜಾರ, ಶೇಖಪ್ಪ ಮುಗಳಹಳ್ಳಿ, ಕುಮಾರ ಮನ್ನಂಗಿ, ಪ್ರಕಾಬುರಡಿಕಟ್ಟಿ, ಸುನೀಲ್ ಕುಮಾರ್ ಎಲ್, ಮಾಲತೇಶ್ ಮಾಕನೂರ, ಮಲ್ಲವ್ವ ಕೆ, ಆರ್, ರತ್ನ ಬುರಡಿಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *