ಗಂಗಾವತಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಈಶ್ವರ ಸವಡಿ ಇವರ ನಿರ್ಲಕ್ಷ್ಯತೆ , ಭ್ರಷ್ಟಾಚಾರದಿಂದಾಗಿ ಗಂಗಾವತಿ ತಾಲೂಕಿನ ಅರಳಹಳ್ಳಿ ಗ್ರಾಮದ ತಾಯಿ ಹಾಗೂ ಮಗು ಮೃತಪಟ್ಟಿದ್ದಾರೆ. ಈ ಘಟನೆಯನ್ನು ಕರ್ನಾಟಕ ರೈತ ಸಂಘ (KRS-AIKKS) ತೀವ್ರವಾಗಿ ಖಂಡಿಸಿದೆ.
ತುಂಬು ಗರ್ಭಿಣೆ ಅಂಬಿಕಾ ಗಂ.ಯಮನಪ್ಪ ಹರಿಜನ ಎನ್ನುವ ಮಹಿಳೆಯನ್ನು ಅವರ ಕುಟುಂಬದವರು ದಿನಾಂಕ 02-11-2013 ರಂದು ಗುರುವಾರ ಬೆಳಿಗ್ಗೆ 11 30 ರ ಸುಮಾರಿಗೆ ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ಅಡ್ಮಿಂಟ್ ಮಾಡಿದ್ದಾರೆ. ಈ ಸರ್ಕಾರಿ ಆಸ್ಪತ್ರೆಯ ಪರಂಪರೆ ಅಥವಾ ಆ ಲಿಖಿತ ಕಾಯ್ದೆಯ ಎನ್ನುವಂತೆ. ಕೇಳಿದಷ್ಟು ಹಣ ಕೊಟ್ಟರೆ ಮಾತ್ರ ಚಿಕಿತ್ಸೆ ದೊರೆಯುತ್ತದೆ.
ಅಂಬಿಕಾಳ ಕುಟುಂಬಕ್ಕೆ ಹಣ ಕೊಡಲು ಸಾಧ್ಯವಾಗಿಲ್ಲ ಈ ಕಾರಣದಿಂದ ಖಾಸಗಿ ಕ್ಲಿನಿಕ್‌ನಲ್ಲಿ ಸ್ಕ್ಯಾನಿಂಗ್ ಮಾಡಿಸಲು ಚೀಟಿ ಬರೆದುಕೊಟ್ಟಿದ್ದಾರೆ. ಖಾಸಗೀ ಕ್ಲಿನಿಕ್‌ನಲ್ಲಿ 900 ರೂ ಖರ್ಚು ಮಾಡಿ ಸ್ಕ್ಯಾನಿಂಗ್ ರಿಪೋರ್ಟ್ ಮಾಡಿಸಿದ್ದಾರೆ. ಅಂಬಿಕಳನ್ನು ಸಂಜೆಯವರಿಗೆ ಆಸ್ಪತ್ರೆಯಲಿಟ್ಟುಕೊಂಡು ಸಂಜೆ 6 ಗಂಟೆ ಸುಮಾರಿಗೆ ಕೊಪ್ಪಳ ಜಾಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಗು ಹೊಟ್ಟೆಯಲ್ಲಿ ತೀರಿಕೊಂಡಿದ್ದರಿಂದ ಗರ್ಭಿಣೆ ಮಹಿಳೆ ಅಂಬಿಕಾ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷರಾದ ಡಿ.ಹೆಚ್.ಪೂಜಾರ ಆರೋಪಿಸಿದ್ದಾರೆ.
ತಾಯಿ ಮಗುವಿನ ಸಾವಿಗೆ ಕಾರಣವಾಗಿರುವ ಗಂಗಾವತಿ ತಾಲ್ಲೂಕ ಆರೋಗ್ಯ ಅಧಿಕಾರಿ ಈಶ್ವರ ಸವಡಿ ಇವರ ಮೇಲೆ ಕ್ರಿಮಿನ್ ಕೇಸ್ ದಾಖಲಿಸಿ ಬಂಧಿಸಿ, ಸೇವೆಯಿಂದ ವಜಾಗೊಳಿಸಬೇಕು ಮತ್ತು ಪ್ರಾಣ ಕಳೆದುಕೊಂಡಿರುವ ಕುಟುಂಬಕ್ಕೆ 20 ಲಕ್ಷ ಪರಿಹಾರ ಕೊಡಬೇಕೆಂದು ಕರ್ನಾಟಕ ರೈತ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.
ಇದನ್ನೂ ಓದಿ: ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಸಂಸದ ಡಿ.ವಿ ಸದಾನಂದ ಗೌಡ
ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರ ಮತ್ತು ಬಡ ರೋಗಿಗಳ ಸಾವಿನ ಕುರಿತು ನಮ್ಮ ಸಂಘಟನೆ ಒಂದು ವರ್ಷಗಳಿಂದ ಸರ್ಕಾರಕ್ಕೆ, ಲೋಕಾಯುಕ್ತರಿಗೆ ಮತ್ತು ಆರೋಗ್ಯ ಸಚಿವರಿಗೆ ಅನೇಕ ದೂರುಗಳನ್ನು ಸಲ್ಲಿಸಿದೆ. ಹಾಗೂ ಗಂಗಾವತಿಯ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸರ್ಕಾರಕ್ಕೆ ದೂರು ನೀಡಿದ್ದರು, ಈಶ್ವರ ಸವಡಿ ರಾಜಕೀಯ ಪ್ರಭಾವವೋ ಅಥವಾ ಮೇಲಧಿಕಾರಿಗಳಿಗೆ ತಿಂಗಳ ಮಾಮೂಲಿ ಮುಟ್ಟಿಸುತ್ತಿರುವ ಕಾರಣವೋ ಏನು ಇವರ ಮೇಲೆ ಕಾನೂನ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಗಂಗಾವತಿ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಅಧಿಕಾರಿ ನಿರ್ಲಕ್ಷ್ಯತೆಯಿಂದ ಇನ್ನೆಷ್ಟು ಜೀವಗಳು ಬಲಿಯಾಗುತ್ತವೋ ಎಂದು ಆಂತಕವನ್ನು ವ್ಯಕ್ತಪಡಿಸಿದರು.
ಅಂಬಿಕಾ ಮತ್ತು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿರುವ ಇತರೆ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ರೈತ ಸಂಘ ಮನವಿಮಾಡಿಕೊಂಡಿದೆ.
ವಿಡಿಯೋ ನೋಡಿ: 9 ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ನೌಕರರ ಪ್ರತಿಭಟನೆ – ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆJanashakthi Media