“ಜಾಗತಿಕ ಗಾಜಾ ರಕ್ಷಣೆಯ ನೌಕಾಪಡೆ”ಗೆ ಬೆಂಬಲ : ‘ಶೀತಲ ಸಮರ ಬೇಡ’

ಯುದ್ಧ ಮತ್ತು ನರಮೇಧದ ವಿರುದ್ಧದ ‘ಶೀತಲ ಸಮರ ಬೇಡ’ ಜಾಗತಿಕ ವೇದಿಕೆಯು ಗಾಜಾದ ದಂಡೆಯತ್ತ ಹೊರಟಿರುವ “ಜಾಗತಿಕ ಗಾಜಾ ರಕ್ಷಣೆಯ ನೌಕಾಪಡೆ”ಯ (ಗ್ಲೋಬಲ್ ಸುಮುದ್ ಗಾಜಾ ಫ್ಲೋಟಿಲ್ಲಾ) ಧೈರ್ಯಶಾಲಿ ಕಾರ್ಯಕರ್ತರ ಪರವಾಗಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಮತ್ತು ಗಾಜಾದ ಪರವಾಗಿ ನಡೆಯುತ್ತಿರುವ ಎಲ್ಲಾ ಪ್ರತಿಭಟನಾ ಚಳವಳಿಯನ್ನು ನಾವು ಬೆಂಬಲಿಸುತ್ತೇವೆ.
ಟಿ.ಸುರೇಂದ್ರರಾವ್

ಆ ನೌಕೆಯಲ್ಲಿರುವ ಎಲ್ಲಾ ಜನರಿಗೆ ನಮ್ಮ ಮನದಾಳದ ಪ್ರೀತಿ ಹಾಗೂ ಬೆಂಬಲವನ್ನು ಕಳಿಸುತ್ತಿದ್ದೇವೆ ಮತ್ತು ಅದರಲ್ಲೂ ನಿರ್ದಿಷ್ಟವಾಗಿ ಈ ಸಂಗಾತಿಗಳಿಗೆ ನಮ್ಮ ವಿಶೇಷ ಪ್ರೀತಿ ಹಾಗೂ ಬೆಂಬಲವನ್ನು ಕಳಿಸುತ್ತಿದ್ದೇವೆ: ಡಾ.ಹನ್ನೆ ಬೋಸ್ಸಲಾರ್ಸ್ (ಜನರಿಗಾಗಿ ಔಷಧಿ, ಎಂ.ಪಿ.ಎಲ್.ಪಿ,- ಜಿ.ವಿ.ಎಚ್.ವಿ. ಬೆಲ್ಜಿಯಂ) ಮತ್ತು ಅಯೋಬ್ ಹಬ್ರೋಯಿ (ಮೊರೊಕ್ಕೋದ ಕಾರ್ಮಿಕರ ಪ್ರಜಾಸತ್ತಾತ್ಮಕ ಪಕ್ಷ ಮತ್ತು ಅಂತರ್ರಾಷ್ಟ್ರೀಯ ಜನತಾ ಸಮೂಹದ ಯುವಗುಂಪು).

ಗಾಜಾದ ವಿರುದ್ಧ ಇಸ್ರೇಲಿನ ವರ್ಣಬೇಧ ನೀತಿಯ ನರಮೇಧವು ಗಾಜಾದಲ್ಲಿ ಕ್ಷಾಮವನ್ನು ಸೃಷ್ಟಿಸಿದೆ – ಅದು ಅಮಾನುಷ ಘಾತಕೃತ್ಯವಾಗಿದೆ. ಜಾಗತಿಕ ಗಾಜಾ ರಕ್ಷಣೆಯ ನೌಕಾಪಡೆಯ ಮೇಲೆ ಇಸ್ರೇಲ್ ಖಂಡಿತವಾಗಿಯೂ ದಾಳಿ ಮಾಡಲಿದೆ ಮತ್ತು ಇಸ್ರೇಲ್ ತನ್ನ ನರಮೇಧವನ್ನು ನಿಲ್ಲಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಜಗತ್ತಿನ ಎಲ್ಲಾ ಜನರಲ್ಲಿ ಕೇಳಿಕೊಳ್ಳುತ್ತಿದ್ದೇವೆ:

* ಜಾಗತಿಕ ಗಾಜಾ ರಕ್ಷಣೆಯ ನೌಕಾಪಡೆಯೊಂದಿಗೆ ಸಂಪೂರ್ಣವಾಗಿ ನಿಲ್ಲುತ್ತೇವೆ;

* ಇಸ್ರೇಲ್ ಈ ಕೂಡಲೇ ಕದನವಿರಾಮ ಘೋಷಿಸಬೇಕೆಂದು ಒತ್ತಾಯಿಸುತ್ತೇವೆ;

* ವಿಶ್ವ ಸಂಸ್ಥೆ ಮತ್ತಿತರ ಸಂಸ್ಥೆಗಳು ಆಹಾರ, ನೀರು ಮತ್ತು ಔಷಧಗಳನ್ನು ಈ ಕೂಡಲೇ ಗಾಜಾಕ್ಕೆ ತರಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸುತ್ತೇವೆ;

* ಎಲ್ಲಾ ರೀತಿಯ ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ಇಸ್ರೇಲಿಗೆ ಪೂರೈಸುವುದಕ್ಕೆ ಅಂತ್ಯ ಹಾಡಬೇಕೆಂದು ಒತ್ತಾಯಿಸುತ್ತೇವೆ;

* ಇಸ್ರೇಲಿಗೆ ಸಂಪೂರ್ಣ ಶಕ್ತಿ ದಿಗ್ಬಂಧನ (ಎನರ್ಜಿ ಬ್ಲಾಕೇಡ್) ಜಾರಿ ಮಾಡಬೇಕೆಂದು ಒತ್ತಾಯಿಸುತ್ತೇವೆ;

* ನಮ್ಮ ಎಲ್ಲಾ ದೇಶಗಳು ಇಸ್ರೇಲಿನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸುತ್ತೇವೆ.

* ಸೆಪ್ಟೆಂಬರ್ 18, 2025 ರಂದು ‘ಜಾಗತಿಕ ಕಾರ್ಯಾಚರಣೆ ಹಾಗೂ ಮುಷ್ಕರ ದಿನ’ ಎಂದು ಆಚರಿಸಲು ಪ್ಯಾಲೆಸ್ಟೈನಿಯರು ಮತ್ತು ಜಾಗತಿಕ ನಾಗರಿಕ ಸಂಘಗಳು ನೀಡಿರುವ ಕರೆಗೆ ಕೈಜೋಡಿಸಬೇಕು ಎಂದು ಕೋರುತ್ತೇವೆ.

 

Donate Janashakthi Media

Leave a Reply

Your email address will not be published. Required fields are marked *