ನವದೆಹಲಿ: ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗ ಮತ್ತೊಮ್ಮೆ ಚಿನ್ನದ ದರ ಏರಿಕೆ ದಾಖಲೆ ನಿರ್ಮಿಸಿದೆ. ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿರುವ ಚಿನ್ನದ ದರದಲ್ಲಿ ಪ್ರತಿ ಗ್ರಾಮ್ ಗೆ 1,300 ರೂಪಾಯಿಗಳಷ್ಟು ಏರಿಕೆ ಕಂಡಿದೆ.
ಅಖಿಲ ಭಾರತ ಸರಾಫಾ ಸಂಘ ಚಿನ್ನದ ದರ ಏರಿಕೆ ಬಗ್ಗೆ ಮಾಹಿತಿ ನೀಡಿದ್ದು, ಬೆಲೆ ಏರಿಕೆಯಿಂದಾಗಿ 10 ಗ್ರಾಂ ಚಿನ್ನದ ಬೆಲೆ 89,400 ರೂಪಾಯಿಗಳಷ್ಟಾಗಿದೆ.
ಇದನ್ನು ಓದಿ: 2008ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ – ಮೋದಿ ಎದುರೇ ಟ್ರಂಪ್ ಘೋಷಣೆ
ಗುರುವಾರ (ಫೆ.13) ರಂದು ಶೇ.99.9 ರಷ್ಟು ಶುದ್ಧತೆಯ ಹಳದಿ ಲೋಹದ ದರ ಪ್ರತಿ 10 ಗ್ರಾಮ್ ಗಳಿಗೆ 88,100 ರೂಪಾಯಿಗಳಿತ್ತು. 99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ 1,300 ರೂ. ಏರಿಕೆಯಾಗಿ 10 ಗ್ರಾಂಗೆ 89,000 ರೂ. ತಲುಪಿದೆ, ಹಿಂದಿನ 10 ಗ್ರಾಂಗೆ 87,700 ರೂ. ಇತ್ತು.
ಶುಕ್ರವಾರ ಬೆಳ್ಳಿ ಬೆಲೆಯೂ 2,000 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 1 ಲಕ್ಷ ರೂಪಾಯಿ ತಲುಪಿದೆ. ಇದು ನಾಲ್ಕು ತಿಂಗಳ ಗರಿಷ್ಠ ಮಟ್ಟದ ದರವಾಗಿದೆ.
ಗುರುವಾರ ಬೆಳ್ಳಿ ದರ ಕೆಜಿಗೆ 98,000 ರೂ.ಗಳಿತ್ತು. MCX ನಲ್ಲಿ ಫ್ಯೂಚರ್ಸ್ ವಹಿವಾಟಿನಲ್ಲಿ, ಏಪ್ರಿಲ್ ವಿತರಣೆಗೆ ಚಿನ್ನದ ಒಪ್ಪಂದಗಳು 10 ಗ್ರಾಂಗೆ 184 ರೂ.ಗಳಷ್ಟು ಏರಿಕೆಯಾಗಿ 85,993 ರೂ.ಗಳಿಗೆ ತಲುಪಿದೆ.
“ದುರ್ಬಲ ಡಾಲರ್ ಸೂಚ್ಯಂಕ ಮತ್ತು US ಸುಂಕ ನೀತಿಗಳಿಂದ ನಿರಂತರ ಬೆಂಬಲದಿಂದಾಗಿ ಚಿನ್ನದ ಬೆಲೆಗಳು ಏರುಗತಿಯಲ್ಲಿವೆ.
ಇದನ್ನೂ ನೋಡಿ: Union Budget 2025-2026 Budget neglected women- they are the worst sufferers – Mariam Dhawale