ಗಂಗಾ ಸ್ನಾನ ಮಾಡಿದ್ರೆ ಕೊರೊನಾ ಹೋಗುತ್ತೆ: ತೀರಥ್‌ ಸಿಂಗ್‌ ರಾವತ್‌

ಡೆಹ್ರಾಡೂನ್: ಕುಂಭಮೇಳದಲ್ಲಿ ಗಂಗಾಸ್ಥಾನ ಮಾಡಿದರೆ ಕೊರೊನಾ ಹೋಗುತ್ತೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ ಸಿಂಗ್‌ ರಾವತ್‌ ಹೇಳಿದ್ದಾರೆ.  ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸದಾ ಟೀಕೆಗಳಿಗೆ ಗುರಿಯಾಗುವ ಉತ್ತರಖಂಡ ಸಿಎಂ ತೀರಥ್‌ ಸಿಂಗ್‌ ರಾವತ್‌ ಈಗ ಮತ್ತೊಂದು ಹೇಳಿಕೆ ಮೂಲಕ ತಮ್ಮನ್ನು ಮತ್ತೊಮ್ಮೆ ಟೀಕೆಗೊಳಗಾಗಿದ್ದಾರೆ.

ಸ್ಥಳೀಯ ಮಾಧ್ಯಮವೊಂದರ ಪ್ರಶ್ನೆಗೆ ಉತ್ತರಿಸಿದ ತೀರಥ್‌ನಾಥ್‌ ಸಿಂಗ್‌ ರಾವತ್‌ ಅವರು ʻʻಕುಂಭಮೇಳ ಮತ್ತು ತಬ್ಲೀಘಿ ಜಮಾತ್‌ ಮರ್ಕಜ್ ಎರಡು ಧಾರ್ಮಿಕ ಕಾರ್ಯಕ್ರಮಗಳನ್ನು ಹೋಲಿಕೆ ಮಾಡಬೇಡಿ. ತಬ್ಲೀಘಿ ಜಮಾತ್‌ ಮರ್ಕಜ್ ಕಟ್ಟಡದ ಒಳಗಡೆ ನಡೆದರೆ ಕುಂಭಮೇಳ ತೆರೆದ ಜಾಗದಲ್ಲಿ ನಡೆಯುತ್ತದೆ. ಅದಲ್ಲದೆ ತಬ್ಲೀಘಿ ಜಮಾತ್‌ ಮರ್ಕಜ್ ಕಾರ್ಯಕ್ರಮಕ್ಕೆ ವಿದೇಶಿಗರು ಬರುವ ಸಾಧ್ಯತೆ ಇದೆ ಹಾಗಾಗಿ ಅಲ್ಲಿ ಕೊರೊನಾ ಹರಡುತ್ತದೆʼʼ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನು ಓದಿ: ಕೊರೊನಾ ಎರಡನೆ ಅಲೆ: ಸೋಂಕಿನ ಪ್ರಮಾಣ ಹೆಚ್ಚಳ, ಒಂದೇ ದಿನದಲ್ಲಿ 2 ಲಕ್ಷ ಪ್ರಕರಣಗಳು

ಕುಂಭಮೇಳ ಹರಿದ್ವಾರದಿಂದ ಹೃಷಿಕೇಶ, ನೀಲಕಂಠದವರೆಗೆ 16 ಘಾಟ್‌ (ತೀರ)ಗಳಲ್ಲಿ ನಡೆಯುತ್ತಿದೆ. ಎಲ್ಲಾ ಜನರು ಒಂದು ಕಡೆ ಸ್ನಾನ ಮಾಡುವುದಿಲ್ಲ. ಇಲ್ಲಿನ ನೀರಿನ ಹರಿವಿನಲ್ಲಿ ಗಂಗಾಮಾತೆಯ ಆಶೀರ್ವಾದವಿದೆ. ಇಲ್ಲಿ ಕೊರೋನಾ ಬರಲ್ಲ’ ಎಂದಿದ್ದಾರೆ.

