ಗದಗ : ಕೋವಿಡ್ ಆಸ್ಪತ್ರೆ ಯಲ್ಲಿ ಕೊರೊನಾ ಸೋಂಕಿ ನಿಂದ ತಾಲ್ಲೂಕಿನ ಬಾಸಲಾಪೂರ ಗ್ರಾಮದ ವ್ಯಕ್ತಿಯೋರ್ವನು ಮೃತಪಟ್ಟಿದರು. ಅವರ ಕುಟುಂಬದ ಸದಸ್ಯರು ಊರಿನ ರುದ್ರಭೂಮಿಗೆ ಕಾಯ್ದಿರಿಸಿದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿ ತಯಾರಿ ನಡೆಸಿದ್ದರು.
ಅದರಂತೆ, ಮೃತ ವ್ಯಕ್ತಿಯ ಸಾವು ಸಹಜ ಸಾವು. ಬಾಸಲಾಪೂರದ ಮನೆಗೆ ತಂದು ನಂತರ ಅಂತ್ಯಸಂಸ್ಕಾರ ನಡೆಸಲು ಮುಂದಾದಾಗ ಕುಟುಂಬಸ್ಥರ ವಿರುದ್ಧ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಕರೋನಾ ಇಲ್ಲದಿದ್ದರೆ ರಿಪೋರ್ಟ್ ತೋರಿಸಿ. ಇಲ್ಲವಾದರೆ ಕೋವಿಡ್ ಮಾರ್ಗಸೂಚಿ ಅನ್ವಯ ಅಂತ್ಯಸಂಸ್ಕಾರಕ್ಕೆ ಮುಂದಾಗಿ ಎಂದು ಪಟ್ಟು ಹಿಡಿದರು.
ಕೊರೋನಾ ಹಿನ್ನೆಲೆಯಲ್ಲಿ ರೋಣ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ, ಹೆಚ್ಷಿನ ಚಿಕಿತ್ಸೆಗೆ ಕಳೆದ ಎರಡು ದಿನದಿಂದ ಬದಾಮಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಿಸದೇ ಮೃತನಾಗಿದ್ದು, ಆದರೆ ಕೊವಿಡ್ ಮಾರ್ಗಸೂಚಿ ಅನುಸರಿಸಿದೇ ಎಕಾಏಕೀ ಶವ ಸಂಸ್ಕಾರ ಮುಂದಾಗಲು ಬಿಡುವದಿಲ್ಲ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.
ಅಂತ್ಯಸಂಸ್ಕಾರ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪಿಎಸ್ಐ ವಿನೋದ ಪೂಜಾರಿ, ಕಂದಾಯ ನಿರೀಕ್ಷಕ ನಿಂಗಪ್ಪ ಅಡಿವೆಣ್ಣವರ, ಪಿಡಿಓ ಲೋಹಿತ್ ಎಂ., ಗ್ರಾಮಸ್ಥರ ಮತ್ತು ಕುಟುಂಬಸ್ಥರ ವಾದ ಆಲಿಸಿ, ಸರ್ಕಾರಿ ಆಸ್ಪತ್ರೆಯಿಂದ ಮೃತ ವ್ಯಕ್ತಿಯ ಕೋವಿಡ್ ವರದಿ ತರೆಯಿಸಲಾಯಿತು. ಅದರಲ್ಲಿ, ಕೋವಿಡ್ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ರೋಣ ಸರ್ಕಾರಿ ಆಸ್ಪತ್ರೆಯಿಂದ ಪಿಇಪಿ ಕಿಟ್ ತರೆಯಿಸಿ, ಕೋವಿಡ್ ಮಾರ್ಗಸೂಚಿ ಅನ್ವಯ ಅಧಿಕಾರಿಗಳೇ ರುದ್ರಭೂಮಿ ಜಮೀನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಪಿಎಸ್ಐ ವಿನೋದ ಪೂಜಾರಿ ನೇತೃತ್ವದಲ್ಲಿ ಗ್ರಾಮದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತು.
ಕೋವಿಡ್ ನಿಂದ ಮೃತವ್ಯಕ್ತಿಯ ಸಾವಿನ ವರದಿ ನೀಡದೇ, ಯಾವುದೇ ಮುಂಜಾಗ್ರತೆಯ ಕ್ರಮ ವಹಿಸದೆ ಶವ ನೀಡುವುದು ಬಹಳ ಅಪಾಯಕಾರಿ. ಇಚೆಗೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ಖೀರ್ವಾ ಗ್ರಾಮದಲ್ಲಿ ಕೋವಿಡ್ನಿಂದ ಮೃತನಾದ ವ್ಯಕ್ತಿಯೊಬ್ಬನ ಅಂತ್ಯಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿ ಪಾಲಿಸದೇ ಅಂತ್ಯಸಂಸ್ಕಾರ ಮಾಡಿದ ಕೆಲವೇ ದಿನಗಳಲ್ಲಿ 21 ಮಂದಿ ಮೃತಪಟ್ಟಿದ್ದಾರೆ. ಪಿಇಪಿ ಕಿಟ್ ಇಲ್ಲದೆ, ಅಂತ್ಯಸಂಸ್ಕಾರ ಭಾಗವಹಿಸುವುದು ಬಹಳ ಅಪಾಯಕಾರಿ. ಇಂತಹ ಘಟನೆ ಮರಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ವರದಿ: ದಾವಲಸಾಬ ತಾಳಿಕೋಟಿ.