ರಾಣೇಬೆನ್ನೂರು: ಕೊಳೆತ ತರಕಾರಿ ಹಾಕಿ ಅಡುಗೆ – ವಿದ್ಯಾರ್ಥಿಗಳ ಪ್ರತಿಭಟನೆ

ರಾಣೇಬೆನ್ನೂರು: ಶ್ರೀರಾಮ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಪಕ್ಕದಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದ ಮುಂದೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವಿದ್ಯಾರ್ಥಿನಿಯರ ಹಾಸ್ಟೆಲ್ ಘಟಕ ನೇತೃತ್ವದಲ್ಲಿ ಬಾಲಕಿಯರ ವಸತಿ ನಿಲಯದಲ್ಲಿ ಊಟದ ವ್ಯವಸ್ಥೆ ಸರಿಪಡಿಸಿ, ಗುಣಮಟ್ಟದ ಆಹಾರ ನೀಡುವಂತೆ ಒತ್ತಾಯಿಸಿ ಹಾಗೂ ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವುದನ್ನು ವಿರೋಧಿಸಿ, ವಾರ್ಡನ್ ಬದಲಾವಣೆಗಾಗಿ ಒತ್ತಾಯಿಸಿ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ದೇವನಾಯಕ ಅವರಿಗೆ ಎಸ್ಎಫ್ಐ ಕಾರ್ಯಕರ್ತರು ಮನವಿ ಸಲ್ಲಿಸಿದೆ. ರಾಣೇಬೆನ್ನೂರು

ಸಮಾಜ ಕಲ್ಯಾಣ ಇಲಾಖೆಯ ಪಕ್ಕದಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಸರಿಯಾದ ಸಮಯಕ್ಕೆ ಸರಿಯಾದ ಊಟದ ವ್ಯವಸ್ಥೆ ಮಾಡುತ್ತಿಲ್ಲ ಗುಣಮಟ್ಟದ ಆಹಾರ ನೀಡುವಂತೆ ಅನೇಕ ಬಾರಿ ಹೇಳಿದ್ದರೂ ಹಾಗೂ ‘‘ಕಳೆದ ಕೆಲವು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಊಟದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ವಾರ್ಡನ್ ಗಮನಕ್ಕೆ ತರಲು ಯತ್ನಿಸಿದರೆ ವಾರ್ಡನ್ ಮೇಡಂ ಅವರು ವಿದ್ಯಾರ್ಥಿನಿಯರ ಮೇಲೆ ನೀವು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ಆರೋಪಿಸುತ್ತಾರೆ ’’ ವಿದ್ಯಾರ್ಥಿನಿಯರು ಮೇಲೆ ಆರೋಪಿಸುವುದು ಸರಿಯದ ವ್ಯವಸ್ಥೆ ಅಲ್ಲ ಈ ಕೂಡಲೆ ಹಾಸ್ಟೆಲ್ ನಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ವಿದ್ಯಾರ್ಥಿನಿಯರನ್ನು ತಮ್ಮ ಮಕ್ಕಳ ರೀತಿಯಲ್ಲಿ ಪೋಷಿಸಿಬೇಕು. ವಸತಿ ನಿಲಯದಲ್ಲಿನ ಕೆಲ ಸಮಸ್ಯೆಗಳ ಜೊತೆಗೆ ಸೂಕ್ತ ಆಹಾರದ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೊಂದರೆಯಾಗಿದೆ. ರಾಣೇಬೆನ್ನೂರು

ಸಮಾಜ ಕಲ್ಯಾಣ ಇಲಾಖೆಯ ಪಕ್ಕದಲ್ಲೇ ಇರುವ ಹಾಸ್ಟೆಲ್ ಈ ಘಟನೆ ಸೇರಿ ಅನೇಕ ಬಾರಿ ಈ ರೀತಿಯ ಸಮಸ್ಯೆಗಳು ಮೇಲಿಂದಮೇಲೆ ಆಗುತ್ತಲೆ ಇರುತ್ತವೆ ಇಷ್ಟೆಲ್ಲಾ ಸಮಸ್ಯೆಗಳು ಆದರೂ ಹಾಸ್ಟೆಲ್ ಪಕ್ಕದಲ್ಲೇ ಇರುವ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಣ್ಣು ಮುಂಚಿ ಕುಳಿತಿದ್ದು ಸರಿಯಾಗಿ ಹಾಸ್ಟೆಲ್ ನಿರ್ವಹಣೆ ಮಾಡದ ವಾರ್ಡನ್ ಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದ್ದಾರೆ, ಹಾಸ್ಟೆಲ್ ಹೊರಗಡೆ ಓಡಾಡುವ ಪುಂಡಪೋಕರಿಗಳನ್ನು ಕುರಿತು ವಿದ್ಯಾರ್ಥಿನಿಯರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ರಾಣೇಬೆನ್ನೂರು

ಈ ಕೂಡಲೇ ವಾರ್ಡನ್ ಬದಲಾವಣೆ ಮಾಡಿ ಊಟದ ವ್ಯವಸ್ಥೆ ಸರಿಪಡಿಸಿ, ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಸರಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿನಿಯರನ್ನು ವಂಚಿಸುತ್ತಿರುವ ವಿದ್ಯಾರ್ಥಿ ವಿರೋಧಿ ನೀತಿ ಸರಿಯಲ್ಲ ಎಂದು ಗಂಭೀರವಾಗಿ ಎಸ್ಎಫ್ಐ ಆರೋಪ ಮಾಡಿದೆ. ರಾಣೇಬೆನ್ನೂರು

mess

ಇದನ್ನು ಓದಿ : ಬೆರಳೆಣಿಕೆ ಸಂಖ್ಯೆಯ ಬ್ರಾಹ್ಮಣಶಾಹಿ ಚಿಂತನೆ ಇಂದು ಬಹುಸಂಖ್ಯಾತರನ್ನು ಆಳುತ್ತಿದೆ, ಇದರ ವಿರುದ್ಧ ಹೋರಾಡಬೇಕಿದೆ – ಕೆ.ರಾಧಾಕೃಷ್ಣನ್ ಕರೆ

ವಿದ್ಯಾರ್ಥಿನಿಯರಿಗೆ ಸರಿಯಾದ ಸರಕಾರಿ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದು ಖಂಡನೀಯ. ಹಾಸ್ಟೆಲ್ ನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಅನುಮಾನ ರೂಪದಲ್ಲಿ ನೋಡುತ್ತಿರುವ ಅಧಿಕಾರಿಗಳು, ಮೇಲ್ವಿಚಾರಕರು ವಿದ್ಯಾರ್ಥಿನಿಯರ ಸ್ಥಾನದಲ್ಲಿ ತಮ್ಮ ಮಕ್ಕಳು ಇದ್ದಾರೆ ಎಂದು ಮರೆಯಬಾರದು. ಹಾಸ್ಟೆಲ್ ಒಳಗಡೆ ಸಿಬ್ಬಂದಿಗಳು ಅಸಭ್ಯ ವರ್ತನೆ ಮಾಡುತ್ತಿರುವುದು ನಾಚಿಕೆ ವಿಷಯವಾಗಿದೆ, ಊಟದ ವ್ಯವಸ್ಥೆಯಲ್ಲಿ ತಾರತಮ್ಯ ಬಿಟ್ಟು ಅನಿಯಮಿತ ಹಾಗೂ ಉತ್ತಮ ಗುಣಮಟ್ಟದ ಆಹಾರ ನೀಡಬೇಕು. ಅಡುಗೆ ಸಿಬ್ಬಂದಿಗಳು ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯ ವರ್ತನೆಯಿಂದ ನಡೆದುಕೊಳ್ಳುಬಾರದು, ವಿದ್ಯಾರ್ಥಿನಿಯರ ಗುಪ್ತ ಸಮಸ್ಯೆಗಳಿಗೆ ಹಾಗೂ ಅನೇಕ ಸಮಸ್ಯೆಗಳಿಗೆ ವಾರ್ಡನ್ ಸ್ಪಂದಿಸುವದಿಲ್ಲ ಆದರಿಂದ ವಾರ್ಡನ್ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕಾಧಿಕಾರಿಗಳು ವಸತಿ ನಿಲಯದ ಮೇಲ್ವಿಚಾರಕಿ ಮೇಲೆ ಈಗಾಗಲೇ ನೋಟಿಸ್ ಹೊರಡಿಸಿದ್ದು ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶಕೊಡ ಈ ರೀತಿಯ ತಪ್ಪುಗಳನ್ನು ಮರಕಳಿಸಿದ್ದರೆ ಶಿಸ್ತು ಕ್ರಮಜರುಗಿಸಲಗುವುದು ಎಂದು ಉಳಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಲ್ಲಿಗೆ ಆರ್ ಜಿ, ಸಾವಿತ್ರ ಲಮಾಣಿ, ಐಶ್ವರ್ಯ, ಸಂಗೀತ, ರಾಜೇಶ್ವರಿ, ಜ್ಯೋತಿ, ಮಂಜುಳಾ, ಸ್ನೇಹ, ಪರಿಮಳಾ, ರೂಪ, ಅಶ್ವಿನಿ, ಕಾವೇರಿ ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಇದನ್ನು  ನೋಡಿ : ಮೃಣಾಲ್ ಸೆನ್ 1೦೦: ವೆಬಿನಾರ್ ಸರಣಿ : ಉಪನ್ಯಾಸ 5

Donate Janashakthi Media

Leave a Reply

Your email address will not be published. Required fields are marked *