“ಚುನಾವಣೆ ಕದ್ದ ಮ್ಯಾಕ್ರಾನ್ ತೊಲಗು” : ಫ್ಯಾಸಿಸ್ಟ್-ಅನುಮೋದಿತ ಪ್ರಧಾನಿ ವಿರುದ್ಧ ಆಕ್ರೋಶ

– ವಸಂತರಾಜ ಎನ್.ಕೆ

ತಿಂಗಳುಗಟ್ಟಲೆ ವಿಳಂಬ ಮಾಡಿದ ನಂತರ, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅಂತಿಮವಾಗಿ ಫ್ರೆಂಚ್ ಜನರಿಗೆ “ನಿಮ್ಮ ಜನಾದೇಶ ಲೆಕ್ಕಕ್ಕಿಲ್ಲ” ನೇರವಾಗಿ ಹೇಳಿದ್ದಾರೆ. ಜುಲೈ ಸಂಸತ್ತಿನ ಚುನಾವಣೆಯಲ್ಲಿ, ಜನ ಎಡಪಂಥೀಯ ನ್ಯೂ ಪಾಪ್ಯುಲರ್ ಫ್ರಂಟ್ (NPF) ಒಕ್ಕೂಟವನ್ನು ಮೊದಲ ಸ್ಥಾನದಲ್ಲಿ ಇರಿಸಿದ್ದನ್ನು ನಿರ್ಲಕ್ಷಿಸಿ, ಮ್ಯಾಕ್ರನ್ ಬಲಪಂಥೀಯ ವ್ಯಕ್ತಿ ಮೈಕೆಲ್ ಬಾರ್ನಿಯರ್ ಅವರನ್ನು ದೇಶದ ಮುಂದಿನ ಪ್ರಧಾನ ಮಂತ್ರಿ ಎಂದು ಹೆಸರಿಸಿದ್ದಾರೆ. ಚುನಾವಣೆ

ಬಾರ್ನಿಯರ್ ನಾಲ್ಕನೇ ಸ್ಥಾನದ ಪಕ್ಷವಾದ ರಿಪಬ್ಲಿಕನ್ ಪಕ್ಷಕ್ಕೆ ಸೇರಿದ್ದಾರೆ. ಅವರು 1990 ರ ದಶಕದ ಆರಂಭದಿಂದಲೂ ಹಲವಾರು ಸಚಿವ ಸಂಪುಟಗಳಲ್ಲಿ, ಪರಿಸರ ಮಂತ್ರಿ, ಯುರೋಕೂಟ ವ್ಯವಹಾರಗಳ ಮಂತ್ರಿ, ವಿದೇಶಾಂಗ ಮಂತ್ರಿ, ಕೃಷಿ ಮಂತ್ರಿ. ತೀರಾ ಇತ್ತೀಚೆಗೆ, ಅವರು ಯುರೋಪಿಯನ್ ಒಕ್ಕೂಟದ ಬ್ರೆಕ್ಸಿಟ್ಸ ಮಾಲೋಚಕರಾಗಿದ್ದರು. ಚುನಾವಣೆ

ಮರೀನ್ ಲೆ ಪೆನ್ ಮತ್ತು ಜೋರ್ಡಾನ್ ಬಾರ್ಡೆಲ್ಲಾ ಅವರ ಫ್ಯಾಸಿಸ್ಟ್ ‘ನ್ಯಾಷನಲ್ ರ್ಯಾಲಿ’ ಪಕ್ಷದ ವಿರುದ್ಧ ಹೋರಾಡುವೆ ಎಂದು ಹೊರಟಿದ್ದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹೊಸ ಪ್ರಧಾನಿಗೆ ಅಗತ್ಯ ಬೆಂಬಲವನ್ನು ಪಡೆಯಲು , ಅದೇ ಫ್ಯಾಸಿಸ್ಟ್ ಪಕ್ಷದ ಬೆಂಬಲವನ್ನು ಪಡೆಯುವಲ್ಲಿ ಬಂದು ತಲುಪಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ; ಪ್ರಿಯಾಂಕ್ ಖರ್ಗೆ

ಎಡಪಂಥೀಯ ದೈನಿಕ “ಲಿಬರೇಶನ್” ನ ಸೆ.7 ರ ಸಂಚಿಕೆಯು ಪ್ರಧಾನ ಮಂತ್ರಿ ಮೈಕೆಲ್ ಬಾರ್ನಿಯರ್ ‘ ಚಿತ್ರದ ಮೇಲೆ “ಫ್ಯಾಸಿಸ್ಟ್ ಮರೀನ್ ಲೆ ಪೆನ್ ರಿಂದ ಅನುಮೋದಿಸಲಾಗಿದೆ’ ಎಂಬ ಮೊಹರಿನ ಜತೆ ಪ್ರಕಟಿಸಿದೆ. ಅಧ್ಯಕ್ಷರು ಈ ಬೇಸಿಗೆಯ ಚುನಾವಣೆಯಲ್ಲಿ ತಮ್ಮ ರಿನಾಯಸೆನ್ಸ್ ಪಕ್ಷ ಅಣಿನೆರೆಸಿದ ಎನ್ಸೆಂಬಲ್ ಕೂಟವನ್ನು ಪ್ರಮುಖ ಫ್ಯಾಸಿಸ್ಟ್-ವಿರೋಧಿ ಶಕ್ತಿಯಾಗಿ ಪ್ರಸ್ತುತ ಪಡಿಸಿದರು. ಆದರೆ ಈಗ ಕಾರ್ಮಿಕ ಬೆಂಬಲಿತ NPF ಅನ್ನು ಅಧಿಕಾರದಿಂದ ಹೊರಗಿಡುವ ಯೋಜನೆಯ ಭಾಗವಾಗಿ ಅವರು ಆಗಸ್ಟ್ ಅಂತ್ಯದಲ್ಲಿ ರಾಷ್ಟ್ರೀಯ ರ್ಯಾಲಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ಎಲ್ಲಾ ರಾಜಕೀಯ ಸಾಮಾನ್ಯ ಜ್ಞಾನದ ವಿರುದ್ಧ, ಜೂನನ್ ನಲ್ಲಿ ನಡೆದ EU ಸಂಸತ್ತಿನ ಮತದಾನದಲ್ಲಿ ರಾಷ್ಟ್ರೀಯ ರ್ಯಾಲಿಯು ಅತಿದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿದ ನಂತರ ಮ್ಯಾಕ್ರನ್ ಚುನಾವಣೆಗಳನ್ನು ಘೋಷಿಸಿದರು. ಹಿಂದೆ ‘ನ್ಯಾಷನಲ್ ಫ್ರಂಟ್’ ಎಂದು ಕರೆಯಲಾಗುತ್ತಿತ್ತು. ನಾಜಿಗಳಿಂದ ಯೆಹೂದಿ ಹತ್ಯಾಕಾಂಡದ ನಡೆದೇ ಇಲ್ಲವೆಂದು ವಾದಿಸುವ ಮತ್ತು ಯೆಹೂದಿ-ವಿರೋಧಿ ಮತ್ತು ಉಗ್ರ ರಾಷ್ಟ್ರವಾದಿ ಶಕ್ತಿಗಳನ್ನು ಒಂದುಗೂಡಿಸಲು 1972 ರಲ್ಲಿ ಜೀನ್-ಮೇರಿ ಲೆ ಪೆನ್ ಅವರು ಪಕ್ಷವನ್ನು ಸ್ಥಾಪಿಸಿದರು. ಚುನಾವಣೆ

