ಕಾಮನ್​ವೆಲ್ತ್​ ಕ್ರೀಡೆ ಅದ್ಧೂರಿ ತೆರೆ: 61 ಪದಕ ಗೆಲ್ಲುವ ಮೂಲಕ ನಾಲ್ಕನೇ ಸ್ಥಾನಕ್ಕೇರಿದ ಭಾರತ

ಬರ್ಮಿಂಗ್‌​ಹ್ಯಾಮ್: ಕಾಮನ್‌ವೆಲ್ತ್-2022 ಕ್ರೀಡಾ ಕೂಟಕ್ಕೆ ಅದ್ಧೂರಿ ತೆರೆ ಬಿದ್ದಿದ್ದು, ಭಾರತವು ಅಂತಿಮವಾಗಿ 61 ಪದಕ ಪಡೆದುಕೊಳ್ಳುವ ಮೂಲಕ 4ನೇ ಸ್ಥಾನವನ್ನು ಅಲಂಕರಿಸಿದೆ. ಭಾರತೀಯ ಕಾಲ ಮಾನದ ಪ್ರಕಾರ ಸೋಮವಾರ ತಡರಾತ್ರಿ ಕ್ರೀಡಾಕೂಟಕ್ಕೆ ವಿದ್ಯಕ್ತ ತೆರೆಬಿದ್ದಿದೆ.

ಬಾಂಗ್ರಾದ ಬೀಟ್‌ ಗಳಿಂದ ಹಿಡಿದು ‘ಅಪಾಚೆ ಇಂಡಿಯನ್’ ನ ಪವರ್-ಪ್ಯಾಕ್ಡ್ ಪ್ರದರ್ಶನದವರೆಗೆ, ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. 12 ದಿನಗಳು ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ ಭಾರೀ ವರ್ಣರಂಚಿತವಾಗಿ ತೆರೆ ಕಂಡಿತು.

ಪದಕಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾವು 1ನೇ ಸ್ಥಾನದಲ್ಲಿದೆ. ಈ ಮೂಲಕ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿದ್ದ ಕಾಮನ್‌ವೆಲ್ತ್ 2022ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಅಂತಿಮ ವಿದಾಯ ಕಾರ್ಯಕ್ರಮದಲ್ಲಿ ಭಾರತದ ಕ್ರೀಡಾಪಟುಗಳಾದ ಅಚಂತ ಶರತ್‌ ಕಮಲ್‌ ಮತ್ತು ಬಾಕ್ಸರ್‌ ನಿಖತ್‌ ಜರೀನ್‌ ಭಾರತದ ಬಾವುಟ ಹಿಡಿದು ಸಾಗಿದರು. ಮುಂದಿನ ಕಾಮನ್‌ವೆಲ್ತ್ ಕ್ರೀಡಾಕೂಟವು 2026ರಲ್ಲಿ ಆಸ್ಟ್ರೇಲಿಯದ ವಿಕ್ಟೋರಿಯದಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ, ಆತಿಥೇಯ ಇಂಗ್ಲೆಂಡ್ ಮತ್ತು ಕೆನಡಾ ದೇಶಗಳು ಪದಕಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. 72 ದೇಶಗಳ ಕ್ರೀಡಾಪಟುಗಳು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಬರೋಬ್ಬರಿ 61 ಪದಕಗಳನ್ನು ಗೆಲ್ಲುವ ಮೂಲಕ ಈ ಬಾರಿ ಕಾಮನ್​ವೆಲ್ತ್ ನಲ್ಲಿ ಭಾರತವು 4ನೇ ಸ್ಥಾನವನ್ನು ಪಡೆದುಕೊಂಡರೆ, 178 ಪದಕಗಳನ್ನು ಗೆದ್ದುಗೊಂಡಿರುವ ಆಸ್ಟ್ರೇಲಿಯಾಗೆ 67 ಚಿನ್ನ, 57 ಬೆಳ್ಳಿ, 54 ಕಂಚು ಲಭಿಸಿದೆ. ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ 176 ಪದಗಳನ್ನು ಪಡೆದುಕೊಂಡಿದ್ದು, 57 ಚಿನ್ನ, 66 ಬೆಳ್ಳಿ, 53 ಕಂಚು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೂರನೇ ಸ್ಥಾನದಲ್ಲಿರುವ ಕೆನಡಾ 26 ಚಿನ್ನ, 32 ಬೆಳ್ಳಿ, 34 ಕಂಚು ಪಡೆದುಕೊಂಡು 92 ಪದಕಗಳನ್ನು ಗೆದ್ದುಕೊಂಡಿದೆ.

ಕೂಟದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಕ್ರೀಡಾಪಟುಗಳು

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳೊಂದಿಗೆ ಒಟ್ಟು 61 ಪದಕಗಳನ್ನು ಗೆದ್ದಿದೆ. ಇವುಗಳ ಸಂಪೂರ್ಣ ಪಟ್ಟಿ ಈ ಕೆಳಗೆ ನೀಡಲಾಗಿದೆ;

ಕುಸ್ತಿ

ಸಾಕ್ಷಿ ಮಲಿಕ್– ಚಿನ್ನ
ಬಜರಂಗ್ ಪುನಿಯಾ– ಚಿನ್ನ
ವಿನೇಶ್ ಫೋಗಟ್– ಚಿನ್ನ
ರವಿ ಕುಮಾರ್ ದಹಿಯಾ– ಚಿನ್ನ
ದೀಪಕ್ ಪುನಿಯಾ– ಚಿನ್ನ
ನವೀನ್– ಚಿನ್ನ
ಅಂಶು ಮಲಿಕ್– ಬೆಳ್ಳಿ
ಪೂಜಾ ಸಿಹಾಗ್ – ಕಂಚು
ದಿವ್ಯಾ ಕಕ್ರಾನ್– ಕಂಚು
ಪೂಜಾ ಗೆಹ್ಲೋಟ್– ಕಂಚು
ಮೋಹಿತ್ ಗ್ರೆವಾಲ್– ಕಂಚು

ಅಥ್ಲೆಟಿಕ್ಸ್

ಎಲ್ದೋಸ್ ಪಾಲ್– ಪುರುಷರ ಟ್ರಿಪಲ್ ಜಂಪ್- ಚಿನ್ನ
ಎಂ ಶ್ರೀಶಂಕರ್– ಪುರುಷರ ಲಾಂಗ್ ಜಂಪ್– ಬೆಳ್ಳಿ
ಪ್ರಿಯಾಂಕಾ ಗೋಸ್ವಾಮಿ– ಮಹಿಳೆಯರ 10 ಕಿಮೀ ಓಟ– ಬೆಳ್ಳಿ
ಅವಿನಾಶ್ ಸಾಬಳೆ– ಪುರುಷರ 3000ಮೀ ಸ್ಟೀಪಲ್‌ ಚೇಸ್– ಬೆಳ್ಳಿ
ಅಬ್ದುಲ್ಲಾ ಅಬೂಬಕರ್– ಪುರುಷರ ಟ್ರಿಪಲ್ ಜಂಪ್– ಬೆಳ್ಳಿ
ಸಂದೀಪ್ ಕುಮಾರ್– ಪುರುಷರ 10 ಕಿಮೀ ಓಟ– ಕಂಚು
ಅಣ್ಣು ರಾಣಿ– ಮಹಿಳೆಯರ ಜಾವೆಲಿನ್ ಥ್ರೋ– ಕಂಚು
ತೇಜಸ್ವಿನ್ ಶಂಕರ್– ಪುರುಷರ ಹೈ ಜಂಪ್– ಕಂಚು

ವೇಟ್​ ಲಿಫ್ಟಿಂಗ್

ಜೆರೆಮಿ ಲಾಲ್ರಿನ್ನುಂಗಾ– ಪುರುಷರ 67 ಕೆ.ಜಿ– ಚಿನ್ನ
ಅಚಿಂತಾ ಶೆಯುಲಿ– ಪುರುಷರ 73 ಕೆ.ಜಿ– ಚಿನ್ನ
ಮೀರಾಬಾಯಿ ಚಾನು– ಮಹಿಳೆಯರ 49 ಕೆ.ಜಿ– ಚಿನ್ನ
ಬಿಂದ್ಯಾರಾಣಿ ದೇವಿ– ಮಹಿಳೆಯರ 55 ಕೆ.ಜಿ– ಬೆಳ್ಳಿ
ವಿಕಾಸ್ ಠಾಕೂರ್– ಪುರುಷರ 96 ಕೆ.ಜಿ– ಬೆಳ್ಳಿ
ಸಂಕೇತ್ ಸರ್ಗರ್– ಪುರುಷರ 55 ಕೆ.ಜಿ– ಬೆಳ್ಳಿ
ಗುರುದೀಪ್ ಸಿಂಗ್– ಪುರುಷರ 109ಕೆ.ಜಿ– ಕಂಚು
ಲವ್‌ ಪ್ರೀತ್‌ ಸಿಂಗ್– ಪುರುಷರ 109 ಕೆ.ಜಿ– ಕಂಚು
ಹರ್ಜಿಂದರ್ ಕೌರ್– ಮಹಿಳೆಯರ 71 ಕೆ.ಜಿ– ಕಂಚು
ಗುರುರಾಜ ಪೂಜಾರಿ– ಪುರುಷರ 61 ಕೆ.ಜಿ– ಕಂಚು

ಬಾಕ್ಸಿಂಗ್

ಅಮಿತ್ ಪಂಗಲ್– ಪುರುಷರ 51 ಕೆ.ಜಿ– ಚಿನ್ನ
ನೀತು ಘಂಘಸ್ – ಮಹಿಳೆಯರ 48 ಕೆ.ಜಿ– ಚಿನ್ನ
ನಿಖತ್ ಜರೀನ್ – ಮಹಿಳೆಯರ 50 ಕೆ.ಜಿ– ಚಿನ್ನ
ಸಾಗರ್ ಅಹ್ಲಾವತ್– ಪುರುಷರ 92 ಕೆ.ಜಿ– ಬೆಳ್ಳಿ
ಮೊಹಮ್ಮದ್ ಹುಸಾಮುದ್ದೀನ್– ಪುರುಷರ 57 ಕೆ.ಜಿ– ಕಂಚು
ಜೈಸ್ಮಿನ್– ಮಹಿಳೆಯರ 60 ಕೆ.ಜಿ– ಕಂಚು
ರೋಹಿತ್ ಟೋಕಾಸ್– ಪುರುಷರ 67 ಕೆ.ಜಿ– ಕಂಚು

ಜೂಡೋ

ತುಲಿಕಾ ಮಾನ್– ಮಹಿಳೆಯರ 78 ಕೆ.ಜಿ– ಬೆಳ್ಳಿ
ಸುಶೀಲಾ ದೇವಿ ಲಿಕ್ಮಾಬಮ್– ಮಹಿಳೆಯರ 48 ಕೆ.ಜಿ– ಬೆಳ್ಳಿ
ವಿಜಯ್ ಕುಮಾರ್ ಯಾದವ್– ಪುರುಷರ 60 ಕೆ.ಜಿ– ಕಂಚು

ಪವರ್‌ ಲಿಫ್ಟಿಂಗ್: ಸುಧೀರ್– ಪುರುಷರ ಹೆವಿವೇಟ್ – ಚಿನ್ನ

ಬ್ಯಾಡ್ಮಿಂಟನ್

ಪಿವಿ ಸಿಂಧು– ಸಿಂಗಲ್ಸ್– ಚಿನ್ನ
ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ– ಡಬಲ್ಸ್– ಚಿನ್ನ
ಲಕ್ಷ್ಯ ಸೇನ್– ಸಿಂಗಲ್ಸ್– ಚಿನ್ನ
ಬ್ಯಾಡ್ಮಿಂಟನ್ ಮಿಶ್ರ ತಂಡ– ಬೆಳ್ಳಿ
ಕಿಡಂಬಿ ಶ್ರೀಕಾಂತ್– ಸಿಂಗಲ್ಸ್– ಕಂಚು
ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್– ಡಬಲ್ಸ್– ಕಂಚು

ಟೇಬಲ್ ಟೆನಿಸ್

ಅಚಂತ ಶರತ್ ಕಮಲ್– ಸಿಂಗಲ್ಸ್– ಚಿನ್ನ
ಭಾವಿನಾ ಪಟೇಲ್– ಸಿಂಗಲ್ಸ್– ಚಿನ್ನ
ಶ್ರೀಜಾ ಅಕುಲಾ ಮತ್ತು ಅಚಂತ ಶರತ್ ಕಮಲ್– ಮಿಶ್ರ ಡಬಲ್ಸ್– ಚಿನ್ನ
ಅಚಂತ ಶರತ್ ಕಮಲ್, ಸತ್ಯನ್, ಸನಿಲ್ ಶೆಟ್ಟಿ ಹರ್ಮೀತ್ ದೇಸಾಯಿ– ಪುರುಷರ ತಂಡ– ಚಿನ್ನ
ಅಚಂತ ಮತ್ತು ಸತ್ಯನ್ ಜ್ಞಾನಶೇಖರನ್– ಡಬಲ್ಸ್– ಬೆಳ್ಳಿ
ಸೋನಾಲ್ ಪಟೇಲ್– ಸಿಂಗಲ್ಸ್– ಕಂಚು
ಸತ್ಯನ್ ಜ್ಞಾನಶೇಖರನ್– ಸಿಂಗಲ್ಸ್– ಕಂಚು

ಸ್ಕ್ವ್ಯಾಷ್

ಸೌರವ್ ಘೋಸಲ್–ಸಿಂಗಲ್ಸ್– ಕಂಚು
ದೀಪಿಕಾ ಪಲ್ಲಿಕಲ್ ಕಾರ್ತಿಕ್ ಮತ್ತು ಸೌರವ್ ಘೋಸಲ್– ಡಬಲ್ಸ್– ಕಂಚು

ಮಹಿಳಾ ಕ್ರಿಕೆಟ್ – ಬೆಳ್ಳಿ
ಪುರುಷರ ಹಾಕಿ – ಬೆಳ್ಳಿ
ಮಹಿಳಾ ಹಾಕಿ – ಕಂಚು

Donate Janashakthi Media

Leave a Reply

Your email address will not be published. Required fields are marked *