ಬೆಂಗಳೂರು: ದಿವಂಗ ಡಾ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅವರ ಹುಟ್ಟುಹಬ್ಬವಾದ ಮಾರ್ಚ್ 14ಕ್ಕೆ ಅವರ ಮೊದಲ ಚಿತ್ರ ‘Appu’ ರೀ- ರೀಲಿಸ್ ಆಗಲಿದೆ.
ಹೌದು. ಪುನೀತ್ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಥಿಯೇಟರ್‌ಗಳಲ್ಲಿ ‘ಅಪ್ಪು’ ಚಿತ್ರವನ್ನು PRK Productions ಮರು ಬಿಡುಗಡೆ ಮಾಡುತ್ತಿದೆ. ಇದು ಅವರ ಅಭಿಮಾನಿಗಳಲ್ಲಿ ಸಂತಸ ಉಂಟು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಹಾಕುವ ಮೂಲಕ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಇದನ್ನು ಓದಿ :ಬೆಂಗಳೂರು| ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿಗೆ 1 ಲಕ್ಷ ರೂ. ದಂಡ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಪ್ಪು ಮರು ಬಿಡುಗಡೆ ಕುರಿತು ಪಿಆರ್ ಕೆ ಪ್ರೊಢಕ್ಷನ್ ನ ಮಾಲೀಕರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಪುನೀತ್ ಮೊದಲ ಬಾರಿಗೆ ಹಿರೋ ಆಗಿ ನಟಿಸಿದ್ದ ‘ಅಪ್ಪು’ 2002 ರಲ್ಲಿ ಬಿಡುಗಡೆಯಾಗಿತ್ತು. ತೆಲುಗಿನ ಪುರಿ ಜಗನಾಥ್ ನಿರ್ದೇಶಿಸಿದ್ದ ಈ ಚಿತ್ರ ಆಗಿನ ಕಾಲದಲ್ಲಿ ಅದು ಬ್ಲಾಕ್ ಬಸ್ಟರ್ ಆಗಿತ್ತು. ರಕ್ಷಿತಾ ನಾಯಕಿ ನಟಿಯಾಗಿ ಅಭಿನಯಿಸಿದ್ದರು. ಸಿನಿಮಾದ ಹಾಡುಗಳು ಕೂಡ ಯಶಸ್ಸು ಕಂಡಿದ್ದವು. ಗುರು ಕಿರಣ್ ಮ್ಯೂಸಿಕ್ ಗಮನ ಸೆಳೆದಿತ್ತು.
ಇದನ್ನು ಓದಿ :ಅರಳುವ ಮುನ್ನವೇ ಅನಾಥವಾದ ಹಾಸನ ವಿಶ್ವ ವಿದ್ಯಾಲಯ