ಅದು ತನ್ನ ನವ-ನಾಜಿ ಬೇರುಗಳನ್ನು ಮರೆಮಾಚಲು ಪ್ರಯತ್ನಿಸಿದರೂ, ಪಕ್ಷವು ತನ್ನ ಬಲವಾದ ಜನಾಂಗೀಯವಾದಿ, ವಲಸೆ- ವಿರೋಧಿ ಧೋರಣೆಗಳನ್ನು ಉಳಿಸಿಕೊಂಡಿದೆ. ಯುರೋಪಿನ ಬೇರೆಡೆ ಇರುವ (ಉದಾಹರಣೆಗೆ ಇತ್ತೀಚೆಗೆ ಇಟಲಿಯಲ್ಲಿ ಅಧಿಕಾರ ವಹಿಸಿಕೊಂಡ) ಫ್ಯಾಸಿಸ್ಟ್ ಪಕ್ಷಗಳಂತೆ, ರಾಷ್ಟ್ರೀಯ ರ್ಯಾಲಿಯು ಬಂಡವಾಳಶಾಹಿ ಆಳುವ ವರ್ಗದ ನವ ಉದಾರವಾದಿ ಸಿದ್ಧಾಂತಕ್ಕೆ ತನ್ನನ್ನು ತಾನು ಹೊಂದುವಂತೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದೆ. ಇದು ತನ್ನ ದೀರ್ಘಕಾಲಿಕ ಯುರೋಕೂಟ ಮತ್ತು ಯೂರೋ ಕರೆನ್ಸಿ ವಿರೋಧಿ ನಿಲುವನ್ನು ಕೈಬಿಟ್ಟಿದೆ ಮತ್ತು ಅವನ್ನು ಒಪ್ಪಿಕೊಂಡಿದೆ. ಚುನಾವಣೆ

ಎಡಪಂಥೀಯ NPF ಅಧಿಕಾರಕ್ಕೆ ಬರುವುದನ್ನು ತಡೆಯುವುದಾದರೆ, ಮತ್ತು ದೈತ್ಯ ಕಾರ್ಪೊರೆಟ್ ಗಳನ್ನು ಖುಶ್ ಮಾಡುವುದಾದರೆ, ತಾನು ನಡುಪಂಥೀಯ ಫ್ಯಾಸಿಸ್ಟ್-ವಿರೋಧಿ ಎನ್ನುವ ಮ್ಯಾಕ್ರನ್ ಗೆ ಫ್ಯಾಸಿಸ್ಟ್ ಬೆಂಬಲವನ್ನು ಅವಲಂಬಿಸುವುದು ಸಮಸ್ಯೆಯಲ್ಲವೆಂದು ತೋರುತ್ತದೆ.

NPF ನಾಲ್ಕು ಎಡ ಪಕ್ಷಗಳ ಒಕ್ಕೂಟವಾಗಿದೆ— ಫ್ರೆಂಚ್ ಕಮ್ಯುನಿಸ್ಟ್ ಪಾರ್ಟಿ (PCF), ಲಾ ಫ್ರಾನ್ಸ್ ಇನ್ಸೌಮಿಸ್ (ಫ್ರಾನ್ಸ್ ಅನ್ಬೋಡ್, ಅಥವಾ LFI, ಜೀನ್-ಲುಕ್ ಮೆಲೆನ್ಚಾನ್ ಪಕ್ಷ), ನಡು-ಎಡಪಂಥೀಯ ಸಮಾಜವಾದಿ ಪಕ್ಷ (PS), ಮತ್ತು ಲೆಸ್ ಎಕಾಲಜಿಸ್ಟ್ಸ್ (ಹಸಿರು ಪರಿಸರವಾದಿ ಪಕ್ಷ). ಅವು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಫ್ಯಾಸಿಸ್ಟ್ ವಿರೋಧಿ ರಂಗವನ್ನು ರೂಪಿಸಲು ಒಗ್ಗೂಡಿದ್ದವು.

