ಗದಗ-ವಾಡಿ ರೈಲ್ವೆ ಮಾರ್ಗ ಪ್ರಾಯೋಗಿಕ ಸಂಚಾರ ಪರೀಕ್ಷೆ ಯಶಸ್ವಿ

ಕುಷ್ಟಗಿ:  ಗದಗ-ವಾಡಿ ನೂತನ ರೈಲ್ವೆ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರವನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ರೈಲ್ವೆ ಸುರಕ್ಷತಾ ಆಯಕ್ತರನ್ನು ಒಳಗೊಂಡ ತಜ್ಞರ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಲಿಂಗನಬಂಡಿ ಕುಷ್ಟಗಿ ರೈಲು ನಿಲ್ದಾಣಗಳ ಮಧ್ಯೆ ಪರಿಶೀಲನೆ ನಡೆಸಿದರು. ಗದಗ

ಪ್ರತ್ಯೇಕ ಟ್ರಾಲಿಗಳಲ್ಲಿ ಹಳಿಗಳಗುಂಟ ಸಂಚರಿಸಿದ ತಂತ್ರಜ್ಞರು ಎಲ್ಲ ಹಂತದಲ್ಲೂ ಹಳಿಗಳ ಜೋಡಣೆಗೆ ಸಂಬಂಧಿಸಿದಂತೆ ಪ್ರತಿಯೊಂದು ಅಂಶಗಳನ್ನು ಖುದ್ದಾಗಿ ಗಮನಿಸಿದರು. ಗದಗ

ಪರಿಶೀಲನೆ ವೇಳೆ ಕೆಲವು ನ್ಯೂನತೆಗಳನ್ನು ಗುರುತಿಸಿದರು ಎಂದು ಮೂಲಗಳು ತಿಳಿಸಿವೆ. ನಂತರ ನಿಲ್ದಾಣದಲ್ಲಿನ ವ್ಯವಸ್ಥೆ, ನಿಯಂತ್ರಣ ಕೇಂದ್ರ ಮತ್ತಿತರ ಕಾಮಗಾರಿಗಳನ್ನೂ ವೀಕ್ಷಿಸಿ ಮಾಹಿತಿ ಪಡೆದರು.

ಇದನ್ನೂ ಓದಿ: 6 ತಿಂಗಳಲ್ಲೇ ಅಣೆಕಟ್ಟು ಸಮಸ್ಯೆ: ತಂತ್ರಜ್ಞರೊಂದಿಗೆ ಸಿದ್ದರಾಮಯ್ಯ ಸಮಿತಿ ರಚನೆ

ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ, ಇತರೆ ಅಧಿಕಾರಿಗಳಾದ ರಾಮಮೋಹನ ರೆಡ್ಡಿ, ಮೀನಾ ಬೇಲಾ, ಪ್ರಸಾದ ಬಿರಾದಾರ, ಕಾರ್ತಿಕ್ ಹೆಗಡೆ, ಅರವಿಂದ ಹರ್ಲೆ, ಸತ್ಯನಾರಾಯಣ, ಸುರೇಶಕುಮಾರ, ಬಿ.ಎಂ. ಜಯಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮುದಗೌಡರ ಇತರರು ಹಾಜರಿದ್ದರು.

ವರದಿ ಶೀಘ್ರ: ರೈಲ್ವೆ ಸುರಕ್ಷತಾ ಆಯುಕ್ತರ ತಂಡವು, ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ವರದಿ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಪ್ರಯಾಣಿಕರ ರೈಲು ಸಂಚಾರಕ್ಕೆ ಅನುಮತಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಅಂತಿಮ ಹಂತದ ಪ್ರಯೋಗಾರ್ಥ ಪಟ್ಟಣಕ್ಕೆ ಬಂದ ರೈಲು ನೋಡಲು ಇಲ್ಲಿಯ ನಿಲ್ದಾಣದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಜನರು ಜಮಾಯಿಸಿದ್ದರು. ರೈಲು ಬರುತ್ತಿದ್ದಂತೆ ಪುಳಕಗೊಂಡು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.

ತಮ್ಮೂರಿನ ನಿಲ್ದಾಣಕ್ಕೆ ಬಂದ ರೈಲನ್ನು ಸ್ಪರ್ಶಿಸಿ, ಬೋಗಿಯ ಒಳಗೆ ಕುಳಿತು ಆನಂದಿಸಿದರು. ಇನ್ನೂ ಕೆಲವರು ಎಂಜಿನ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಹಿಂದುಳಿದ ಪ್ರದೇಶದಲ್ಲಿ ಪಟ್ಟಣದಲ್ಲಿ ರೈಲು ಸಂಚರಿಸುತ್ತದೆ ಎಂಬುದು ಕಲ್ಪನೆಗೂ ಮೀರಿದ ವಿಷಯವಾಗಿತ್ತು ಎಂದು ಪ್ರಮುಖರಾದ ವೀರೇಶ ಬಂಗಾರಶೆಟ್ಟರ, ಭರತೇಶ ಜೋಷಿ, ಜೆ.ಜಿ. ಆಚಾರ, ನಜೀರಸಾಬ್ ಮೂಲಿಮನಿ, ಮಹಾಂತಯ್ಯ ಅರಳೆಲೆಮಠ, ಘೋರ್ಪಡೆ, ನಿವೃತ್ತ ಎಎಸ್‌ಐ ದೊಡ್ಡಪ್ಪ ಇತರರು ಖುಷಿ ಹಂಚಿಕೊಂಡರು. ಅದಕ್ಕೂ ಪೂರ್ವದಲ್ಲಿ ರೈಲಿನ ಎಂಜಿನ್‌ಗೆ ಹೂಮಾಲೆ ಹಾಕಿ ಸ್ವಾಗತಿಸಲಾಯಿತು.

ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ಮತ್ತು ತಂಡ ಹಳಿ ಜೋಡಣೆ ಕಾಮಗಾರಿ ಪರಿಶೀಲಿಸಿದರು.

ಇದನ್ನೂ ನೋಡಿ: ಮಂಗಳೂರು | ಕುಡಿಯಲು ನೀರು ಕೊಡಿ : ಖಾಲಿ ಕೊಡಗಳೊಂದಿಗೆ ಪಾಲಿಕೆಗೆ ಬರ್ತಿವಿ Janashakthi Media

Donate Janashakthi Media

Leave a Reply

Your email address will not be published. Required fields are marked *