ನವ-ಉದಾರವಾದಿ ‘ಸುಧಾರಣೆ’ಗಳಿಗೆ ಬಹುಪಾಲು ಕಾರಣಕರ್ತರಾದ ಮಾಜಿ ಪ್ರಧಾನಿ, ಡಾ ಮನಮೋಹನ್ ಸಿಂಗ್‌ರವರ ನಿಧನದ ಸಂದರ್ಭದಲ್ಲಿ ಅವರ ಅಸಾಧಾರಣ ವೈಯಕ್ತಿಕ ಗುಣಸ್ವಭಾವಗಳನ್ನು ಬಳಸಿಕೊಂಡು ನವ-ಉದಾರವಾದೀ ವ್ಯವಸ್ಥೆಯು ಸ್ವೀಕಾರಯೋಗ್ಯ ಎಂದು ಉತ್ತೇಜಿಸುವ ಒಂದು ಪ್ರವೃತ್ತಿಯು ಕಂಡುಬರುತ್ತಿದೆ. ಈ ಪ್ರವೃತ್ತಿಯು, ನವ ಉದಾರವಾದ ಮತ್ತು ಫ್ಯಾಸಿಸ್ಟ್ ತೆರನ ಶಕ್ತಿಗಳ ರಾಜಕೀಯ ಉಚ್ಛ್ರಾಯದ ನಡುವಿನ ಕೊಂಡಿಯಿಂದಾಗಿ ಸ್ವಲ್ಪಮಟ್ಟಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಎಂಬುದನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತಿಲ್ಲ. ಡಾ.ಸಿಂಗ್ ಪರಿಚಯಿಸಿದ ನವ-ಉದಾರವಾದಿ ‘ಸುಧಾರಣೆ’ಗಳಿಗೆ, ಆಧಾರವಾಗಿರುವ ಜಿಡಿಪಿ-ರಾಷ್ಟ್ರೀಯವಾದ”ದ ತತ್ವಸಿದ್ಧಾಂತವು, ಅದರ ಮೊದಲಿದ್ದ ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರೀಯವಾದವನ್ನು ದುರ್ಬಲಗೊಳಿಸುವ ಮೂಲಕ ಫ್ಯಾಸಿಸ್ಟ್ ತೆರನ ರಾಷ್ಟ್ರೀಯವಾದ”ದ ಉತ್ಥಾನಕ್ಕೆ ಆಧಾರವನ್ನು ಸೃಷ್ಟಿಸಿದೆ. ಆದ್ದರಿಂದ ಫ್ಯಾಸಿಸ್ಟ್ ತೆರನ ಶಕ್ತಿಗಳ ಪ್ರಾಬಲ್ಯವನ್ನು ಮುರಿಯಬೇಕಾದರೆ ನವ ಉದಾರವಾದವನ್ನು ಮೀರಿ ಹೋಗಬೇಕಾಗುತ್ತದೆ, ಮಾತ್ರವಲ್ಲದೆ, ಜಿಡಿಪಿ-ರಾಷ್ಟ್ರೀಯವಾದವು ಪಲ್ಲಟಗೊಳಿಸಿದ ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರೀಯವಾದವನ್ನು ಪುನರುಜ್ಜೀವನಗೊಳಿಸಬೇಕಾಗುತ್ತದೆ. ಸಮಾನತೆ
-ಪ್ರೊ. ಪ್ರಭಾತ್ ಪಟ್ನಾಯಕ್
-ಅನು: ಕೆ.ಎಂ.ನಾಗರಾಜ್
ಉದಾರ ನಿಲುವು ಹೊಂದಿರುವವರು ರಾಷ್ಟ್ರೀಯವಾದ”ವನ್ನು ವಿರೋಧಿಸುತ್ತಾರೆ. ರಾಷ್ಟ್ರೀಯವಾದ” ಎಂಬುದನ್ನು ಇತರ ದೇಶಗಳೊಂದಿಗೆ
