ಚೆನ್ನೈ, ಫೆ 13: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚನ್ನೈ ಗೆ ಭೇಟಿ ನೀಡುತ್ತಿದ್ದಾರೆ. ಕೇವಲ ಮೂರು ಗಂಟೆಯ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಪ್ರಧಾನಿಯ ಭೇಟಿಗೆ ತಮಿಳಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. “ಗೋ ಬ್ಯಾಕ್ ಮೋದಿ” ಟ್ವಿಟರ್ ಟ್ರೆಂಡಿಂಗ್ ನಲ್ಲಿದೆ.
ಮೋದಿ ಅವರ ಭೇಟಿಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗುವುದು ಇದು ಮೊದಲ ಸಲವೇನಲ್ಲ. ಅವರ ಪ್ರತಿ ಪ್ರವಾಸದಲ್ಲಿಯೂ ‘ಗೋ ಬ್ಯಾಕ್ ಮೋದಿ’ ಅಭಿಯಾನ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. 2018 ರಿಂದು ಅದು ಹೆಚ್ಚು ಪ್ರಚಾರವನ್ನು ಪಡೆದುಕೊಂಡ ಹ್ಯಾಶ್ ಟ್ಯಾಗ್ ಆಗಿತ್ತು. ಅವರ ಭಾನುವಾರ ಭೇಟಿ ವಿರುದ್ಧದ ‘ಗೋ ಬ್ಯಾಕ್ ಮೋದಿ’ ಹ್ಯಾಶ್‌ಟ್ಯಾಗ್ ಕೂಡ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಇದನ್ನೂ ಓದಿ : ಆದಾನಿಯನ್ನು ತಡೆಯಿರಿ, ಇಲ್ಲವಾದಲ್ಲಿ ಕುಟ್ಟಿಪಳ್ಳಿ ದ್ವೀಪ ನಾಶವಾಗಲಿದೆ – ತಮಿಳರ ಆಗ್ರಹ
ಮೋದಿ ಅವರ ಭೇಟಿಗೆ ಸಾಮಾಜಿಕ ಜಾಲತಾಣದಲ್ಲಿ ಶನಿವಾರದಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ‘ಗೋ ಬ್ಯಾಕ್ ಮೋದಿ’ ಎಂದು ಮೋದಿ ಆಗಮನದ ಮುನ್ನವೇ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಟ್ರೆಂಡ್ ಭಾನುವಾರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ಕೃಷಿ ಕಾಯ್ದೆಗಳು, ರೈತರ ಪ್ರತಿಭಟನೆ ವಿಚಾರಗಳು, ತೈಲ ಬೆಲೆ ಏರಿಕೆ, ಹೆಚ್ಚಿದ ತೆರಿಗೆಗಳು, ಬೆಲೆ ಏರಿಕೆ, ಖಾಸಗೀಕರಣ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಮೋದಿ ಅವರನ್ನು ಟೀಕಿಸಲಾಗುತ್ತಿದೆ. ತಮಿಳುನಾಡು ಭೂಪಟದೊಳಗೆ ನಿಂತ ವ್ಯಕ್ತಿ ಮೋದಿ ಅವರನ್ನು ಒದ್ದೋಡಿಸುತ್ತಿರುವಂತಹ ಕಾರ್ಟೂನ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಫೆ 14ರಂದು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಗೆ ಪ್ರಧಾನಿ ಮೋದಿ ಅಡಿಗಲ್ಲು ಹಾಕಲಿದ್ದಾರೆ. ಜತೆಗೆ ಪೂರ್ಣಗೊಂಡ ಯೋಜನೆಗಳನ್ನು ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಉದ್ಘಾಟಿಸಲಿದ್ದಾರೆ. ಈಗ ಮೋದಿ ಅವರ ಭೇಟಿಗೆ ತಮಿಳರು ವಿರೊಧ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಗರದಾದ್ಯಂತ ನಾಲ್ಕು ಪದರಗಳಲ್ಲಿ 6,000 ಪೊಲೀಸ್ ಸಿಬ್ಬಂದಿ ಹಾಗೂ ಅದರ ವಿಶೇಷ ಘಟಕಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೆಲಿಪ್ಯಾಡ್, ವಿಮಾನ ನಿಲ್ದಾಣ, ಸಾರ್ವಜನಿಕ ಸ್ಥಳಗಳು, ಕಾರ್ಯಕ್ರಮ ನಡೆಯುವ ಕ್ರೀಡಾಂಗಣ ಹಾಗೂ ಸುತ್ತಮುತ್ತಲೂ ಬಿಗಿ ಬಂದೋಬಸ್ತ್ ನಡೆಸಲಾಗಿದೆ.