ಪಣಜಿ: ‘ಬೀಚ್‌ನಲ್ಲಿ ಮಕ್ಕಳು ತಡರಾತ್ರಿವರೆಗೆ ಇರುವ ಬಗ್ಗೆ ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳು ಪೋಷಕರ ಮಾತು ಕೇಳುವುದಿಲ್ಲ ಎಂಬ ಕಾರಣಕ್ಕೆ, ಆ ಜವಾಬ್ದಾರಿಯನ್ನು ಸರಕಾರ ಮತ್ತು ಪೊಲೀಸರ ಮೇಲೆ ಆರೋಪ ಮಾಡುವುದು ಸರಿಯಲ್ಲ‘ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಸದನದಲ್ಲಿ ಹೇಳಿದರು.
ಈ ರೀತಿಯ ಹೇಳಿಕೆಯನ್ನು ಗೋವಾದಲ್ಲಿ ಸದನದಲ್ಲಿ ಸಂಪೂರ್ಣ ಆಘಾತಕಾರಿಯಾದ ಹೇಳಿಕೆಯನ್ನು ನೀಡಿದರು. ಮುಂದುವರೆದು, ‘ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರೇ ಜವಾಬ್ದಾರಾರು ಹಾಗೂ ಹುಡುಗಿಯರು ರಾತ್ರಿಯಲ್ಲಿ ಮನೆಯಿಂದ ಹೊರಹೋಗಲು ಅನುಮತಿಸಬಾರದು. ವಿಶೇಷವಾಗಿ ಅವರು ಅಪ್ರಾಪ್ತ ವಯಸ್ಕರಾಗಿದ್ದಾರೆ ಅವರನ್ನು ಹೊರಗಿ ಕಳುಹಿಸಬಾರದು ಎಂದು ಗೃಹ ಖಾತೆಯನ್ನೂ ಹೊಂದಿರುವ ಸಾವಂತ್ ಅವರ ಹೇಳಿಕೆಯಾಗಿದೆ.
ಇದನ್ನು ಓದಿ: ಹುಡುಗಿಯರ ಬಳಿ ಫೋನ್ ಇರುವುದರಿಂದಲೇ ಅತ್ಯಾಚಾರಕ್ಕೆ ಕಾರಣ: ಮಹಿಳಾ ಆಯೋಗದ ಸದಸ್ಯೆ
ಮುಖ್ಯಮಂತ್ರಿ ಹೇಳಿಕೆ ವಿರುದ್ಧ ಪ್ರತಿಪಕ್ಷಗಳ ನಾಯಕರು ತೀವ್ರ ಆಕ್ರೋಶಗೊಂಡಿದ್ದಾರೆ. ಅವರಲ್ಲಿ ಕೆಲವರು ಸಾವಂತ್ ಅವರ ರಾಜೀನಾಮೆಗೆ ಒತ್ತಾಯಿಸಿದರು ಹಾಗೂ ಬಿಜೆಪಿ ಆಳ್ವಿಕೆಯಲ್ಲಿ ಗೋವಾ ರಾಜ್ಯವು ಮಹಿಳೆಯರಿಗೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
ಸಿಎಂ ಹೇಳಿಕೆ ಬಗ್ಗೆ ಇಂದು ಗೋವಾದ ಕಾಂಗ್ರೆಸ್ ಪಕ್ಷದ ವಕ್ತಾರ ಅಲ್ಟೊನೆ ಡಿ ಕೋಸ್ಟಾ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸೂಕ್ತ ಭದ್ರತೆಯನ್ನು ಒದಗಿಸಿದರೆ, ನಾವು ರಾತ್ರಿ ತಿರುಗಾಡುವಾಗ ಏಕೆ ಭಯಪಡಬೇಕು. ಅಪರಾಧಿಗಳು ಜೈಲಿನಲ್ಲಿದ್ದರೆ, ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ತಿರುಗಾಡುತ್ತಾರೆ‘ ಎಂದರು.
ಗೋವಾ ಫಾರ್ವರ್ಡ್ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯಿಸಿ ನಾಗರಿಕರ ಸುರಕ್ಷತೆಯ ಜವಾಬ್ದಾರಿ ಪೊಲೀಸರು ಮತ್ತು ಸರಕಾರದ ಮೇಲಿದೆ. ಇವರಿಬ್ಬರೂ ನಮಗೆ ರಕ್ಷಣೆ ನೀಡದಿದ್ದರೆ, ಮುಖ್ಯಮಂತ್ರಿಯವರಿಗೆ ಆ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ಹಕ್ಕು ಇಲ್ಲ‘ ಎಂದು ಹೇಳಿದರು.