ಮುಂಡಗೋಡ: ಅಂಗನವಾಡಿಗೆ ಹೋಗುತ್ತಿದ್ದ ಐದು ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಮುಂಡಗೋಡ ದಲ್ಲಿ ನಡೆದಿದೆ.
ಪಟ್ಟಣದ ಮಾರಿಕಾಂಬಾ ನಗರದ ಅಂಗನವಾಡಿಯಲ್ಲಿ ಕಲಿಯುತ್ತಿದ್ದ ಐದು ವರ್ಷದ ಬಾಲಕಿ ಮಯೂರಿ ಸುರೇಶ ಕುಂಬಳಪ್ಪನವರ ಹಾವು ಕಡಿತದಿಂದ ಮಂಗಳವಾರ ಮೃತಪಟ್ಟಿದ್ದಾಳೆ.
ಇದನ್ನೂ ಓದಿ : ದಕ್ಷಿಣ ಇಥಿಯೋಪಿಯಾ: ಭೀಕರ ಕಾರು ಅಪಘಾತ – 66 ಮಂದಿ ಸಾವು
ಅಂಗನವಾಡಿಗೆ ಹೋಗಿದ್ದ ಮಯೂರಿ, ಮೂತ್ರ ವಿರ್ಜನೆಗೆಂದು ಅಂಗನವಾಡಿಯ ಹಿಂಬದಿಯಲ್ಲಿ ತೆರಳಿದಾಗ ಹಾವು ಕಡಿದಿದೆ. ರಕ್ತಸ್ರಾವ ಆಗುತ್ತಿರುವುದನ್ನು ಕಂಡ ಅಂಗನವಾಡಿ ಸಿಬ್ಬಂದಿ, ಕೂಡಲೇ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾಳೆ. ಬಾಲಕಿ ಮೃತಪಟ್ಟಿರುವುದನ್ನು ಕಿಮ್ಸ್ ವೈದ್ಯರು ದೃಢಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ನೋಡಿ : ನಡುರಸ್ತೇಲಿ ಶರ್ಟ್ ಬಿಚ್ಚಿ ಚಾಟಿಯಿಂದ ಬಾರಿಸಿಕೊಂಡು ಹುಚ್ಚಾಟ ಮೆರೆದ ಅಣ್ಣಾಮಲೈ Janashakthi Media