ಗಾಜಾ ಹತ್ಯಾಕಾಂಡ | 42 ಪತ್ರಕರ್ತರು ಸಾವು; 37 ಜನರು ಪ್ಯಾಲೆಸ್ತೀನಿಯನ್ನರು

ನ್ಯೂಯಾರ್ಕ್: ಅಕ್ಟೋಬರ್ 7 ರಂದು ಗಾಜಾದಲ್ಲಿ ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ವಶಾಹತುಶಾಹಿ ಇಸ್ರೇಲ್ ನಡುವೆ ಪ್ರಾರಂಭವಾದ ಸಂಘರ್ಷದ ನಂತರ ಪ್ರಾರಂಭಿಸಿದಾಗಿನಿಂದ ಕನಿಷ್ಠ 42 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್‌ಸ್(ಸಿಪಿಜೆ) ವರದಿ ಹೇಳಿದೆ. 1992 ರಿಂದ ಸಿಪಿಜೆ ಅಂಕಿ ಅಂಶ ಸಂಗ್ರಹಿಸಲು ಪ್ರಾರಂಭಿಸಿದ ನಂತರ ಅಕ್ಟೋಬರ್ ಪತ್ರಕರ್ತರಿಗೆ ಮಾರಣಾಂತಿಕ ತಿಂಗಳಾಗಿ ಪರಿಣಮಿಸಿದೆ ಎಂದು ಅದು ಹೇಳಿದೆ.

ಸಂಘರ್ಷದಲ್ಲಿ ಕೊಲ್ಲಲ್ಪಟ್ಟ, ಗಾಯಗೊಂಡ ಅಥವಾ ಕಾಣೆಯಾದ ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರ ಎಲ್ಲಾ ವರದಿಗಳನ್ನು CPJ ತನಿಖೆ ನಡೆಸುತ್ತಿದೆ. ನವೆಂಬರ್ 16 ರ ಹೊತ್ತಿಗೆ ಕೊಲ್ಲಲ್ಪಟ್ಟ 12,000 ಕ್ಕೂ ಹೆಚ್ಚು ಜನರಲ್ಲಿ ಕನಿಷ್ಠ 42 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಸೇರಿದ್ದಾರೆ ಎಂದು ಸಿಪಿಜೆಯ ಪ್ರಾಥಮಿಕ ತನಿಖೆಗಳು ಹೇಳಿದೆ. ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ 11,000 ಪ್ಯಾಲೆಸ್ತೀನಿಯನ್ನರು ಮೃತಪಟ್ಟಿದ್ದು, ಇಸ್ರೇಲ್‌ನಲ್ಲಿ 1,200 ಜನರು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಗಾಝಾ: ಅಲ್ ಶಿಫಾ ಆಸ್ಪತ್ರೆ ಪ್ರವೇಶಿಸಿದ ಇಸ್ರೇಲಿ ಸೇನೆ ಮತ್ತು ಟ್ಯಾಂಕ್‌

“ಗಾಜಾ ಪಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ” ಇಸ್ರೇಲಿ ಸೈನ್ಯ ರಾಯಿಟರ್ಸ್ ಮತ್ತು ಏಜೆನ್ಸ್ ಫ್ರಾನ್ಸ್ ಪ್ರೆಸ್ ಸುದ್ದಿ ಸಂಸ್ಥೆಗಳಿಗೆ ಹೇಳಿದೆ. “ಆದರೆ, ಇಸ್ರೇಲಿ ಸೇನೆ ದಾಳಿಯ ವೇಳೆ ಪತ್ರಕರ್ತರನ್ನು ಗುರಿಯಾಗಿಸುವುದಿಲ್ಲ” ಎಂದು ಭರವಸೆ ನೀಡಿದ್ದಾಗಿ ರಾಯಿಟರ್ಸ್ ವರದಿ ಮಾಡಿದೆ.

ಇಸ್ರೇಲ್ ನಡೆಸುತ್ತಿರುವ ವಿಧ್ವಂಸಕ ವೈಮಾನಿಕ ದಾಳಿಗಳು, ಸಂವಹನ ಇಲ್ಲದೆ ಇರುವುದು, ಇಂಧನ ಪೂರೈಕೆ ಕೊರತೆ ಮತ್ತು ವ್ಯಾಪಕವಾದ ವಿದ್ಯುತ್ ನಿಲುಗಡೆಗಳು ಸೇರಿದಂತೆ ಸೇನೆಯ ಭೂ ದಾಳಿಯಿಂದಾಗಿ ಸಂಘರ್ಷವನ್ನು ವರದಿ ಮಾಡುವುದು ಗಾಜಾದ ಪತ್ರಕರ್ತರಿಗೆ ತೀವ್ರ ಅಪಾಯ ಉಂಟು ಮಾಡುತ್ತಿದೆ.

ಇದನ್ನೂ ಓದಿ: ಮಹಿಳೆಯೊಬ್ಬಳ ಮನೆಗೆ ನುಗ್ಗಿದ ಐವರು ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರ

ನವೆಂಬರ್ 16ರ ಹೊತ್ತಿಗೆ ಒಟ್ಟು 42 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಸಿಪಿಜೆ ದೃಢಪಡಿಸಿದೆ. ಇದರಲ್ಲಿ 37 ಪ್ಯಾಲೆಸ್ತೀನಿಯನ್ ಆಗಿದ್ದು, 4 ಇಸ್ರೇಲಿ ಮತ್ತು ಒಬ್ಬರು ಲೆಬನಾನ್ ಪತ್ರಕರ್ತರು ಸಾವನ್ನಪ್ಪಿದ್ದಾರೆ. 9 ಪತ್ರಕರ್ತರು ಗಾಯಗೊಂಡಿದ್ದು, 3 ಪತ್ರಕರ್ತರು ನಾಪತ್ತೆಯಾಗಿದ್ದಾರೆ ಎಂದು CPJ ವರದಿ ಹೇಳಿದೆ. ಅಲ್ಲದೆ, 13 ಪತ್ರಕರ್ತರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇಷ್ಟೆ ಅಲ್ಲದೆ, ಪತ್ರಕರ್ತರು ದಾಳಿಗಳು, ಬೆದರಿಕೆಗಳು, ಸೈಬರ್ ದಾಳಿಗಳು, ಸೆನ್ಸಾರ್ಶಿಪ್‌ ಒಳಗಾಗಿದ್ದಾರೆ. ಜೊತೆಗೆ ಅವರ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿದೆ ಎಂದು  CPJ ಹೇಳಿದೆ. ಕೊಲ್ಲಲ್ಪಟ್ಟ, ಕಾಣೆಯಾದ, ಬಂಧನಕ್ಕೊಳಗಾದ, ಗಾಯಗೊಂಡ ಅಥವಾ ಬೆದರಿಕೆಗೆ ಒಳಗಾದ ಮಾಧ್ಯಮ ಕಚೇರಿಗಳು ಮತ್ತು ಪತ್ರಕರ್ತರು ಹಾಗೂ ಅವರ ಮನೆಗಳಿಗೆ ಹಾನಿಯಾದ ಹಲವಾರು ದೃಢೀಕರಿಸದ ವರದಿಗಳನ್ನು CPJ ತನಿಖೆ ನಡೆಸುತ್ತಿದೆ ಎಂದು ವರದಿ ಹೇಳಿದೆ.

ವಿಡಿಯೊ ನೋಡಿ: ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *