ಫ್ಯಾನ್ಸಿ ಸ್ಟೋರ್ ಗೆ ಬರುವ ಹೆಣ್ಣು ಮಕ್ಕಳಿಗೆ ಮಾಲಿಕನಿಂದ ಲೈಂಗಿಕ ಕಿರುಕುಳ

ಬೆಂಗಳೂರು: ಹೆಣ್ಣು ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ರಕ್ಷಣೆಯೇ ಇಲ್ಲ ಎಂಬಂತಾಗಿದೆ. ಬೆಂಗಳೂರಿನಲ್ಲಿಯೂ ಸಹ ದಿನದಿಂದ ದಿನಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ಗಳು ಹೆಚ್ಚಾಗ್ತಿದೆ. ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿಯಲ್ಲಿ ಫ್ಯಾನ್ಸಿ ಸ್ಟೋರಿನ ಮಾಲೀಕ ಅಂಗಡಿಗೆ ಬರುವ ಗ್ರಾಹಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಇದ್ರಿಂದ ತೀವ್ರ ಮುಜುಗರಕ್ಕೀಡಾದ ಮಹಿಳೆಯರು ಸ್ಥಳೀಯ ಮುಖಂಡರ ಗಮನಕ್ಕೆ ತಂದಿದ್ದಾರೆ.ಫ್ಯಾನ್ಸಿ ಸ್ಟೋರ್ ಗೆ ಬರುವ ಹೆಣ್ಣು ಮಕ್ಕಳಿಗೆ ಗುಪ್ತಾಂಗ ತೋರಿಸಿ ಅಸಭ್ಯ ರೀತಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬರ್ತಿದೆ. ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆ ಸ್ಥಳೀಯ ಮುಖಂಡರು ಭೇಟಿ ಅಂಗಡಿ ಬಳಿ ತೆರಳಿ ಮಾಲೀಕನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಐದು ಸಾವಿರ ಕೋಟಿ ಬೇನಾಮಿ ಆಸ್ತಿ ಮಾಡಿದ್ದಾರೆ: ಜನಾರ್ದನ ರೆಡ್ಡಿ ಆರೋಪ

ಅಲ್ಲದೆ ವಿಡಿಯೋ ಮಾಡಿ ಬೈದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮೂಲತಃ ಈತ ಕರ್ನಾಟಕದವರಲ್ಲ. ಬೇರೆಡೆಯಿಂದ ಬಂದು ಇಲ್ಲಿ ಫ್ಯಾನ್ಸಿ ಸ್ಟೋರ್ ಇಟ್ಟುಕೊಂಡಿದ್ದನು ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, ವಲಸಿಗರ ಕಾಟ ಹೆಚ್ಚಾಗಿದೆ ಎಂಬ ಕಮೆಂಟ್ಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇದನ್ನೂ ನೋಡಿ: ಮೈಸೂರು ದಸರಾ 2024| ಜನಪದ ಝೇಂಕಾರ – ಜನ್ನಿ ಮತ್ತು ತಂಡJanashakthi Media

Donate Janashakthi Media

Leave a Reply

Your email address will not be published. Required fields are marked *