ಸೂಟ್ ಕೇಸ್​ನಲ್ಲಿ ಬಾಲಕಿ ಶವ ಪತ್ತೆಯಾದ ಪ್ರಕರಣ: 7 ಮಂದಿ ಬಂಧನ

Please follow and like us:
ಬೆಂಗಳೂರು: ಬಾಲಕಿಯ ಶವವೊಂದು ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್ ಕೇಸ್​ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ನಗರದ ಪೊಲೀಸರು ಬಿಹಾರದಲ್ಲಿ ಅರೆಸ್ಟ್ ಮಾಡಿದ್ದಾರೆ. 7 ರಲ್ಲಿ ಮೂವರ ವಿವರ ಲಭ್ಯವಾಗಿದ್ದು, ಅವರನ್ನು ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂದು ಗುರುತಿಸಲಾಗಿದೆ.

ಆಶಿಕ್ ಕುಮಾರ್ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಬಂಧಿತ ಎಲ್ಲಾ ಆರೋಪಿಗಳು ಬಿಹಾರದ ನವಾಡ ಜಿಲ್ಲೆಯವರಾಗಿದ್ದು, ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ಸೂರ್ಯನಗರ ಪೊಲೀಸರು ಬಿಹಾರದಿಂದ ಕರ್ನಾಟಕಕ್ಕೆ ಕರೆತರುತ್ತಿದ್ದಾರೆ.

ಇದನ್ನೂ ಓದಿ: ನಾನು ಭಾರತವನ್ನು ತೊರೆಯುವ ಮುನ್ನ ಅರುಣ್ ಜೇಟ್ಲಿಗೆ ತಿಳಿಸಿದ್ದೆ:‌ ವಿಜಯ್ ಮಲ್ಯ

ಈ ಪ್ರಕರಣ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ಘಟನೆ ನಮ್ಮ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ನಮಗೆ ಸಂಬಂಧಿಸಿರಬಹುದು ಎಂಬ ಕಾರಣಕ್ಕೆ ನಾವು ಭಾಗಿಯಾಗಿದ್ದೇವೆ. ಸೂಟ್‌ಕೇಸ್‌ನಲ್ಲಿ ಶವ ಮಾತ್ರ ಇತ್ತು. ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 21 ರಂದು ಚಂದಾಪುರ ರೈಲ್ವೆ ಬ್ರಿಡ್ಜ್‌ ಬಳಿ ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಹತ್ಯೆಯಾದ ಬಾಲಕಿಯನ್ನು ರೀಮಾ (17) ಎಂದು ಗುರುತಿಸಲಾಗಿತ್ತು. ಪ್ರಾಥಾಮಿಕ ತನಿಖೆಯಲ್ಲಿ, ಬೇರೆಡೆ ಕೊಲೆ ಮಾಡಿ, ಶವ ಇಲ್ಲಿ ಎಸೆಯಲಾಗಿದೆ ಎಂದು ತಿಳಿದು ಬಂದಿತ್ತು. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಇದನ್ನೂ ನೋಡಿ: ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media

0

Please follow and like us:
Donate Janashakthi Media

Leave a Reply

Your email address will not be published. Required fields are marked *