ಇದು ಸಂಘಟಿತ ಕಾರ್ಮಿಕರು, ಪ್ರಗತಿಪರ ಸಾಮಾಜಿಕ ಚಳುವಳಿಗಳು, ಮಹಿಳಾ ಗುಂಪುಗಳು ಮತ್ತು ಹವಾಮಾನ ನ್ಯಾಯ ಕಾರ್ಯಕರ್ತರ ಬೆಂಬಲವನ್ನು ಹೊಂದಿತ್ತು. 150-ಆಂಶಗಳ NPF ಕಾರ್ಯಕ್ರಮವು – ದೇಶದ ಭಾರೀ ಶ್ರೀಮಂತರ ಮೇಲಿನ ಪ್ರಮುಖ ತೆರಿಗೆಗಳು, ಸಾರ್ವಜನಿಕ ಸೇವೆಗಳು ಮತ್ತು ವಸತಿಗಳಲ್ಲಿನ ಬೃಹತ್ ಹೂಡಿಕೆಗಳು, ನಿವೃತ್ತಿ ವಯಸ್ಸನ್ನು ಹೆಚ್ಚಿಸಿದ ಮ್ಯಾಕ್ರಾನ್ನ ಜನಪ್ರಿಯವಲ್ಲದ ಪಿಂಚಣಿ ಸುಧಾರಣೆಯ ರದ್ದತಿ, ಹಣದುಬ್ಬರವನ್ನು ಎದುರಿಸಲು ಬೆಲೆ ಸ್ತಂಭನ, ಯುರೋಕೂಟದ ಕಠಿಣ ನಿಯಮಗಳ ನಿರಾಕರಣೆ, ಕನಿಷ್ಠ ವೇತನದಲ್ಲಿ ಹೆಚ್ಚಳ, ಮತ್ತು ಇನ್ನಷ್ಟು ಅಂಶಗಳನ್ನು ಹೊಂದಿತ್ತು.

ಒಟ್ಟಾಗಿ, NPF ಪಕ್ಷಗಳು ಜುಲೈ ನಲ್ಲಿ ಚುನಾವಣಾ ಪಂಡಿತರ ಭವಿಷ್ಯವನ್ನು ಹುಸಿಗೊಳಿಸಿ, ಫ್ಯಾಸಿಸ್ಟ್ ‘ರಾಷ್ಟ್ರೀಯ ರ್ಯಾಲಿ’ ಯನ್ನು (142 ಸೀಟುಗಳು) ಮೂರನೇ ಸ್ಥಾನಕ್ಕೆ ತಳ್ಳಿದವು. ಮ್ಯಾಕ್ರನ್ ಅವರ ರಿನಾಯಸೆನ್ಸ್ ಪಕ್ಷ ಅಣಿನೆರೆಸಿದ ಎನ್ಸೆಂಬಲ್ ಕೂಟವು, ಎರಡನೇ ಸ್ಥಾನವನ್ನು (159 ಸೀಟು) ಪಡೆದುಕೊಂಡಿತು. ಮೊದಲ ಸ್ಥಾನದಲ್ಲಿದ್ದ ಕೂಟವಾದ NPF ಗೆ (180 ಸೀಟುಗಳು) ಪ್ರಧಾನಿಯಾಗಿ ನೇಮಕವಾಗುವ ಕಾನೂನುಬದ್ಧ ಹಕ್ಕನ್ನು ನೀಡಿತು. ಮತದಾರರ ಜನಾದೇಶವನ್ನು ಬಹಿರಂಗವಾಗಿ ಧಿಕ್ಕರಿಸಿ, NPF ನ ಆಯ್ಕೆಯಾದ ಲೂಸಿ ಕ್ಯಾಸ್ಟೆಟ್ಸ್ ಅವರನ್ನು ನೇಮಿಸುವುದನ್ನು ವಿಳಂಬಗೊಳಿಸಲು ಮ್ಯಾಕ್ರನ್ ತಿಂಗಳುಗಳ ಕಾಲ ಒಂದರ ನಂತರ ಒಂದರಂತೆ ನೆಪಗಳನ್ನು ಹೂಡಿದರು. ಮ್ಯಾಕ್ರನ್ ವಕ್ತಾರರು ಕಳೆದ ವಾರ NPF ರಚಿಸಿದ ಸರ್ಕಾರವು “ತಕ್ಷಣವೇ ಅದರ ವಿರುದ್ಧ 350 ಕ್ಕೂ ಹೆಚ್ಚು ಸಂಸದರ
ಬಹುಮತವನ್ನು ಹೊಂದಿರುತ್ತದೆ, ಇದು ಕಾರ್ಯನಿರ್ವಹಿಸದಂತೆ ಪರಿಣಾಮಕಾರಿಯಾಗಿ ತಡೆಯುತ್ತದೆ.” ಎಂದರು.

