KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್-ಯುಗಾದಿ ಹಬ್ಬಕ್ಕೆ 2 ಸಾವಿರ ಹೆಚ್ಚುವರಿ ಬಸ್ ಗಳ ವ್ಯವಸ್ಥೆ

ಬೆಂಗಳೂರು :ಯುಗಾದಿ ಹಬ್ಬದ ಪ್ರಯುಕ್ತ ಕೆಎಸ್ ಆರ್ ಟಿಸಿಯಿಂದ ಎರಡು ಸಾವಿರ ಹೆಚ್ಚುವರಿ ಬಸ್ ಗಳು ಕಾರ್ಯಾಚರಣೆ ಮಾಡಲಿವೆ.

ಮಾರ್ಚ್ 28 ರಿಂದ 30 ರವರೆಗೆ ಹೆಚ್ಚುವರಿ ಬಸ್ ಗಳು ಸಂಚರಿಸಲಿದ್ದು, ಮೆಜೆಸ್ಟಿಕ್ ನಿಂದ ರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. KSRTCಯ ಸಾಮಾನ್ಯ ಸಾರಿಗೆ, ಐರಾವತ, ಸ್ಲೀಪರ್ ಕೋಚ್ ಸೇರಿ ಎಲ್ಲಾ ಐಷಾರಾಮಿ ಬಸ್ ಗಳು ಲಭ್ಯವಾಗಲಿವೆ. ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್, ಪೀಣ್ಯಾ ಬಸ್ ನಿಲ್ದಾಣದಿಂದ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ.

ಹಬ್ಬ ಮುಗಿದ ಬಳಿಕ ವಿಶೇಷ ಬಸ್ ಗಳ ಕಾರ್ಯಾಚರಣೆ ನಡೆಯಲಿದ್ದು,ಮಾರ್ಚ್ 31 ರಂದು ವಾಪಸ್ ಬರುವ ಪ್ರಯಾಣಿಕರಿಗೆ KSRTC ಬಸ್ ವ್ಯವಸ್ಥೆಯಿದೆ. ರಾಜ್ಯಾದ್ಯಂತ, ಹಾಗೂ ಅಂತರಾಜ್ಯದಿಂದಲೂ KSRTC ಬಸ್ ಗಳು ಲಭ್ಯವಾಗಲಿವೆ.

ಇದನ್ನೂ ಓದಿ:ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಬೇಡಿ: ಎನ್ ಚೆಲುವರಾಯಸ್ವಾಮಿ

ಎಲ್ಲಿಂದ ಎಲ್ಲಿಗೆ ಬಸ್ ಗಳ ಕಾರ್ಯಾಚರಣೆ:

1.ಮೆಜೆಸ್ಟಿಕ್

ಮೆಜೆಸ್ಟಿಕ್ to ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗೋಕರ್ಣ, ಕಾರವಾರ ಭಾಗ

ಮೆಜೆಸ್ಟಿಕ್ to ಉತ್ತರ ಕರ್ನಾಟಕದ ಹುಬ್ಬಳಿ,ಬೆಳಗಾವಿ, ದಾರವಾಡ, ವಿಜಯಪುರ,ಯಾದಗಿರಿ ಸೇರಿ ಇತರೆಡೆ

ಮೆಜೆಸ್ಟಿಕ್ To ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೆ ಬಸ್ ಗಳು ಲಭ್ಯ

2.ಸ್ಯಾಟಲೈಟ್ ಬಸ್ ನಿಲ್ದಾಣ : ಮೈಸೂರು ಭಾಗದ ಎಲ್ಲಾ ಕಡೆ ಬಸ್ ಗಳ ಕಾರ್ಯಾಚರಣೆ

ಮಂಡ್ಯ,ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು,ವೀರಾಜಪೇಟೆ, ಪಿರಿಯಾಪಟ್ಟಣಕ್ಕೆ ಬಸ್ ಗಳು ಲಭ್ಯ

ಇದನ್ನೂ ಓದಿ:ಬಿಜೆಪಿಯಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಚಾಟನೆ

3.ಶಾಂತಿನಗರ ಬಸ್ ನಿಲ್ದಾಣ : ತಮಿಳುಳುನಾಡು ಮತ್ತು ಕೇರಳ ಕಡೆಗೆ
ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆ ಬಸ್ ಗಳು ಲಭ್ಯ

ಇನ್ನೂ ಪ್ರಯಾಣಿಕರು ಎರಡೂ ಬದಿಯ ಮುಂಗಡ ಟಿಕೆಟ್ ಬುಕ್ ಮಾಡಿದ್ರೆ 10% ರಿಯಾಯಿತಿ ಸಿಗಲಿದೆ. ಜೊತೆಗೆ ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್ ಕಾಯ್ದಿರಿಸಿದರೆ ಶೇಕಡ 5 ರಷ್ಟು ರಿಯಾಯಿತಿ ದೊರಯಲಿದೆ. www.ksrtc.Karnataka.gov.in ವೆಬ್ ಸೈಟ್ ನಲ್ಲಿ ಬಸ್ ಬುಕ್ ಮಾಡಲು ಅವಕಾಶವಿದೆ.

Donate Janashakthi Media

Leave a Reply

Your email address will not be published. Required fields are marked *