ಅಮೆರಿಕದಿಂದ ಹಂದಿ ಮಾಂಸ ಆಮದು ಮಾಡಿಕೊಳ್ಳಲು ಮೋದಿ ಸರ್ಕಾರ ತೀರ್ಮಾನ ಮಾಡಿದೆ. ಈ ತೀರ್ಮಾನವನ್ನು ಈಶಾನ್ಯ ರಾಜ್ಯಗಳ ಹಂದಿ ಸಾಕುವ ರೈತರು ಪ್ರತಿಭಟಿಸಿದ್ದಾರೆ. ಸರ್ಕಾರದ ಈ ತೀರ್ಮಾನವು ದೇಶದ 70% ಹಂದಿ ಮಾಂಸ ಉತ್ಪಾದನೆ ಮಾಡುವ ಲಕ್ಷಾಂತರ ರೈತರ ಬದುಕನ್ನು ಹಾಳುಮಾಡಲಿದೆಯೆಂದು ಕೋಪ ವ್ಯಕ್ತಪಡಿಸಿದ್ದಾರೆ.
ಗೋಹತ್ಯೆ ನಿಷೇಧ ಮಾಡುವ ಭಾರತ ಗೋಮಾಂಸ ರಫ್ತು ಮಾಡುವ ದೇಶಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಗೋಪೂಜೆಯ ಹೆಸರಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಓಟು ಪಡೆಯುವ ಕೀಳು ರಾಜಕೀಯ ಮಾಡುವ ಆರ್.ಎಸ್.ಎಸ್./ಬಿಜೆಪಿ ಪಕ್ಷವು ಗೋಮಾಂಸ ರಫ್ತಿನ ಬಗ್ಗೆ ಚಕಾರ ಎತ್ತುತ್ತಿಲ್ಲ.
ವಿಷ್ಣುವಿನ ದಶಾವತಾರಗಳಲ್ಲಿ ವರಾಹವೂ ಒಂದಾಗಿದ್ದು ಅದರ ಹತ್ಯೆಯ ಬಗ್ಗೆ ಆರ್.ಎಸ್.ಎಸ್. / ಬಿಜೆಪಿ ಸರ್ಕಾರ ಮೌನ ವಹಿಸುತ್ತದೆ. ಮತ್ತು ಈಗ ಹಂದಿಗಳ ಸಾಕಾಣಿಕೆ ಮತ್ತು ಮಾಂಸ ಮಾರಾಟದಿಂದ ಜೀವನ ಸಾಗಿಸುವ ಲಕ್ಷಾಂತರ ಜನರ ಬದುಕನ್ನು ನಾಶ ಮಾಡಲು ಹಂದಿ ಮಾಂಸವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿದೆ.
ಆರ್.ಎಸ್.ಎಸ್./ಬಿಜೆಪಿ ಯ ಇಬ್ಬಗೆಯ ನೀತಿಯು – ಗೋವಿಗೆ ಒಂದು ನೀತಿ ಮತ್ತು ವರಾಹಕ್ಕೆ ಇನ್ನೊಂದು ನೀತಿ – ಅವರ ಕೀಳು ರಾಜಕೀಯವನ್ನು ಬಯಲುಮಾಡಿದೆ.
ಅಷ್ಟೇ ಅಲ್ಲ, ಕಳೆದ ಏಳು ವರ್ಷಗಳ ಕಾರ್ಪೊರೇಟ್ ಮತ್ತು ವಿದೇಶಿ ಹಣಕಾಸು ಬಂಡವಾಳದ ಪರ ತನ್ನ ನೈಜ ನೀತಿಯನ್ನು ಬಹಿರಂಗಗೊಳಿಸುವ ಮೂಲಕ ತಾನು “ರಾಷ್ಟ್ರೀಯ ಸುಲಿಗೆಗಾರರ ಸಂಘ” ಎಂಬುದನ್ನೂ ಬಿಜೆಪಿ / ಆರ್.ಎಸ್.ಎಸ್. ಸರ್ಕಾರ ಸಾಬೀತು ಮಾಡಿದೆ.
ಟಿ.ಸುರೇಂದ್ರರಾವ್