ಇದರರ್ಥ NPF ಸರಕಾರಕ್ಕೆ ಮಾಕ್ರಾನ್ ಅವರ ಬೆಂಬಲವಿಲ್ಲ ಎನ್ನುವುದು ಇದರರ್ಥ, ಏಕೆಂದರೆ ಎರಡನೆಯ ಸುತ್ತಿನ ಚುನಾವಣೆಯಲ್ಲಿ ಫ್ಯಾಸಿಸ್ಟರನ್ನು ಸೋಲಿಸಲು NPF (180) ಮತ್ತು ಅದರ ಜತೆ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದ ಮ್ಯಾಕ್ರಾನ್ ಅವರ ಎನ್ಸೆಂಬಲ್ ಕೂಟ (159)ಗಳಿಗೆ ಒಟ್ಟಾಗಿ 577 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ (339 ಸೀಟುಗಳ) ಬಹುಮತವಿದೆ.

ಹೀಗೆ ಹೇಳುವಾಗ, ಮ್ಯಾಕ್ರನ್ ನಿಜವಾಗಿಯೂ ಒಪ್ಪಿಕೊಳ್ಳುತ್ತಿದ್ದ ಸಂಗತಿಯೆಂದರೆ, ಅವರು ಕೂಟ ಫ್ಯಾಸಿಸ್ಟರೊಂದಿಗೆ ಮೈತ್ರಿ ಮಾಡಿಕೊಂಡಿದೆ ಅಂತ. 577-ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ, NPF ವಿರುದ್ಧ 350 ಸಂಸದರ ಬಹುಮತವನ್ನು “ಪಡೆಯುವ ಏಕೈಕ ಮಾರ್ಗವೆಂದರೆ ಮ್ಯಾಕ್ರನ್ ಕೂಟದ 159 ಸ್ಥಾನಗಳನ್ನು ಫ್ಯಾಸಿಸ್ಟ್ 142 ಮತ್ತು ಬಾರ್ನಿಯರ್ ನ ಬಲಪಂಥೀಯ ರಿಪಬ್ಲಿಕನ್ ಪಕ್ಷದ 61 ಕ್ಕೆ (ಒಟ್ಟು 362) ಸೇರಿಸುವುದು. ಮ್ಯಾಕ್ರನ್ ಅವರು ಉಗ್ರ ಬಲಪಂಥೀಯರೊಂದಿಗೆ ಶಾಮೀಲಾಗಿದ್ದಾರೆ ಎಂದು ಆ ಸಮಯದಲ್ಲಿ ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ, ಆದರೆ ಅವರ ಸ್ವಂತ ಕಚೇರಿ ಒದಗಿಸಿದ ಗಣಿತವು ಬಾರ್ನಿಯರ್ ಅನ್ನು ಸ್ಥಾಪಿಸಲು ಲೆ ಪೆನ್ ಜೊತೆ ಸೇರಿಕೊಂಡರು ಎಂದು ತೋರಿಸುತ್ತದೆ.

