ಬೆಂಗಳೂರು: ಕೊರೊನಾ ಸೋಂಕು ಪರೀಕ್ಷೆಯ ಸಂದರ್ಭದಲ್ಲಿ ಎಲ್ಲರಿಗೂ ಸಿಟಿ-ಸ್ಕ್ಯಾನ್ ಅಥವಾ ಎಕ್ಸ್-ರೇ ಅಗತ್ಯವಾಗಿ ಹಾಗಾಗಿ ಸರಕಾರವು ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ಅದಕ್ಕಾಗಿ ನಿರ್ದಿಷ್ಟವಾದ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಯಾವುದೇ ಖಾಸಗಿ ಆಸ್ಪತ್ರೆಗಳು ಸಿಟಿ-ಸ್ಕ್ಯಾನ್ ಮತ್ತು ಡಿಜಿಟಲ್ ಎಕ್ಸ್-ರೇಗೆ ಕ್ರಮವಾಗಿ 1,500 ರೂಪಾಯಿ ಮತ್ತು 250 ರೂಪಾಯಿಗಳನ್ನು ಪಡೆಯಬೇಕೆಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಇತ್ತೀಚೆಗೆ ಅನೇಕ ಪ್ರಕರಣಗಳಲ್ಲಿ ಕೊರೊನಾ ಸೋಂಕು ದೃಢಪಡಿಸಲು ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ ಎಕ್ಸ್ -ರೇ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ/ಲ್ಯಾಬ್ ಗಳಲ್ಲಿ ಸಿಟಿ ಸ್ಕ್ಯಾನ್ ಗೆ ಗರಿಷ್ಠ ₹1,500 ಹಾಗೂ ಡಿಜಿಟಲ್ ಎಕ್ಸ್ – ರೇಗೆ ಗರಿಷ್ಠ ₹250 ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.
— Dr Sudhakar K (@mla_sudhakar) May 7, 2021
ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರ ಪರೀಕ್ಷೆಯ ಸಂದರ್ಭದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲು ಮುಂದಾಗಿರುವ ಆಸ್ಪತ್ರೆಗಳ ದಂಧೆಗೆ ಕಡಿವಾಣ ಹಾಕಿರುವ ಸರಕಾರವು ಅದಕ್ಕಾಗಿ ನಿರ್ದಿಷ್ಠವಾದ ದರಪಟ್ಟಿ ಪ್ರಕಟಿಸಿದೆ.
ಹೆಚ್ಚುವರಿಯಾಗಿ ಹಣ ವಸೂಲಿ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಉಚಿತವಾಗಿದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳುವಂತೆಯೂ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.