ಲಿಂಗಸಗೂರು: ತಾಲೂಕಿನ ಈಚನಾಳ ಗ್ರಾಮದ ಹೊರ ವಲಯದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಬಾಹ್ಯ ವ್ಯಕ್ತಿಗಳ ಮಧ್ಯೆ ಹೊಡೆದಾಟ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಂಗಸಗೂರು ಪೋಲಿಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿವೆ.
ಆಗಸ್ಟ್-23 ಬುಧವಾರ ಸಂಜೆ 6.20ರ ಸುಮಾರಿಗೆ ತಾಲೂಕಿನ ಈಚನಾಳ ಗ್ರಾಮದಲ್ಲಿ ಇರುವ, ಮಹಿಳಾ ಹಾಸ್ಟೆಲ್ ವೀಕ್ಷಣೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು. ತಾಲೂಕಾ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ರಮೇಶ ರಾಠೋಡ್ ಈಚನಾಳ ಬಾಲಕಿಯರ ವಸತಿ ನಿಲಯದ ಕುಂದು ಕೊರತೆ ಹಾಗೂ ಸೋಲಾರ್, ಕಂಪ್ಯೂಟರ್ ರಿಪೇರಿ ಮಾಡಲು ವಸತಿ ನಿಲಯಕ್ಕೆ ಕರಡಕಲ್ ಬಾಲಕರ ವಸತಿ ನಿಲಯದ ಕಿರಿಯ ವಾರ್ಡನ್ ಶರಣಪ್ಪ ಸಾಹುಕಾರ್ ಹಾಗೂ ಅಡುಗೆ ಸಹಾಯಕ ಮನೋಹರ ಪತ್ತಾರ ಜೊತೆ ವಸತಿ ನಿಲಯಕ್ಕೆ ಭೇಟಿ ನೀಡಿದ್ದರು.
ಇದನ್ನೂ ಓದಿ:ವಸತಿ ನಿಲಯದಲ್ಲಿ ಸೌಲಭ್ಯ ವಂಚನೆ-ವಾರ್ಡನ್ ಬದಲಾವಣೆಗೆ ಆಗ್ರಹ
ಭೇಟಿಯ ವೇಳೆ ಈಚನಾಳದ ಅಡುಗೆ ಸಹಾಯಕಿ ಪುತ್ರ ಮಲ್ಲರೆಡ್ಡೆಪ್ಪ ಅಧಿಕಾರಿಗಳ ಜೊತೆ ಆಗಮಿಸಿದ ಕಿರಿಯ ವಾರ್ಡನ್ ಶರಣಪ್ಪ ವಸತಿ ನಿಲಯದ ಒಳಗಡೆ ಅಕ್ರಮವಾಗಿ ಪ್ರವೇಶಿಸಿ , ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡುತ್ತಿರುವ ಕುರಿತು ವಿಡಿಯೋ ಮಾಡುತ್ತಿದ್ದ, ಆ ಸಮಯದಲ್ಲಿ ಆತನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳಲು ಮೈಮೇಲೆ ಶರಣಪ್ಪ ಮುಗಿಬಿಳುತಿದ್ದಂತೆ,ಮಲ್ಲರೆಡ್ಡೆಪ್ಪ ದಾಳಿ ಮಾಡಿದ್ದು ಇಬ್ಬರ ನಡುವೆ ಬಡಿದಾಟ ನಡೆದು ಬಾಲಕಿಯರು ಜಗಳ ಬಿಡಿಸಲು ಹರಸಾಹಸ ಪಟ್ಟ ಘಟನೆ ಜರುಗಿದೆ.
ದೂರು:
ಬಾಲಕಿಯರ ವಸತಿ ನಿಲಯಕ್ಕೆ ತಾಲೂಕು ಅಧಿಕಾರಿ ಜೊತೆ ಭೇಟಿ ನೀಡಿ ವಸತಿ ನಿಲಯದ ಸಮಸ್ಯೆಗಳ ಕುರಿತು ಚರ್ಚೆ ಮಾಡುತ್ತಿರುವ ಸಮಯದಲ್ಲಿ ಅನಧಿಕೃತವಾಗಿ ಪ್ರವೇಶಿಸಿದ ಮಲ್ಲರೆಡ್ಡೆಪ್ಪ ವಿಡಿಯೊ ಚಿತ್ರೀಕರಣ ಮಾಡುವದನ್ನು ವಿರೋಧಿಸಿದಾಗ ಹಲ್ಲೆಗೆ ಯತ್ನ ಹಾಗೂ ಸರಕಾರಿ ನೌಕರರ ಕರ್ತವ್ಯ ಅಡ್ಡಿ ಪಡಿಸಿದ್ದಾನೆಂದು ಪೋಲಿಸ್ ಠಾಣೆಯಲ್ಲಿ ವಾರ್ಡನ್ ಶರಣಪ್ಪ ದೂರು ನೀಡಿದ್ದು ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತಿದೂರು:
