ಚನ್ನರಾಯಪಟ್ಟಣ; ಜ. 22 : ರಾಜ್ಯದಲ್ಲಿ ಬಿಜೆಪಿ ಸರಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಗೋ ಹತ್ಯೆ ನಿಷೇಧ ಕಾಯ್ದೆ ಈಗ ರೈತರಲ್ಲಿ ಸಾಕಷ್ಟು ಗೊಂದಲ ಮತ್ತು ಅವಾಂತರಕ್ಕೆ ಕಾರಣವಾಗಿದೆ. ಗೋ ಹತ್ಯೆ ನಿಷೇಧ ಕಾಯಿದೆಯ ಜಾರಿ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದ ಎಪಿಎಮ್‌ಸಿಯ ದನದ ಸಂತೆಯಲ್ಲಿ ರೈತರು ಉಪಯುಕ್ತವಲ್ಲದ ಗಂಡು ಕರುಗಳನ್ನು ತಂದು ಬಿಟ್ಟು ಹೋದ ಘಟನೆ ನಡೆದಿದೆ.
ಇದನ್ನು ಓದಿ : ಗೋಹತ್ಯ ನಿಷೇಧ ಮಸೂದೆ ಅಂಗೀಕಾರಕ್ಕೆ ವ್ಯಾಪಕ ವಿರೋಧ
ಗೋ ಸೇವೆ, ಗೋ ಪ್ರೇಮ ಎಂದು ಬಡಬಡಿಸುವ ಬಿಜೆಪಿ ಸರ್ಕಾರ ಇಂತಹ ಕರುಗಳಿಗೆ ಪರ್ಯಾಯ ವ್ಯವಸ್ಥೆಯನ್ನ ಮಾಡಬೇಕಿದೆ. ಆ ನಿಟ್ಟನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದ ತಹಶಿಲ್ದಾರರ ಕಚೇರಿ ಎದುರು ಕರುಗಳನ್ನು ತಂದು ಹಾಕಿ ರೈತ-ಕಾರ್ಮಿಕ-ದಲಿತ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇದನ್ನು ಓದಿ : ಪರ ವಿರೋಧದ ನಡುವೆ ಜಾರಿಯಾಯ್ತಾ ಗೋಹತ್ಯಾ ನಿಷೇಧ ಕಾನೂನು!!
ಕರುಗಳನ್ನು ನಾಯಿಗಳು ಕೊಂದು ತಿನ್ನುತ್ತಿವೆ, ಗೋ ಹತ್ಯೆ ನಿಷೇಧದಿಂದಾಗಿ ಉಪಯುಕ್ತವಲ್ಲದ ದನ ಕರುಗಳನ್ನು ರೈತರಿಗೆ ಸಾಕಲಾಗುತ್ತಿಲ್ಲ, ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸರ್ಕಾರ ಇಂತಹ ದನ ಕರುಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇದನ್ನು ಓದಿ : ಜಾನುವಾರು ಹತ್ಯೆ ನಿಷೇದ ಸುಗ್ರೀವಾಜ್ಞೆ ಜಾರಿಗೊಳಿಸುವ ದುರ್ನಡೆಯನ್ನು ನಿಲ್ಲಿಸಿ ! – KPRS ಒತ್ತಾಯ
ಬಿಜೆಪಿ ಸರಕಾರವು ಸುಗ್ರೀವಾಜ್ಞೆ ಮೂಲಕ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಇದು ಆಹಾರ ಹಕ್ಕಿನ ಮೇಲಿನ ದಾಳಿ ಎಂದು ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು ಕೂಡ ಬಿಜೆಪಿ ಸರ್ಕಾರ ತನ್ನ ಹಿಂದುತ್ವದ ಅಜೆಂಡವನ್ನು ಜಾರಿ ಮಾಡಲು ಮುಂದಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ H.S ಮಂಜುನಾಥ, ರಾಜ್ಯ ರೈತ ಸಂಘದ ಮುಖಂಡರಾದ ದೊಡ್ಡೇರಿ ಶ್ರೀಕಂಠ, ಗ್ರಾಮಪಂಚಾಯಿತಿ ಸದಸ್ಯ ವಾಸುವೇದರವರು ಆರೋಪಿಸಿದ್ದಾರೆ.