2021 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವಾಗ ಹೊಸ ಪ್ರಧಾನಿ ತೆಗೆದುಕೊಂಡ ಉಗ್ರ ವಲಸೆ ವಿರೋಧಿ ನಿಲುವು, ನಿಸ್ಸಂದೇಹವಾಗಿ ಅವರನ್ನು ಬೆಂಬಲಿಸಲು ರಾಷ್ಟ್ರೀಯ ರ್ಯಾಲಿಯನ್ನು ಮನವೊಲಿಸಲು ಸಹಾಯ ಮಾಡಿತು. ಬಾರ್ನಿಯರ್ ಯಾವ ನೀತಿಗಳನ್ನು ಮುಂದಿಡುತ್ತಾರೆ ಮತ್ತು ಬಜೆಟ್ ನಲ್ಲಿ ಅವರು “ಯಾರೊಂದಿಗೆ ಯಾವ ರಾಜಿ ಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡಲು ತನ್ನ ಪಕ್ಷವು ಕಾಯುತ್ತಿದೆ” ಎಂದು ಲೆ ಪೆನ್ ಘೋಷಿಸಿದರು.

NPF ಎಡ ಒಕ್ಕೂಟದ ಪಾಲುದಾರರೆಲ್ಲರೂ ಮೇಲಿನಿಂದ ಹರಿಯಬಿಟ್ಟ ಮ್ಯಾಕ್ರನ್ ದಂಗೆಯನ್ನು ಬಲವಾಗಿ ತಿರಸ್ಕರಿಸಿದ್ದಾರೆ. ಫ್ರೆಂಚ್ ಕಮ್ಯುನಿಸ್ಟ್ ಪಕ್ಷದ (PCF) ಪತ್ರಿಕೆಯಾದ ಲೆ ಹ್ಯೂಮಾನಿಟೆ (L Humanité) ನಲ್ಲಿ ಬಾರ್ನಿಯರ್ “ಹಳೆಯ ಪ್ರಪಂಚವನ್ನು ಮತ್ತು ಮ್ಯಾಕ್ರೋನಿಸ್ಟ್ ನೀತಿಯ ನಿರಂತರತೆಯನ್ನು ಪ್ರತಿನಿಧಿಸುತ್ತಾರೆ” ಎಂದು ಹೇಳಿದೆ. PCF ಸೆನೆಟರ್ ಪಿಯರೆ ಔಜೌಲಿಯಾಸ್ ಅವರು ಬಾರ್ನಿಯರ್ ನ್ನು “ ಸಾಮಾಜಿಕ ವಿರೋಧಿ ನೀತಿಯ ಸೇವೆಯಲ್ಲಿ ಸೋತ ಅಧ್ಯಕ್ಷರಿಂದ ನೇಮಕಗೊಂಡ ಅಲ್ಪಸಂಖ್ಯಾತ ಪಕ್ಷದ ಅಲ್ಪಸಂಖ್ಯಾತ ಅಭ್ಯರ್ಥಿ” ಎಂದು ಕರೆದರು.

ಈ ನೇಮಕಾತಿಯು ಪ್ರಜಾಪ್ರಭುತ್ವ ಮತ್ತು ಫ್ರೆಂಚ್ ಜನರಿಗೆ “ಭಯಾನಕ ಹೊಡೆತವಾಗಿದೆ” ಎಂದು ಅವರು ಹೇಳಿದರು. “ನಾನು ತುಂಬಾ ಕೋಪಗೊಂಡಿದ್ದೇನೆ, ಲಕ್ಷಾಂತರ ಫ್ರೆಂಚ್ ಮತದಾರರಂತೆ ದ್ರೋಹ ಎಸಗಲಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು NPF ನ ಪ್ರಧಾನಿ ಆಯ್ಕೆ ಲೂಸಿ ಕ್ಯಾಸ್ಟೆಟ್ಸ್ ಕ್ಯಾಸ್ಟೆಟ್ಸ್ ಹೇಳಿದರು. “ಅಧ್ಯಕ್ಷರು ರಾಷ್ಟ್ರೀಯ ರ್ಯಾಲಿಯೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ” ಅವರು ಬಾರ್ನಿಯರ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದಾಗಿ ಪ್ರತಿಜ್ಞೆ ಮಾಡಿದರು. ಗಣರಾಜ್ಯವನ್ನು ಫ್ಯಾಸಿಸಂನಿಂದ ರಕ್ಷಿಸುವ ಪ್ರಯತ್ನದಲ್ಲಿ ಬಾರ್ನಿಯರ್ ಮತ್ತು ಅವರ ಪಕ್ಷವು ಸೇರಲಿಲ್ಲ ಮತ್ತು ಮ್ಯಾಕ್ರನ್ ಅವರ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು “ಆಡಳಿತದ ಬಿಕ್ಕಟ್ಟನ್ನು ಸೂಚಿಸುತ್ತವೆ” ಎಂದು ಸಮಾಜವಾದಿ ಪಕ್ಷದ ವಕ್ತಾರರು ಹೇಳಿದ್ದಾರೆ.

“ಮ್ಯಾಕ್ರನ್ ಅವರು ಏಳು ವರ್ಷಗಳಿಂದ ಅನುಸರಿಸುತ್ತಿರುವ ನೀತಿಯನ್ನು ಮುಂದುವರಿಸುವ ಸಾಮರ್ಥ್ಯವನ್ನು ಹೊಂದಿರುವ ತದ್ರೂಪಿಯನ್ನು ಹುಡುಕುತ್ತಿದ್ದರು” ಎಂದು ಪರಿಸರ ಪಕ್ಷದ ನಾಯಕ ಮರೀನ್ ಟೊಂಡೆಲಿಯರ್ ಹೇಳಿದರು. “ಅವರು ಅವನನ್ನು ಮೈಕೆಲ್ ಬಾರ್ನಿಯರ್.” ನಲ್ಲಿ ಕಂಡುಕೊಂಡರು. NPF ನ ಅತಿದೊಡ್ಡ ಪಕ್ಷದ ಮುಖ್ಯಸ್ಥ ಜೀನ್-ಲುಕ್ ಮೆಲೆನ್ಚೋನ್, ಅಧ್ಯಕ್ಷರು “ಚುನಾವಣೆಯನ್ನು ಕದ್ದಿದ್ದಾರೆ” ಎಂದು ಹೇಳಿದರು.” ಅವರು ಬಾರ್ನಿಯರ್ ಅವರ ಹಿಂದಿನ ಕರಾಳ ದಾಖಲೆಯನ್ನು ಎತ್ತಿ ತೋರಿಸಿದರು, ಇದರಲ್ಲಿ ಸಲಿಂಗಕಾಮದ ಅಪರಾಧೀಕರಣದ ವಿರುದ್ಧ ಮತ ಚಲಾಯಿಸುವುದು ಮತ್ತು ಸುಮಾರು 20 ವರ್ಷಗಳ ಹಿಂದೆ ಜನಾಭಿಪ್ರಾಯ ಸಂಗ್ರಹಣೆಯನ್ನು ಅತಿಕ್ರಮಿಸಿ ಸಂಸತ್ತಿನ ಮೂಲಕ ಯುರೋಪಿಯನ್ ಸಂವಿಧಾನವನ್ನು ಹೇರುವುದು ಸೇರಿದೆ.

ಫ್ರಾನ್ಸಿನ ಅತಿದೊಡ್ಡ ಕೇಂದ್ರೀಯ ಟ್ರೇಡ್ ಯೂನಿಯನ್ CGT, ಬಾರ್ನಿಯರ್ ಅವರ ನೇಮಕಾತಿಗೆ ಬಂಡವಾಳಶಾಹಿ ವರ್ಗವನ್ನು ಜವಾಬ್ದಾರ ಮಾಡಿದೆ. ದೇಶದ ಭಾರೀ ಮಾಲಕರ ಸಂಘ MEDEF’ ಪ್ರಧಾನ ಕಛೇರಿಯ ಹೊರಗೆ ರ್ಯಾಲಿ, CGT, ಯೂನಿಯನ್ ಸದಸ್ಯರು ಫ್ರಾನ್ಸ್ ಹಾಡುಹಗಲಲ್ಲೇ “ಪ್ರಜಾಪ್ರಭುತ್ವದ ಅಪಹರಣವನ್ನು ಅನುಭವಿಸಿದೆ” ಎಂದು ಘೋಷಿಸಿದರು.

MEDEF ನ ಪ್ರಧಾನ ಕಚೇರಿಯ ಮುಂಭಾಗದಲ್ಲಿ “ಸಂಬಳದಲ್ಲಿ ಹೆಚ್ಚಳ,” “ಪಿಂಚಣಿ ಸುಧಾರಣೆಯನ್ನು ರದ್ದುಗೊಳಿಸಿ,” ಮತ್ತು ಇತರ ಕಾರ್ಮಿಕ ಘೋಷಣೆಗಳನ್ನು ಘೋಷಿಸುವ ಪೋಸ್ಟರ್ ಗಳನ್ನು ಅಂಟಿಸಿ, ಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಲು ಹೊರಗೆ ಬಂದ ಸಿಬ್ಬಂದಿಯೊಂದಿಗೆ ಹೋರಾಡಿದರು. ಕಾರ್ಮಿಕರು ಮೇಲುಗೈ ಸಾಧಿಸಿದರು, ಮತ್ತು ಪೋಸ್ಟರ್ ಗಳನ್ನು ಹಚ್ಚದೆ ಬಿಡಲಿಲ್ಲ. CGT ಯ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ MEDEF ಗೆ ಹಣಕ್ಕೆ ಮರುಪಾವತಿಯಾಗಿ
ಮ್ಯಾಕ್ರಾನ್ ದೇಶವನ್ನು ರಾಷ್ಟ್ರೀಯ ರ್ಯಾಲಿ.” ಕೈಯಲ್ಲಿ ಇರಿಸುತ್ತಿದ್ದಾರೆ ಎಂದು ಹೇಳಿದರು.

ಕಳೆದ ವಾರಾಂತ್ಯದಲ್ಲಿ ಮ್ಯಾಕ್ರಾನ್ ಅವರ ಪ್ರಧಾನಿ ನೇಮಕದ ನಿರ್ಧಾರವನ್ನು ಪ್ರತಿಭಟಿಸಲು NPF, CGT ಕೊಟ್ಟ ಕರೆಗೆ ಪ್ಯಾರಿಸ್ ಸೇರಿದಂತೆ ಭಾರಿ ಸ್ಪಂಧನೆ ವ್ಯಕ್ತವಾಗಿದೆ. “ಚುನಾವಣೆ ಕದ್ದ ಮ್ಯಾಕ್ರಾನ್ ತೊಲಗು”, “ಅಧಿಕಾರ ಕದ್ದ ಮ್ಯಾಕ್ರಾನ್ ರಾಜೀನಾಮೆ ಕೊಡು”, “ಮ್ಯಾಕ್ರಾನ್! ನಾವು ನಿನ್ನನ್ನು ಆಳಲು ಬಿಡಲ್ಲ” ಎಂಬುದು ಎಲ್ಲ ಕಡೆ ಆಕ್ರೋಶಕ್ಕೆ ತುತ್ತಾಗಿದ್ದ ಮ್ಯಾಕ್ರಾನ್ ವಿರುದ್ಧ ಪ್ರಮುಖ ಘೋಷಣೆಗಳಾಗಿದ್ದವು.

ಇದನ್ನೂ ನೋಡಿ: ಶಾಪಿಂಗ್‌ ಮಾಲ್‌ ಆಗಿ ಬಿಡಿಎ ಕಾಂಪ್ಲೆಕ್ಸ್ : ಸೆಪ್ಟೆಂಬರ್ 12 ರಂದು ಬೃಹತ್ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *