ರಾಯಚೂರು: ಕಾಲುವೆ ಬಿದ್ದ ಗೂಡ್ಸ್ ಆಟೋ – ಹಲವರಿಗೆ ಗಾಯ

Please follow and like us:
ರಾಯಚೂರು : ಕೂಲಿ ಕಾರ್ಮಿಕರನ್ನು ಹೊತ್ತುಯುತ್ತಿದ್ದ ಗೂಡ್ಸ್ ಆಟೋ ಒಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆ ಬಿದ್ದ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ದೇವದುರ್ಗದ ಎನ್‌ಆರ್‌ಸಿಬಿ ಕಾಲುವೆ ಬಳಿ ಕೂಲಿ ಕಾರ್ಮಿಕರನ್ನು ಹೊತ್ತುಯುತ್ತಿದ್ದ ಗೂಡ್ಸ್ ಆಟೋ ಒಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆ ಬಿದ್ದ ಪರಿಣಾಮ ಹಲವರಿಗೆ ಗಾಯಗಳಾಗಿರುವ ಘಟನೆ ಸಂಭವಿಸಿದೆ.

ಇದನ್ನೂ ಓದಿ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಇಬ್ಬರು‌ ಯುವಕರು ಅರೆಸ್ಟ್

ಹೌದು ಕೂಲಿ ಕಾರ್ಮಿಕರ ಸಮೇತ ಕಾಲುವಿಗೆ ಬಿದ್ದು ದುರಂತ ಸಂಭವಿಸಿದೆ. ನಿನ್ನೆ ಸಂಜೆ ದೇವದುರ್ಗದ ಎನ್ ಆರ್ ಬಿ ಸಿ ಕಾಲುವೆಯಲ್ಲಿ ಈ ಒಂದು ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಆಟೋ ಕಾಲುವೆಗೆ ಬಿದ್ದಿದೆ. ಕಾಲುವೆಯೊಳಗೆ ಚಾಲಕ ಸೇರಿ 10 ಕೂಲಿ ಕಾರ್ಮಿಕರು ಸಿಲುಕಿ ಒದ್ದಾಟ ನಡೆಸಿದ್ದಾರೆ.

ಕೂಡಲೇ ಸ್ಥಳೀಯರು ಆಟೋದಲ್ಲಿ ಇದ್ದವರ ರಕ್ಷಣೆಗೆ ಧಾವಿಸಿದ್ದಾರೆ. ಹಗ್ಗ, ಕಟ್ಟಿ, ಗೂಡ್ಡ ಆಟೋವನ್ನು ಮೇಲೆ ಎತ್ತಿದ್ದಾರೆ. ಗೂಡ್ಸ್ ಆಟೋಗಳಲ್ಲಿ ಪ್ರಯಾಣಿಕರನ್ನು ಕರೆದೋಯುತ್ತಿದ್ದ ಚಾಲಕರ ವಿರುದ್ಧ ಇದೀಗ ಸ್ಥಳೀಯರು ಕಿಡಿಕಾರಿದ್ದು, ಗೂಡ್ಸ್ ಆಟೋ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ : ಮರಕುಂಬಿ ಪ್ರಕರಣ ; 97 ಮಂದಿಗೆ ಜಾಮೀನು | ಜಾಮೀನನ್ನು ಸಂಭ್ರಮಸಲು ಸಿದ್ದತೆ ನಡೆದಿತ್ತು – ಮರಕುಂಬಿ ಬಸವರಾಜ

Please follow and like us:
Donate Janashakthi Media

Leave a Reply

Your email address will not be published. Required fields are marked *