ವಸತಿ ನಿಲಯದ ದಾರಿ ವಿಷಯವಾಗಿ ಅಧಿಕಾರಿಗಳ ಜೊತೆ ಮಾತನಾಡಲು ಹೋದಾಗ ಸದರಿ ವಸತಿ ನಿಲಯಕ್ಕೆ ಸಂಬಂಧವಿಲ್ಲದ , ಕರಡಕಲ್ ಬಾಲಕರ ವಸತಿ ನಿಲಯದ ಕಿರಿಯ ಮೇಲ್ವಿಚಾರಕ ಶರಣಪ್ಪ ವಸತಿ ನಿಲಯದ ಒಳಗಡೆ ಅಕ್ರಮ ಪ್ರವೇಶ ಮಾಡಿದ್ದಲ್ಲದೇ, ಬಾಲಕಿಯರನ್ನು ಕೋಣೆಯಲ್ಲಿ ಕೂಡಿ ಹಾಕಿಕೊಂಡು ಚರ್ಚೆ ಮಾಡುತ್ತಿರುವ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡುತ್ತಿರುವಾಗ ,ಮೊಬೈಲ್ ಕಿತ್ತುಕೊಂಡು ಹಲ್ಲೆಗೆ ಯತ್ನಿಸಿದ ಹಾಗೂ ಪರಿಶಿಷ್ಟ ಜಾತಿ ನಿಂದನೆಯಡಿ ಖಾಸಗಿ ವ್ಯಕ್ತಿ ಮಲ್ಲರೆಡ್ಡೆಪ್ಪ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲುಕಾ ಕಲ್ಯಾಣಧಿಕಾರಿ ಲೋಪ:
ಬಾಲಕಿಯರ ವಸತಿ ನಿಲಯಗಳಿಗೆ ಸಂಜೆ 7 ನಂತರ ಪುರುಷಧಿಕಾರಿ ಹಾಗೂ ಖಾಸಗಿ ವ್ಯಕ್ತಿಗಳ ನಿರ್ಬಂದವಿದ್ದರೂ ,ತನ್ನ ಕೆಳ ಹಂತದ ಮತ್ತು ವಿದ್ಯಾರ್ಥಿಗಳ ಊಟದ ಸಮಯದಲ್ಲಿ ಹಾಜರಿರಬೇಕಿದ್ದ, ಕರಡಕಲ್ ಬಾಲಕರ ವಸತಿ ನಿಲಯದ ಕಿರಿಯ ಮೇಲ್ವಿಚಾರಕ ಶರಣಪ್ಪ ಜೊತೆಗೆ ಲಿಂಗಸಗೂರು ವಸತಿ ನಿಲಯದ ಅಡುಗೆ ಸಹಾಯಕ ಮನೋಹರ ಪತ್ತಾರ ಎಂಬ ವ್ಯಕ್ತಿಗಳನ್ನು ಜೊತೆಗೆ ಕರೆದುಕೊಂಡು ಹೋಗಿದ್ದಲ್ಲದೆ, ಆ ವಸತಿ ನಿಲಯಕ್ಕೆ ಸಂಬಂಧಪಡದ ಈ ವ್ಯಕ್ತಿಗಳಿಗೆ ವಸತಿ ನಿಲಯದ ಬಾಲಕಿಯರ ಕೊಠಡಿಗಳ ಒಳ ಪ್ರವೇಶಕ್ಕೆ ಅನುಮತಿ ನೀಡಿದ್ದು ಇಷ್ಟೇಲ್ಲಾ ಜಗಳ ಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಗೋಚರವಾಗಿದ್ಧು,ಅದಲ್ಲದೇ ತಾಲುಕಾಧಿಕಾರಿ ತನ್ನ ಕೆಳ ಹಂತದ ನೌಕರರನ್ನು ಅನಾವಶ್ಯಕ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರ ,ಎಂಬ ಶಂಕೆ ವ್ಯಕ್ತವಾಗುತ್ತಿದ್ದು ತಾಲುಕಾ ಹಿದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಜಿ ರಾಠೋಡ ಕರ್ತವ್ಯ ಲೋಪ ಎಸಗಿದ್ದಾರೆಯೇ? ಎಂದು ತನಿಖೆಯ ನಂತರವೇ ಸತ್ಯಾಸತ್ಯತೆ ಹೊರ ಬರಬೇಕಾಗಿದೆ.
ಸದರಿ ವಸತಿ ನಿಲಯಕ್ಕೆ ಸಂಬಂಧಪಡದ ಬಾಹ್ಯ ವ್ಯಕ್ತಿಗಳ ಈ ಬಡಿದಾಟ, ಬಾಲಕಿಯರಲ್ಲಿ ಭಯ ಹುಟ್ಟಿಸಿದ್ದು, ಜಗಳ ಬಿಡಿಸಲು ಹೋದ ಬಾಲಕಿಯರಿಗೆ ಏನಾದರೂ ಅಪಾಯವಾಗಿದ್ದರೆ ,ಯಾರೂ ಜವಾಬ್ದಾರರು , ಈ ಕೂಡಲೇ ಜಿಲ್ಲಾಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ಥರ ವಿರುದ್ದ ಸೂಕ್ತ ಕ್ರಮ ಕ್ಕೆ ಮುಂದಾಗುವಂತೆ ಸಾರ್ವಜನಿಕರ ಆಗ್ರಹವಾಗಿದೆ.