ಅಲ್ಲದೆ ಮುಂದುವರೆದು ಮಾತನಾಡಿದ ಅವರು ʻʻಕುಂಭಮೇಳದಲ್ಲಿ ಹೊರಗಿನಿಂದ ಯಾರು ಬರುವುದಿಲ್ಲ ಎಲ್ಲರು ನಮ್ಮವರೆ ಆಗಿರುತ್ತಾರೆ. ಆದರೆ ಕಳೆದ ಬಾರಿ ತಬ್ಲೀಘಿ ಜಮಾತ್‌ ಮರ್ಕಜ್ ನಡೆದಾಗ ಕೊರೊನಾ ಕುರಿತು ಹೆಚ್ಚಿನ ಅರಿವು ಇರಲಿಲ್ಲ ಮತ್ತು ಮಾರ್ಗಸೂಚಿಗಳಿರಲಿಲ್ಲ. ಆ ಕಾರ್ಯಕ್ರಮದಲ್ಲಿ ಯಾರು ಎಷ್ಟು ದಿನ ಉಳಿದುಕೊಳ್ಳಲಿದ್ದಾರೆ ಮತ್ತು ಒಟ್ಟು ಜನಸಂಖ್ಯೆಯ ಸರಿಯಾದ ಯೋಜನೆ ಇರಲಿಲ್ಲʼʼ ಎಂದರು.

ಕುಂಭಮೇಳ 12 ವರ್ಷಗಳಿಗೊಮ್ಮೆ ಬರುತ್ತದೆ. ಹಾಗೆ ಕುಂಭಮೇಳ ಲಕ್ಷಾಂತರ ಜನರ ನಂಬಿಕೆ ಮತ್ತು ಭಾವನೆಗಳೊಂದಿಗೆ ನಂಬಿಕೆ ಹೊಂದಿರುತ್ತದೆ. ಪ್ರಸ್ತುತ ಕೊರೊನಾ ಕುರಿತು ಹೆಚ್ಚಿನ ಅರಿವು ಮೂಡಿದ್ದು, ಸರಿಯಾದ ಮಾರ್ಗಸೂಚಿಗಳನ್ನು ತೆಗೆದುಕೊಂಡು ಕುಂಭಮೇಳ ನಡೆಸಲಾಗುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಸಚಿವರನ್ನು ಸ್ವಾಗತಿಸುವ ತಯಾರಿಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು: ಕೋವಿಡ್‌ನಿಂದ ಮಾಜಿ ಯೋಧ ಸಾವು

ಈಗಾಗಲೇ ಕುಂಭಮೇಳಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಕುಂಭಮೇಳವನ್ನು ಯಶಸ್ವಿಯಾಗಿ ನಡೆಸುವ ಸವಾಲು ನಮ್ಮ ಮುಂದಿದೆ. ಜನರ ಆರೋಗ್ಯ ದೃಷ್ಟಿಯಿಂದ ಸರಿಯಾದ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ಕುಂಭಮೇಳ ನಡೆಸುವುದಾಗಿ ತಿಳಿಸಿದ್ದಾರೆ.

ಕೊರೋನಾ ಪ್ರಕರಣಗಳು ತೀವ್ರಗತಿಯಲ್ಲಿ ದಾಖಲಾಗುತ್ತಿರುವ ಈ ಸಂದರ್ಭದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಉತ್ತರಾಖಂಡದ ಹರಿದ್ವಾರ, ಹೃಷಿಕೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕುಂಭಮೇಳ ನಡೆಸುತ್ತಿರುವುದಕ್ಕೆ ವ್ಯಾಪಕ ಟೀಕೆಗಳು ಕೇಳಿಬಂದಿವೆ. 1000ಕ್ಕೂ ಹೆಚ್ಚು ಪಾಸಿಟಿವ್‌ ಪ್ರಕರಣಗಳೂ ಕುಂಭದಲ್ಲಿ ದಾಖಲಾಗುತ್ತಿವೆ.

Donate Janashakthi Media

Leave a Reply

Your email address will not be published. Required fields are marked *