ರಾಯ್‌ಪುರ: ಬಿಜೆಪಿ ಮುಖಂಡನ ಮಗ ಸೇರಿದಂತೆ 10 ಜನರನ್ನು ಛತ್ತೀಸ್‌ಗಢ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿದ್ದಾರೆ. ಆಗಸ್ಟ್ 30 ರಂದು ಆರೋಪಿಗಳು ಇಬ್ಬರು ಸಹೋದರಿಯರ ಮೇಲೆ 10 ಜನರ ಗುಂಪು ಸಾಮೂಹಿಕ ಅತ್ಯಚಾರ ಮಾಡಿದ್ದಾಗಿ ಆರೋಪಿಸಲಾಗಿದೆ.
ಸಹೋದರಿಯರಿಬ್ಬರು ರಕ್ಷಾ ಬಂಧನ ಹಬ್ಬವನ್ನು ಆಚರಿಸಿ ಹಿಂದಿರುಗುತ್ತಿದ್ದಾಗ ಘಟನೆ ನಡೆದಿದ್ದು, ಅವರ ಜೊತೆಗೆ ಒಬ್ಬ ಯುವತಿಯ ಭಾವಿ ಪತಿ ಕೂಡಾ ಇದ್ದರು ಎಂದು ವರದಿಯಾಗಿದೆ. ದಾರಿಯಲ್ಲಿ ತಡೆದ ಹತ್ತು ಮಂದಿ ದಾಳಿಕೋರರ ಗುಂಪು ಭೀಕರ ಹಲ್ಲೆ ನಡೆಸಿದ್ದು ಸಾಮೂಹಿಕ ಅತ್ಯಾಚಾರ ನಡೆಸಿದೆ. ಯುವತಿಯರ ಜೊತೆಗಿದ್ದ ಯುವಕನಿಗೆ ಕೂಡ ತೀವ್ರ ದೈಹಿಕ ಹಿಂಸೆ ನೀಡಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಆಪ್ತ ಉದ್ಯಮಿ ಅದಾನಿಯ ಮತ್ತೊಂದು ಮೋಸ ಬಹಿರಂಗ | ಸ್ವಂತ ಷೇರುಗಳ ಮೇಲೆಯೆ ರಹಸ್ಯ ಹೂಡಿಕೆ!
ಹಬ್ಬ ಆಚರಿಸಿ ಹಿಂತಿರುಗುತ್ತಿದ್ದಾಗ ಮೂವರು ಆರೋಪಿಗಳು ಅವರನ್ನು ಮೊದಲಿಗೆ ಅಡ್ಡಗಟ್ಟಿದ್ದರು. ನಂತರ ಅವರಿಂದ ನಗದು ಹಾಗೂ ಮೊಬೈಲ್ ದೋಚಿದ್ದಾರೆ. ಆಮೇಲೆ ಉಳಿದ ಏಳು ಆರೋಪಿಗಳು ನಾಲ್ಕು ದ್ವಿಚಕ್ರವಾಹನಗಳಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಈ ನಡುವೆ ಆರೋಪಿಗಳು ಇಬ್ಬರು ಸಹೋದರಿಯರನ್ನು ಮುಖ್ಯ ರಸ್ತೆಯಿಂದ ದೂರವಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಪುತ್ರ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಕೆಲವರು ಅಪರಾಧ ಚಟುವಟಿಕೆಗಳ ಇತಿಹಾಸವಿರುವ ವ್ಯಕ್ತಿಗಳು ಇದ್ದಾರೆ ಎಂದು ವರದಿಯಾಗಿದೆ. ಪ್ರಮುಖ ಶಂಕಿತರಲ್ಲಿ ಒಬ್ಬರಾದ ಪೂನಂ ಠಾಕೂರ್ ಸ್ಥಳೀಯ ಬಿಜೆಪಿ ನಾಯಕಿ ಲಕ್ಷ್ಮೀ ನಾರಾಯಣ ಸಿಂಗ್ ಮಗನಾಗಿದ್ದಾನೆ.
ಈ ಪೂನಂ ಠಾಕೂರ್ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳಿವೆ. 2019 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಆಗಸ್ಟ್ 17 ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ರಾಷ್ಟ್ರಪತಿಯವರು ಛತ್ತೀಸ್‌ಗಢಕ್ಕೆ ಎರಡು ದಿನಗಳ ಭೇಟಿಯಲ್ಲಿದ್ದಾಗಲೆ ಈ ಭೀಕರ ಘಟನೆ ನಡೆದಿದೆ.
ವಿಡಿಯೊ ನೋಡಿ: “ಅಂದು ಮೌನವಾಗಿದ್ದ ಬಿಜೆಪಿ, ಇಂದು ಯಾರ ರಕ್ಷಣೆಗಾಗಿ ಎದ್ದಿದ್ದಾರೆ? ಕೆ. ನೀಲಾ ಪ್ರಶ್ನೆ Janashakthi Media