ಗದಗ: ಸಮೀಪದ ಬೆಟಗೇರಿಯಲ್ಲಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳೆಯಲ್ಲಿ ಡಾಕ್ಟರ್ ಇಲ್ಲದೇ ರೋಗಿಗಳ ಪರದಾಡಿದ ಸ್ಥಿತಿ ನಿರ್ಮಾಣವಾಗಿದೆ ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಬಂದ ರೋಗಿಗಳ ಪರದಾಟ ನಡೆಸುತ್ತಿದ್ದಾರೆ.
ಸೋಮವಾರ ಸಂಜೆ 4 ಗಂಟೆಯಿಂದ ರಾತ್ರಿ 11 ಘಂಟೆಯ ವರೆಗೂ ಕೇವಲ ಒಬ್ಬ ಮಹಿಳಾ ಸ್ಟಾಫ್ ನರ್ಸ್ ಬಿಟ್ಟರೆ ಯಾವುದೇ ವೈದ್ಯರು ಲಭ್ಯವಿದ್ದಿಲ್ಲ ಕೋವಿಡ್ ಪಾಸಿಟಿವ್ ನಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಜಿಮ್ಸ ಆಸ್ಪತ್ರೆಯಲ್ಲಿ ಎಲ್ಲ ಬೆಡ್ ಗಳು ಭರ್ತಿಯಾಗಿರುವುದರಿಂದ ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿವಿಧ ಗ್ರಾಮೀಣ ಪ್ರದೇಶದಿಂದಆಗಮಿಸಿದ ರೋಗಿಗಳು ಡಾಕ್ಟರ್ ಇಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ರಾತ್ರಿ ವೇಳೆ ರೋಗಿಗಳ ಆರೋಗ್ಯದಲ್ಲಿ ಏರುಪೇರು ಆದರೆ ಯಾರು ಹೊಣೆ.
ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ವಿಚಾರಿಸಿದಾಗ ನಮ್ಮಲ್ಲಿರುವ ಇಬ್ಬರು ಡ್ಯೂಟಿ ಡಾಕ್ಟರ್ ಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದೆ ಕಾರಣ ನಾವು ಜಿಮ್ಸ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ತಕ್ಷಣ ಬರುಲು ಹೇಳಿದ್ದು ಅವರು ಬರುತ್ತಾರೆ ಎಂದು ಹೇಳಿದರು.
ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಡಾಕ್ಟರ್ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.