ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಕಾರ್ಯದರ್ಶಿ ಗಣಪತಿ ಭಟ್ ಅವರನ್ನು ಬಂಧಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರು ಪಿಎಸ್ಐ ಹಗರಣ ಸಂಬಂಧ ಸಿಐಡಿ ಅಧಿಕಾರಿಗಳು ಬಂಧಿಸಿರುವ ಗಣಪತಿ ಭಟ್ ಗೂ ಗೃಹ ಸಚಿವರ ಕಚೇರಿಗೂ ಏನ್ ಸಂಬಂಧ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗೃಹ ಸಚಿವರ ಕಚೇರಿಗೆ ಆರೋಪಿ ಗಣಪತಿ ಭಟ್ ಬರ್ತಾ ಇದ್ದಿದ್ದು ನಿಜಾನಾ? ಎಂದಿದ್ದಾರೆ. ಅಲ್ಲದೆ, ಪಿಎಸ್ಐ ನೇಮಕಾತಿ ಹಗರಣ ನಡೆಯುತ್ತಿದ್ದ ದಿನಗಳ ಗೃಹ ಸಚಿವರ ಕಚೇರಿ, ಮನೆಯ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಗೃಹ ಸಚಿವರು ಬಹಿರಂಗ ಮಾಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಜನರಿಗೆ ವದಂತಿಗಳನ್ನು ಹರಡದೆ ಪಾರದರ್ಶಕವಾಗಿರಬೇಕಾದುದು ಗೃಹ ಸಚಿವರ ಕರ್ತವ್ಯ. ನಾನು ಮೊದಲೇ ಹೇಳಿದ್ದೇನೆ, ಪಿಎಸ್‌ಐ ಹಗರಣದ ಸೂತ್ರಧಾರಿಗಳು ಬೇರೆ ಇದ್ದಾರೆ. ಆದರೆ ತನಿಖೆ ಪಾತ್ರಧಾರಿಗಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. ನ್ಯಾಯಾಂಗ ತನಿಖೆ ನಡೆಯದೆ ಪಿಎಎಸ್‌ಐ ಹಗರಣಕ್ಕೆ ಮುಕ್ತಿ ಇಲ್ಲ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.