ಬೀದರ್ | 6.60 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಜಪ್ತಿ : ಪೊಲೀಸರ ಮಿಂಚಿನ ಕಾರ್ಯಾಚರಣೆ

ಬೀದರ್: ರಾಷ್ಟ್ರೀಯ ಹೆದ್ದಾರಿ ಮೂಲಕ ಅಕ್ರಮವಾಗಿ ಗಾಂಜಾ ಸಾಗಿಸುತಿದ್ದ ವೇಳೆ  ಬೀದರ್ ಪೊಲೀಸರು ಬೃಹತ್ ಗಾಂಜಾ ಜಾಲವನ್ನು ಭೇದಿಸಿದ್ದಾರೆ.  ಮಿಂಚಿನ ಕಾರ್ಯಾಚರಣೆ ನಡೆಸಿದ ಬೀದರ್ ಖಾಕಿ ಪಡೆಯು 6.60 ಕೋಟಿ ರೂ. ಮೌಲ್ಯದ 660 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿದೆ. ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ಶನಿವಾರ ಈ ಪ್ರಕರಣ ನಡೆದಿದೆ.

ಸದ್ಯ ಹೈದಾಬಾದ್​ನಲ್ಲಿ ನೆಲೆಸಿದ್ದಾರೆ. ಒಡಿಶಾದಿಂದ ಆಂಧ್ರಪ್ರದೇಶ ಮತ್ತು ಹೈದರಾಬಾದ್ ಮಾರ್ಗವಾಗಿ ಇಲ್ಲಿಯ ರಾಜೇಶ್ವರ ಮೂಲಕ ರಾಷ್ಟ್ರೀಯ ಹೆದ್ದಾರಿ-65ರ ಮೇಲಿಂದ ನೆರೆಯ ಮಹಾರಾಷ್ಟ್ರಕ್ಕೆ ಟಾಟಾ ಗೂಡ್ಸ್ ವಾಹನದ ಮೂಲಕ ಅಕ್ರಮವಾಗಿ ಗಾಂಜಾ ಸಾಗಿಸುವಾಗ ಪೊಲೀಸರು ದಾಳಿ ಮಾಡಿದ್ದಾರೆ. ಬೀದರ್ ತಾಲೂಕಿನ ಮಗದಾಳ ಗ್ರಾಮದ ನಿವಾಸಿ ರಾಜಕುಮಾರ ಹೂಗಾರ ಹಾಗೂ ಸಂಜುಕುಮಾರ ಹೂಗಾರ ಬಂಧಿತ ಸಹೋದರ ಆರೋಪಿಗಳು.

ಇದನ್ನೂ ಓದಿ : ವಿಶೇಷ ಸಮಗ್ರ ಪರಿಷ್ಕರಣೆ (SIR) | ಧರ್ಮ, ಸಮುದಾಯಗಳನ್ನು ಗುರಿಯಾಗಿಸಿ ಮತದಾನದ ಹಕ್ಕನ್ನು ಕಸಿಯುತ್ತಿರುವ ಚುನಾವಣಾ ಆಯೋಗ – ಡಾ.ಕೆ.ಪ್ರಕಾಶ್ ಆರೋಪ

ಒಡಿಶಾದ ಮಲ್ಕಾನಗಿರಿಯಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಗಾಂಜಾ ಸಾಗಿಸುವ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಇದನ್ನು ಆಧರಿಸಿ ಬೀದರ್ ಪೊಲೀಸರು ಎಸ್​​ಪಿ ಪ್ರದೀಪ್ ಗುಂಟಿ, ಡಿವೈಎಸ್​ಪಿ ಮಡಿವಾಳಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಅಮೂಲ ಕಾಳೆ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮ ಪತ್ತೆ ಹಚ್ಚಿದೆ.

ರಾಜೇಶ್ವರ ಬಳಿ ಸಂಜೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಎಸ್​ಪಿ ಪ್ರದೀಪ್ ಗುಂಟಿ ಅವರು, ಅಕ್ರಮವಾಗಿ ಸಾಗಿಸುತ್ತಿದ್ದ 660 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಜಿಲ್ಲೆಯನ್ನು ಮಾದಕ ವಸ್ತುಗಳ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ ಹೊಂದಲಾಗಿದೆ. ಯಾವುದೇ ಕಾರಣಕ್ಕೂ ಗಾಂಜಾ ಸೇರಿದಂತೆ ಇತರ ಮಾದಕ ವಸ್ತುಗಳ ಸಾಗಣೆ ಅಥವಾ ಮಾರಾಟಕ್ಕೆ ಅವಕಾಶ ನೀಡಲಾಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ತೊಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

2 ಕೆಜಿಯಂತೆ 330 ಪ್ಯಾಕೆಟ್​ಗಳನ್ನು ಮಾಡಿ, ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಬೀದರ್ ಮೂಲದವರೇ ಆರೋಪಿಗಳಾಗಿದ್ದು, ಇವರು ಕೇವಲ ಸಾಗಣೆ ಮಾಡುತ್ತಿದ್ದರು. ಮಲ್ಕಾನಗಿರಿಯ ತಾಂಡಾವೊಂದರಿಂದ ಗಾಂಜಾವನ್ನು ಸೋಲಾಪುರ ಓರ್ವ ವ್ಯಕ್ತಿಗೆ ರವಾನಿಸಲಾಗುತ್ತಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದೇವೆ ಎಂದು ಎಸ್​ಪಿ ತಿಳಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಡಿವೈಎಸ್ಪಿ ಮಡಿವಾಳಪ್ಪ ಪಿಎಸ್, ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ಅಮೂಲ ಕಾಳೆ, ಪಿಎಸ್‌ಐಗಳಾದ ನಾಗೇಂದ್ರ, ಸುವರ್ಣ ಮಲಶಟ್ಟಿ, ಜಯಶ್ರೀ ಹೋಡಲ್ ಸೇರಿದಂತೆ ಇತರರು ಇದ್ದರು.

ಇದನ್ನೂ ನೋಡಿ : ರೈತ ಕಾರ್ಮಿಕರ ಧರಣಿ | ಬೆಂಗಳೂರು | ಧರಣಿ ಸ್ಥಳಕ್ಕೆ ಬಾರದ ಸಚಿವರು ; ರಸ್ತೆಗಿಳಿದು ರೈತರು Janashakthi Media

 

Donate Janashakthi Media

Leave a Reply

Your email address will not be published. Required fields are marked *