ಸ್ನೇಹಭಾವ ಮತ್ತು ಹೊಂದಾಣಿಕೆ ಬಯಸದ ಮತ್ತು ಪ್ರತಿಸ್ಪರ್ಧಿ ಮನೋಭಾವದ ಅರ್ಥವನ್ನಷ್ಟೇ ಹೊಂದಿರುವ ಒಂದು ಪದ ಎಂದು ಇವರು ಪರಿಗಣಿಸುತ್ತಾರೆ. ಆದರೆ ಇದು ಸಂಪೂರ್ಣವಾಗಿ ತಪ್ಪಾದ ದೃಷ್ಟಿಕೋನ. ಏಕೆಂದರೆ, ಮೂರನೇ ಜಗತ್ತಿನ ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದವು, ವೆಸ್ಟ್ ಫಾಲಿಯ (ಜರ್ಮನಿಯ ಒಂದು ಪ್ರದೇಶ) ಶಾಂತಿ ಒಪ್ಪಂದಗಳ ನಂತರ ಯುರೋಪಿನಲ್ಲಿ ಹದಿನೇಳನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ರಾಷ್ಟ್ರೀಯವಾದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಸಮಾನತೆ
ಈ ವ್ಯತ್ಯಾಸವು, ಯುರೋಪಿಯನ್ ರಾಷ್ಟ್ರೀಯವಾದದಿಂದ ಒಡಮೂಡಿದ ಹಿಟ್ಲರನ ರಾಷ್ಟ್ರೀಯವಾದ ಮತ್ತು ವಸಾಹತುಶಾಹಿ-ವಿರೋಧಿ ಹೋರಾಟದ ಸಂದರ್ಭದಲ್ಲಿ ಮೂರನೇ ಜಗತ್ತಿನ ದೇಶಗಳಲ್ಲಿ ರೂಪುಗೊಂಡ ರಾಷ್ಟ್ರೀಯವಾದ (ಉದಾಹರಣೆಗೆ, ವಿಯಟ್‌ನಾಮಿನ ಹೋ ಚಿ ಮಿನ್ಹ್ ರೂಪಿಸಿದ ವಸಾಹತುಶಾಹಿ- ವಿರೋಧಿ ರಾಷ್ಟ್ರೀಯವಾದ) ಇವುಗಳ ನಡುವೆ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ. ಸಮಾನತೆ
ಹದಿನೇಳನೇ ಶತಮಾನದಲ್ಲಿ ರೂಪುಗೊಂಡ ಯುರೋಪಿಯನ್ ರಾಷ್ಟ್ರೀಯವಾದ ಮತ್ತು ಮೂರನೇ ಜಗತ್ತಿನ ದೇಶಗಳ ಇಪ್ಪತ್ತನೇ ಶತಮಾನದ ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದ ಇವುಗಳ ನಡುವೆ ಕನಿಷ್ಠ ಮೂರು ಮೂಲಭೂತ ವ್ಯತ್ಯಾಸಗಳಿವೆ: ಮೊದಲನೆಯದು, ಯುರೋಪಿಯನ್ ರಾಷ್ಟ್ರೀಯವಾದ ರಾಷ್ಟ್ರದೊಳಗೆ ಒಂದು ಆಂತರಿಕ ಶತ್ರುವನ್ನು ಸಾಮಾನ್ಯವಾಗಿ ಗುರುತಿಸುತ್ತದೆ. ಸಮಾನತೆ
ಇದನ್ನೂ ಓದಿ: ಮಧ್ಯಪ್ರದೇಶ: RSS ಸೇರ್ಪಡೆಯಾಗುವಂತೆ ಕಿರುಕುಳ! ಹೈಕೋರ್ಟ್ ಮೆಟ್ಟಿಲೇರಿದ ಸರ್ಕಾರಿ ಕಾಲೇಜು ಅತಿಥಿ ಉಪನ್ಯಾಸಕ!
ಉದಾಹರಣೆಗೆ ಉತ್ತ ಯುರೋಪಿನಲ್ಲಿ ಕ್ಯಾಥೋಲಿಕರನ್ನು, ದಕ್ಷಿಣ ಯುರೋಪಿನಲ್ಲಿ ಪ್ರೊಟೆಸ್ಟಂಟರನ್ನು ಮತ್ತು ಸಾಮಾನ್ಯವಾಗಿ ಎಲ್ಲೆಡೆಯೂ ಯಹೂದಿಗಳನ್ನು ಆಂತರಿಕ ಶತ್ರು ಎಂದು ಗುರುತಿಸಲಾಗಿತ್ತು. ತದ್ವಿರುದ್ಧವಾಗಿ ಮೂರನೇ ಜಗತ್ತಿನ ರಾಷ್ಟ್ರೀಯವಾದವು ಎಲ್ಲರನ್ನೂ ಒಳಗೊಳ್ಳುವಂತದ್ದಾಗಿತ್ತು. ಈ ಒಳಗೊಳ್ಳುವಿಕೆಯು ವಸಾಹತುಶಾಹಿ ಯಜಮಾನರ ಅಗಾಧ ಶಕ್ತಿಯನ್ನು ಎದುರಿಸುವ ಸಲುವಾಗಿ ಇರಲೇಬೇಕಿದ್ದ ಒಂದು ಅವಶ್ಯಕತೆಯಾಗಿತ್ತು.
ಎರಡನೆಯದು, ಯುರೋಪಿಯನ್ ರಾಷ್ಟ್ರೀಯವಾದವು ಜನರನ್ನು ತ್ಯಾಗ ಮಾಡಬೇಕಾಗಿದ್ದ ಒಂದು ಘಟಕವಾಗಿ ಮಾತ್ರ ಕಂಡಿತು ಮತ್ತು ರಾಷ್ಟ್ರವನ್ನು ಜನರಿಂದ ಬಲು ಎತ್ತರದಲ್ಲಿ ಕಂಡು (ಅಂದರೆ, ದೈವದ ಮಟ್ಟಕ್ಕೆ ಸಮೀಕರಿಸಿ) ಅದನ್ನು ಒಂದು ಉನ್ನತ ಮಟ್ಟದಲ್ಲಿ ಇರಿಸಿತು. ತದ್ವಿರುದ್ಧವಾಗಿ ಮೂರನೇ ಜಗತ್ತಿನ ರಾಷ್ಟ್ರೀಯವಾದವು ವಸಾಹತುಶಾಹಿಯಿಂದ ನೂರಾರು ವರ್ಷಗಳ ಕಾಲ ತುಳಿತಕ್ಕೊಳಗಾದ ಜನರನ್ನು ಮೇಲೆತ್ತುವ ಗುರಿಯನ್ನು ಹೊಂದಿತ್ತು. ಮೂರನೆಯದು, ಯುರೋಪಿಯನ್ ರಾಷ್ಟ್ರೀಯವಾದದಲ್ಲಿ ಅದು ರೂಪಗೊಂಡ ಸಮಯದಿಂದಲೂ ಸಾಮ್ರಾಜ್ಯಶಾಹಿ ಗುಣ-ಲಕ್ಷಣಗಳು ಅಡಕವಾಗಿದ್ದವು. ವೆಸ್ಟ್ ಫಾಲಿಯ ಶಾಂತಿ
ಒಪ್ಪಂದಗಳು ಏರ್ಪಟ್ಟ ನಂತರದ ಕೆಲವೇ ಕೆಲವು ತಿಂಗಳುಗಳಲ್ಲಿ ಐರ್ಲೆಂಡ್ ಮೇಲೆ ಆಲಿವರ್ ಕ್ರೋಮ್‌ವೆಲ್ ಸಾಧಿಸಿದ ವಿಜಯವು ಎಲ್ಲ ಯುರೋಪಿಯನ್ ದೇಶಗಳೂ ಹೊಂದಿದ್ದ ಸಾಮ್ರಾಜ್ಯಶಾಹಿ ಬಯಕೆಯ ಒಂದು ಆರಂಭವಾಗಿತ್ತು. ಸಮಾನತೆ
ಈ ಯೋಜನೆಯು ರಾಷ್ಟ್ರೀಯವಾದ” ದ ನಿರ್ದಿಷ್ಟ ಪರಿಕಲ್ಪನೆಯಿಂದ ಪೋಷಣೆ ಪಡೆದಿತ್ತು. ಇದಕ್ಕೆ ತದ್ವಿರುದ್ಧವಾಗಿ ವಸಾಹತುಶಾಹಿ-ವಿರೋಧಿ ಮೂರನೆಯ ಜಗತ್ತಿನ ರಾಷ್ಟ್ರೀಯವಾದವು, ಪ್ರಾದೇಶಿಕ ಗುಣ-ಲಕ್ಷಣಗಳನ್ನು ಹೊಂದಿದ್ದರೂ, ಸಾಮ್ರಾಜ್ಯಶಾಹಿ ಗುಣ-ಲಕ್ಷಣಗಳನ್ನು ಹೊಂದಿರಲಿಲ್ಲ ಮತ್ತು ಅದಕ್ಕೆ ಬದಲಾಗಿ ತನ್ನದೇ ರೀತಿಯ ವಸಾಹತುಶಾಹಿ-ವಿರೋಧಿ ಹೋರಾಟಗಳಲ್ಲಿ ತೊಡಗಿದ ಮೂರನೆಯ ಜಗತ್ತಿನ ಇತರ ದೇಶಗಳೊಂದಿಗೆ ಸೋದರ ಸಂಬಂಧಗಳನ್ನು ಬೆಳೆಸುವ ಬಯಕೆಯನ್ನು ಹೊಂದಿತ್ತು.ಸಮಾನತೆ
ಸಂಕ್ಷಿಪ್ತವಾಗಿ ಹೇಳುವುದಾದರೆ, ಯುರೋಪಿನ ರಾಷ್ಟ್ರೀಯವಾದದ ಹೆಗ್ಗುರುತು ಎಂದರೆ, ಜನರಿಗಿಂತ ಎತ್ತರದ ದೈವದ ಮಟ್ಟದಲ್ಲಿರಿಸಿದ ರಾಷ್ಟ್ರ ಎಂಬ ಒಂದು ಅಮೂರ್ತ ಆದರ್ಶಪ್ರಾಯ ಅಲೌಕಿಕ ಪರಿಕಲ್ಪನೆ. ಆದರೆ, ವಸಾಹತುಶಾಹಿ-ವಿರೋಧಿ ಮೂರನೇ ಜಗತ್ತಿನ ರಾಷ್ಟ್ರೀಯವಾದವು ಮೂಲಭೂತವಾಗಿ ಅಲೌಕಿಕವಾದುದಲ್ಲ. ಜನರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುವ ಇದನ್ನು ಮಾರ್ಕ್ಸ್ ಈ- ಮುಖ(this-sided) ಎಂದು ಕರೆಯುತ್ತಿದ್ದರು.
ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದದಿಂದ ‘ಜಿಡಿಪಿ ರಾಷ್ಟ್ರೀಯವಾದ’ದತ್ತ ಪಲ್ಲಟ
ವಸಾಹತೋತ್ತರದ ಪ್ರಭುತ್ವವು, ಅದರ ಇತರ ವೈಫಲ್ಯಗಳು ಏನೇ ಇರಲಿ, ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದದ ಪರಿಕಲ್ಪನೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ಉದಾಹರಣೆಗೆ, ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದವನ್ನು ಆಧರಿಸಿದ ಭಾರತದ ಸಂವಿಧಾನದ ಮೂಲಭೂತ ಲಕ್ಷಣಗಳು ಅದರ ಪೀಠಿಕೆಯಲ್ಲೇ ಅಡಕವಾಗಿವೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಮಾಜವಾದ, ಈ ಎಲ್ಲವುಗಳಿಗೂ ಬದ್ಧವಾದ ಒಂದು ರಾಷ್ಟ್ರದ ಪರಿಕಲ್ಪನೆಯು ವಸಾಹತುಶಾಹಿ-ವಿರೋಧಿ ಹೋರಾಟದಲ್ಲಿ ಅಂತರ್ಗತವಾಗಿತ್ತು. ಅಂತೆಯೇ, ಪರವಾನಗಿ ವ್ಯವಸ್ಥೆಯ ಮೂಲಕ ಖಾಸಗಿ ವಲಯದ ಮೇಲಿನ ನಿಯಂತ್ರಣ, ಮಿಶ್ರ ಅರ್ಥವ್ಯವಸ್ಥೆಯ ಚೌಕಟ್ಟಿನೊಳಗೇ ಸಾರ್ವಜನಿಕ ವಲಯಕ್ಕೆ ತೋರಿದ ಪ್ರಾಮುಖ್ಯತೆ ಮತ್ತು ಸಮಾನ ಅವಕಾಶಗಳನ್ನು ಒದಗಿಸುವ ಒಂದು ಸಾಧಾರಣ ಬದ್ಧತೆಯನ್ನು ತೋರಿಸಿದೆ. ಹಾಗೆ ನೋಡಿದರೆ ಇವು ಯಾವವೂ ಸಮಾಜವಾದದ ಘೋಷಣೆಯಿಂದ ಹುಟ್ಟಿಕೊಂಡ, ಒಂದು ಸಮಾಜವಾದಿ ಯೋಜನೆಯತ್ತ ಸಾಗುವುದಕ್ಕಾಗಿಯೆಂದೇನೂ ಅಲ್ಲ. ಸಮಾನತೆ
ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದ ನಿಯಂತ್ರಣ ನೀತಿಗಳ ಆಳ್ವಿಕೆಯು ಸಮಾಜವಾದದ ಬಗ್ಗೆ ಹೊಂದಿದ್ದ ಬದ್ಧತೆಯನ್ನು ತೋರ್ಪಡಿಸಿತು ಮತ್ತು ಇದು ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದದ ಪರಿಕಲ್ಪನೆಯೊಂದಿಗೆ ಒಂದು ಜೀವಂತ ಸಂಬಂಧವನ್ನೂ ಹೊಂದಿತ್ತು. ಸಮಾನತೆ
ನವ-ಉದಾರವಾದಿ ವ್ಯವಸ್ಥೆಯು ಜಾರಿಗೆ ಬಂದ ನಂತರ ಭಾರತದ ಪ್ರಭುತ್ವವು ಪ್ರತಿಪಾದಿಸುವ ರಾಷ್ಟ್ರೀಯವಾದದ ಪರಿಕಲ್ಪನೆಯಲ್ಲಿ ಒಂದು ನಿರ್ಣಾಯಕ ಪಲ್ಲಟ ಸಂಭವಿಸಿದೆ. ನವ ಉದಾರವಾದಿ ನೀತಿಗಳನ್ನು ಪರಿಚಯಿಸುವಾಗ ಅವು ರಾಷ್ಟ್ರ ಹಿತದಲ್ಲಿವೆ ಎಂದು ಹೇಳಲಾಗಿತ್ತು. ಜಿಡಿಪಿಯು ಹೆಚ್ಚು ಕ್ಷಿಪ್ರವಾಗಿ ಬೆಳೆಯುತ್ತದೆ ಮತ್ತು ಅದರ ಪ್ರಯೋಜನಗಳು ಎಲ್ಲರಿಗೂ ಜಿನುಗುತ್ತವೆ ಮತ್ತು ಅದು ಭಾರತವನ್ನು ಒಂದು ಪ್ರಮುಖ ಶಕ್ತಿಯನ್ನಾಗಿ ಮಾಡುತ್ತದೆ ಎಂಬುದು ಅದರ ಸಮರ್ಥನೆಯಾಗಿತ್ತು. ನವ ಉದಾರವಾದಿ ಆಳ್ವಿಕೆಯು ಆರ್ಥಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ ಎಂಬ ಅಂಶವನ್ನು ನಿರಾಕರಿಸಲಾಗಿಲ್ಲ.
ತದ್ವಿರುದ್ಧವಾದುದನ್ನು ನವ ಉದಾರವಾದದ ಅತ್ಯಂತ ಕಟ್ಟಾ ಬೆಂಬಲಿಗರು ಸಹ ಯಾವುದೇ ಸಮಯದಲ್ಲಿ ಹೇಳಿಕೊಂಡಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ನವ ಉದಾರವಾದವನ್ನು, ಅದು ಸ್ವಾತಂತ್ರ‍್ಯ ಹೋರಾಟಗಾರರ ಕನಸಿನ ರಾಷ್ಟ್ರವನ್ನು ನಿರ್ಮಿಸುವಲ್ಲಿ ಒಂದು ಉತ್ತಮ ಸಾಧನವಾಗಿದೆ ಎಂಬ ನೆಲೆಯಲ್ಲಿ ಪರಿಚಯಿಸಲಿಲ್ಲ. ಭಾರತ ರಾಷ್ಟ್ರವನ್ನು ಒಂದು ದೊಡ್ಡ ಶಕ್ತಿಯನ್ನಾಗಿ ಮಾಡುತ್ತದೆ ಎಂಬ ಭರವಸೆಯ ಆಧಾರದ ಮೇಲೆ ನವ ಉದಾರವಾದವನ್ನು ಸಮರ್ಥಿಸಲಾಗುತ್ತಿದೆ. ಈ ರೀತಿಯಲ್ಲಿ ಜನರಿಗೆ ಸಮತ್ವದಿಂದ ಸೇವೆ ಸಲ್ಲಿಸುವ ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರದ ಪರಿಕಲ್ಪನೆಯು ತಾನು ಒಂದು ದೊಡ್ಡ ಶಕ್ತಿಯಾಗಲು ಇತರ ರಾಷ್ಟ್ರಗಳೊಂದಿಗೆ ಸ್ಪರ್ಧೆಯಲ್ಲಿ ತೊಡಗುವ ಒಂದು ರಾಷ್ಟ್ರವೆಂಬುದಾಗಿ ಈಗ ಪಲ್ಲಟಗೊಂಡಿದೆ.
ಈ ಪಲ್ಲಟವು ಜನರ ಜೀವನದ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಒಂದು ನಿಜ ಮತ್ತು ಮೂರ್ತ ಸ್ವರೂಪವನ್ನು ರಾಷ್ಟ್ರದ ಪರಿಕಲ್ಪನೆಯ ಈ- ಮುಖವನ್ನು ತ್ಯಜಿಸಿ, ಒಂದು ಅಮೂರ್ತ, ಆಲೌಕಿಕ ಸ್ವರೂಪದ, ಜನರಿಗಿಂತ ಮೇಲಿರುವ ಮತ್ತು ಜನರಿಂದ ತ್ಯಾಗವನ್ನು ಬಯಸುವ ಒಂದು ದೊಡ್ಡ ಶಕ್ತಿ ರಾಷ್ಟ್ರವಾಗಿ ಬದಲಾಗಿದೆ ಎಂಬುದನ್ನು ಸೂಚಿಸುತ್ತದೆ. ರಾಷ್ಟ್ರದ ಈ ಬದಲಾದ ಪರಿಕಲ್ಪನೆಯು ಯುರೋಪಿಯನ್ ರಾಷ್ಟ್ರದ ಪರಿಕಲ್ಪನೆಯನ್ನು ನೆನಪಿಸುತ್ತದೆಯಾದರೂ, ಅದೇ ಅಲ್ಲ ಎಂಬುದನ್ನು ಮುಂದೆ ನೋಡೋಣ.
ಫ್ಯಾಸಿಸ್ಟ್ ತೆರನ ರಾಷ್ಟ್ರೀಯವಾದಕ್ಕೆ ಸೇತುವೆ
ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಯಂತ್ರಣ ನೀತಿಗಳ ಆಳ್ವಿಕೆಯು ಏನನ್ನು ಸಾಧಿಸಲು ಹೊರಟಿತ್ತೊ ಅದಕ್ಕಿಂತ ಹೆಚ್ಚಿನದನ್ನು ನವ ಉದಾರವಾದವು ಸಾಧಿಸುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಒಂದು ರೀತಿಯ ಆಳ್ವಿಕೆಯಿಂದ ಇನ್ನೊಂದು ರೀತಿಯ ಆಳ್ವಿಕೆಗೆ ಬದಲಾಗುವಲ್ಲಿ, ಯಾವುದು ಅಪೇಕ್ಷಣೀಯ ಎಂಬುದರಲ್ಲೇ ಬದಲಾವಣೆಯಾಗಿತ್ತು. ಇದಕ್ಕನುಗುಣವಾಗಿ ರಾಷ್ಟ್ರದ ಮತ್ತು ರಾಷ್ಟ್ರೀಯವಾದದ ಪರಿಕಲ್ಪನೆಯೂ ಬದಲಾಯಿತು. ಈ ಬದಲಾವಣೆಯನ್ನು ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರೀಯವಾದದಿಂದ ಜಿಡಿಪಿ-ರಾಷ್ಟ್ರೀಯವಾದಕ್ಕೆ ಬದಲಾವಣೆ ಎಂದು ಕರೆಯಬಹುದು.
ಖಚಿತವಾಗಿ ಹೇಳುವುದಾದರೆ, ಅಂತಹ ಜಿಡಿಪಿ-ರಾಷ್ಟ್ರೀಯವಾದವು, ರಾಷ್ಟ್ರವನ್ನು ಇತರ ರಾಷ್ಟ್ರಗಳ ವಿರುದ್ಧ ಸ್ಪರ್ಧಾತ್ಮಕ ಓಟದಲ್ಲಿ ತೊಡಗಿಸಿಕೊಂಡಿರುವಂತದ್ದಾಗಿ ನೋಡುತ್ತದೆಯಾದರೂ, ಈ ರಾಷ್ಟ್ರೀಯವಾದವು ಯುರೋಪಿನಲ್ಲಿದ್ದ ರಾಷ್ಟ್ರೀಯವಾದದಂತೆ ಸಾಮ್ರಾಜ್ಯವಾದಿಯಲ್ಲ, ಅಥವಾ, ಜಿಡಿಪಿ-ರಾಷ್ಟ್ರೀಯವಾದ”ವು ತನ್ನ ಹದಿನೇಳನೇ ಶತಮಾನದ ಯುರೋಪಿಯನ್ ರಾಷ್ಟ್ರೀಯವಾದವು ಮಾಡಿದ ರೀತಿಯಲ್ಲಿ ಒಂದು ಆಂತರಿಕ ಶತ್ರುವನ್ನು ಆವಾಹಿಸಲೇ ಬೇಕೆಂದಿಲ್ಲ. ಜಿಡಿಪಿ-ರಾಷ್ಟ್ರೀಯವಾದದ ಅನುಯಾಯಿಗಳು ಜಾತ್ಯತೀತತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಜನರೇನೂ ಅಲ್ಲ. ಆದರೆ, ಜಿಡಿಪಿ-ರಾಷ್ಟ್ರೀಯವಾದ” ವು ರಾಷ್ಟ್ರದ ಬಗ್ಗೆ ಒಂದು ಅಲೌಕಿಕ ಪರಿಕಲ್ಪನೆಯನ್ನು ಪುನಃ ಪರಿಚಯಿಸುವ ಕಾರಣದಿಂದಾಗಿ ಅದು ಫ್ಯಾಸಿಸ್ಟ್ ತೆರನ ರಾಷ್ಟ್ರೀಯವಾದದ ಪರಿಕಲ್ಪನೆಗಳಿಗೆ ಒಂದು ಸೇತುವೆಯಾಗಿ ಕೆಲಸ ಮಾಡುತ್ತದೆ.
ಎರಡು ಕಾರಣಗಳಿಂದಾಗಿ ಇದು ಸಂಭವಿಸುತ್ತದೆ: ಮೊದಲನೆಯದು, ನಾವು ಈಗಾಗಲೇ ನೋಡಿರುವಂತೆ, ಜಿಡಿಪಿ-ರಾಷ್ಟ್ರೀಯವಾದ”ವು ಸಮಾನ
ಪೌರತ್ವ ಹಕ್ಕುಗಳು ಮತ್ತು ಹೆಚ್ಚಿನ ಲೌಕಿಕ ಸಮಾನತೆಯಿರುವ ಒಂದು ಸಮತ್ವದ ಸಮಾಜದತ್ತ ಮುನ್ನಡೆಯುವ ಬಯಕೆಯನ್ನು ನಿರಾಕರಿಸುತ್ತದೆ, ಸಮತ್ವದ ಸಮಾಜದ ಸ್ಥಳದಲ್ಲಿ ಅಸಮಾನತೆಯ ಸಮಾಜವನ್ನು ಇರಿಸುತ್ತದೆ ಮತ್ತು ಅದರ ಅಸಮಾನತೆಗಳು ಬಲಾಢ್ಯ ದೇಶ ಎಂಬ ಸ್ಥಾನಮಾನದಂತಹ ಕೆಲವು ಉನ್ನತ ಅಲೌಕಿಕ ಗುರಿಯನ್ನು ಸಾಧಿಸುತ್ತವೆ ಎಂದು ಭಾವಿಸಲಾಗುತ್ತದೆ.
ಎರಡನೆಯದು, ನವ ಉದಾರವಾದಿ ವ್ಯವಸ್ಥೆಯು ಬಿಕ್ಕಟ್ಟಿನಲ್ಲಿ ಸಿಲುಕುತ್ತ ಹೋದಂತೆ, ಪ್ರಯೋಜನಗಳು ಕೆಳಕ್ಕೆ ಜಿನುಗುವ ನಿರೀಕ್ಷೆಗಳು ಕೂಡ ಮರೆಯಾದಂತೆ, ಭೌತಿಕ ಕಷ್ಟಕಾರ್ಪಣ್ಯಗಳ ವಾಸ್ತವವು ಹೆಚ್ಚು ಹೆಚ್ಚು ಸಂಖ್ಯೆಯ ಜನರನ್ನು ತಟ್ಟಲಾರಂಭಿಸಿದಂತೆ, ಅನಾವರಣಗೊಳ್ಳುತ್ತಿರುವ ಅಸಮಾನ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೆಚ್ಚುತ್ತದೆ. ಅಂತಹ ಅಸಮಾಧಾನವನ್ನು ಶಮನಗೊಳಿಸಲು ನಮ್ಮ ರಾಷ್ಟ್ರವು ಈಗ ಒಂದು ದೊಡ್ಡ ಶಕ್ತಿಯೆಂಬ ಸ್ಥಾನಮಾನವನ್ನು ಪಡೆದಿದೆ ಎಂಬುದೂ ಸಾಲುವುದಿಲ್ಲ. ಆಗ, ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದೊಂದಿಗೆ ಸಂಯೋಜಿತವಾಗಿರುವ ಮತ್ತು ನವ ಉದಾರವಾದಿ ವ್ಯವಸ್ಥೆಯನ್ನು ಪೋಷಿಸುವ ದೇಶದ ಹಿರಿ ಬಂಡವಾಳವು ಫ್ಯಾಸಿಸ್ಟ್ ತೆರದವರೊಂದಿಗೆ ಕೈಜೋಡಿಸುತ್ತದೆ, ಒಂದು ಹೊಸ ಅಲೌಕಿಕ ‘ಹಿಂದೂ ರಾಷ್ಟ್ರ’ವನ್ನು ಸೃಷ್ಟಿಸುತ್ತದೆ. ಇದು ಒಂದು ಫ್ಯಾಸಿಸ್ಟ್ ತೆರನ ಪ್ರಭುತ್ವವನ್ನು ಮರೆಮಾಚುವ ಮುಖವಾಡ.
ಈ ಹೊಸ ಅಲೌಕಿಕತೆಯು ಹಳೆಯದಕ್ಕೆ ಬದಲಾಗಿ ಅಲ್ಲ, ಅದಕ್ಕೆ ಪೂರಕವಾಗಿಯೇ ಇದೆ. ಅಂದರೆ ನವ ಉದಾರವಾದಿ ಆಳ್ವಿಕೆಗೆ ಒಂದು ಸೈದ್ಧಾಂತಿಕ ಹೊದಿಕೆಯನ್ನು ಒದಗಿಸುವ ಉದ್ದೇಶದ ಜಿಡಿಪಿ ರಾಷ್ಟ್ರೀಯವಾದ ಫ್ಯಾಸಿಸ್ಟ್ ತೆರನ “ರಾಷ್ಟ್ರೀಯವಾದ”ದೊಳಗೆ ತೂರಿಕೊಳ್ಳುತ್ತದೆ.
ಭಾರತದಲ್ಲಿ ಈ ವಿದ್ಯಮಾನ ಸಂಭವಿಸುತ್ತಿರುವುದನ್ನೇ ನಾವು ನೋಡುತ್ತಿದ್ದೇವೆ. ನವ ಉದಾರವಾದವನ್ನು ಆರಂಭದಲ್ಲಿ ಪರಿಚಯಿಸಿದ ರಾಜಕೀಯ ಶಕ್ತಿಗಳು ಜಾತ್ಯತೀತತೆಗೆ ವಿರುದ್ಧವಾಗಿದ್ದವುಗಳಲ್ಲ, ಅವು ಅದನ್ನು ಜಿಡಿಪಿ ಬೆಳವಣಿಗೆಯನ್ನು ತ್ವರಿತಗೊಳಿಸುವ ಮತ್ತು ಭಾರತವನ್ನು ಒಂದು ಬೃಹತ್ ಆರ್ಥಿಕ ಶಕ್ತಿಯನ್ನಾಗಿ ಪರಿವರ್ತಿಸುವ ಹೆಸರಿನಲ್ಲಿ ಸಮರ್ಥಿಸಿಕೊಂಡವು (ಎಷ್ಟರ ಮಟ್ಟಿಗೆ ಎಂದರೆ, ಭ್ರಷ್ಟಾಚಾರವನ್ನು ತೊಡೆದುಹಾಕಬೇಕು, ಏಕೆಂದರೆ, ಅದು ಭಾರತವನ್ನು ಒಂದು ಬಲಾಢ್ಯ ಶಕ್ತಿಯಾಗದಂತೆ ತಡೆಯುತ್ತದೆ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಹೇಳಿದ್ದರು!). ಈಗ ನವ ಉದಾರವಾದವು ಮುಂದೆ ದಾರಿ ಕಾಣದ ಹಂತವನ್ನು ತಲುಪುತ್ತಿರುವಾಗ, ಅದು ದೇಶವನ್ನು ಎಲ್ಲರನ್ನೂ ಒಳಗೊಳ್ಳುವ ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದದ ವಿಚಾರದಿಂದ ಮತ್ತಷ್ಟು ದೂರ ತಳ್ಳುತ್ತದೆ. ಅದು ಹಿರಿ ಬಂಡವಾಳ ಮತ್ತು ಫ್ಯಾಸಿಸ್ಟ್ ತೆರನ ಶಕ್ತಿಗಳ ನಡುವೆ ಒಂದು ಮೈತ್ರಿಯನ್ನು ತರುತ್ತದೆ ಮಾತ್ರವಲ್ಲ, ಈ ಫ್ಯಾಸಿಸ್ಟ್ ತೆರನ ಶಕ್ತಿಗಳನ್ನು
ಅವರ ಫ್ಯಾಸಿಸ್ಟ್ ತೆರನ ರಾಷ್ಟ್ರೀಯವಾದದೊಂದಿಗೆ ಅಧಿಕಾರಕ್ಕೂ ತರುತ್ತದೆ.
ಹೀಗೆ ನವ ಉದಾರವಾದವು ಫ್ಯಾಸಿಸ್ಟ್ ತೆರನ ಶಕ್ತಿಗಳ ಪ್ರಾಬಲ್ಯಕ್ಕೆ ಭೌತಿಕ ಪರಿಸ್ಥಿತಿಗಳನ್ನು ಸೃಷ್ಟಿಸಿದರೆ, ನವ ಉದಾರವಾದದ ಪರಿಚಯಕ್ಕೆ ಆಧಾರವಾಗಿರುವ ಜಿಡಿಪಿ-ರಾಷ್ಟ್ರೀಯವಾದ”ದ ತತ್ವಸಿದ್ಧಾಂತವು, ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರೀಯವಾದವನ್ನು ದುರ್ಬಲಗೊಳಿಸುವ ಮೂಲಕ ಫ್ಯಾಸಿಸ್ಟ್ ತೆರನ ರಾಷ್ಟ್ರೀಯವಾದ”ದ ಉತ್ಥಾನಕ್ಕೆ ಆಧಾರವನ್ನು ಸೃಷ್ಟಿಸುತ್ತದೆ.
ತಪ್ಪು ಗ್ರಹಿಕೆ
ಆದ್ದರಿಂದ ಫ್ಯಾಸಿಸ್ಟ್ ತೆರನ ಶಕ್ತಿಗಳ ಪ್ರಾಬಲ್ಯವನ್ನು ಮುರಿಯಬೇಕಾದರೆ ನವ ಉದಾರವಾದವನ್ನು ಮೀರಿ ಹೋಗಬೇಕಾಗುತ್ತದೆ, (ಇಲ್ಲದಿದ್ದರೆ ಅಧಿಕಾರದಿಂದ ಹೊರಹಾಕಲ್ಪಟ್ಟರೂ ಸಹ ಫ್ಯಾಸಿಸ್ಟ್ ತೆರನ ಶಕ್ತಿಗಳು ಯುಎಸ್‌ನಲ್ಲಿ ಡೊನಾಲ್ಡ್ ಟ್ರಂಪ್ ಮಾಡಿದಂತೆ ಮತ್ತೆ ಮತ್ತೆ ಬರುತ್ತವೆ), ಮಾತ್ರವಲ್ಲದೆ, ಸಾಮ್ರಾಜ್ಯಶಾಹಿ-ವಿರೋಧಿ ರಾಷ್ಟ್ರೀಯವಾದವನ್ನು ಪುನರುಜ್ಜೀವನಗೊಳಿಸಬೇಕಾಗುತ್ತದೆ.
ಪ್ರಸಕ್ತ ಸನ್ನಿವೇಶದಲ್ಲಿ ಈ ಅಂಶವನ್ನು ಒತ್ತಿಹೇಳಲು ಒಂದು ಕಾರಣವಿದೆ. ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ, ಡಾ ಮನಮೋಹನ್ ಸಿಂಗ್, ಮೆದುಳು ಮತ್ತು ಹೃದಯದ ಅತ್ಯುತ್ತಮ ಗುಣಗಳನ್ನು ಹೊಂದಿದ್ದವರು ಮತ್ತು ಒಬ್ಬ ಸಂಪೂರ್ಣ ಜಾತ್ಯತೀತ ವ್ಯಕ್ತಿಯಾಗಿದ್ದರು. ಆದರೆ ದೇಶದಲ್ಲಿ ನವ-ಉದಾರವಾದಿ ಸುಧಾರಣೆಗಳನ್ನು ಪರಿಚಯಿಸಿದ ಜವಾಬ್ದಾರಿಯೂ ಬಹುಪಾಲು ಅವರದ್ದೇ. ಸದ್ಯ ಡಾ ಸಿಂಗ್ ಅವರ ಅಸಾಧಾರಣ ವೈಯಕ್ತಿಕ ಗುಣಲಕ್ಷಣಗಳನ್ನು ಬಳಸಿಕೊಂಡು ಈ ವ್ಯವಸ್ಥೆಯನ್ನು ಸ್ವೀಕಾರಾಯೋಗ್ಯ ಎಂದು ಉತ್ತೇಜಿಸುವ ಒಂದು ಪ್ರವೃತ್ತಿಯು ನವ-ಉದಾರವಾದದ ಪ್ರತಿಪಾದಕರಲ್ಲಿ ಕಂಡುಬರುತ್ತಿದೆ.
ಈ ಪ್ರವೃತ್ತಿಯು, ನವ ಉದಾರವಾದ ಮತ್ತು ಫ್ಯಾಸಿಸ್ಟ್ ತೆರನ ಶಕ್ತಿಗಳ ರಾಜಕೀಯ ಉಚ್ಛ್ರಾಯದ ನಡುವಿನ ಕೊಂಡಿಯಿಂದಾಗಿ ಸ್ವಲ್ಪಮಟ್ಟಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ ಎಂಬುದನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತಿಲ್ಲ. ಇಂತಹ ಉಚ್ಛಾçಯಕ್ಕೆ ಶುದ್ಧ ರಾಜಕೀಯ ಕಾರಣಗಳನ್ನು ಕೊಡಲಾಗುತ್ತದೆ, ಅದರ ಹಿಂದಿರುವ ಆರ್ಥಿಕ ಸಂದರ್ಭದಿಂದ ಬೇರ್ಪಡಿಸಿ ನೋಡಲಾಗುತ್ತದೆ. ಆದರೆ ಇದು ಒಂದು ತಪ್ಪು ಗ್ರಹಿಕೆಯಾಗಿದೆ. ಇದನ್ನು ಸರಿಪಡಿಸದಿದ್ದರೆ, ಫ್ಯಾಸಿಸ್ಟ್ ತೆರನ ಶಕ್ತಿಗಳ ಪ್ರಾಬಲ್ಯ ಶಾಶ್ವತಗೊಳ್ಳುತ್ತದೆಯಷ್ಟೇ.
ಇದನ್ನೂ ನೋಡಿ: ಮಂಥರೆಯಾಗಿ ಯಕ್ಷರಂಗದಲ್ಲಿ ಮಿಂಚಿದ ನಟಿ ಉಮಾಶ್ರೀ Janashakthi Media