ಗದಗ : ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೆಂಟಿಲೇಟರ್ ವ್ಯವಸ್ಥೆಯಾಗದೆ ಮತ್ತೆ ಮೂವರು ಅಮಾಯಕ ಜೀವಗಳ ಬಲಿಯಾದ ದುರಂತದ ಘಟನೆ ಜಿಲ್ಲೆಯ ರೋಣ ತಾಲೂಕು ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ರೋಗಿಗಳು
ವೆಂಟಿಲೇಟರ್ ಅಗತ್ಯತೆ ಇರುವ ಬಗ್ಗೆ ತಿಳಿಸಿದ್ದ ವೈದ್ಯರು ತೀವ್ರ ಉಸಿರಾಟದ ತೊಂದರೆಯಿಂದ ಹೊಳೆ ಆಲೂರು ಗ್ರಾಮದ ಪುರುಷ (56)ವರ್ಷದ ಕೋವಿಡ್ ಸೋಂಕಿತ,ಮುದೇನಗುಡಿ ಗ್ರಾಮದ ಸರೋಜಾ ಉಳ್ಳಾಗಡ್ಡಿ (60) ಕೋವಿಡ್ ಶಂಕಿತ ರೋಗಿ,ರೋಣ ಪಟ್ಟಣದ ಆರ್ ಕಳಸಣ್ಣವರ (58) ವರ್ಷ ನಾನ್ ಕೊವಿಡ್ ರೋಗಿಯೂ ಮೃತ ಪಟ್ಟಿದ್ದಾರೆ.
ಇತ್ತಿಚೆಗೆ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲೂ ನಾಲ್ಕು ಜನರು ವೆಂಟಿಲೇಟರ್ ಸಿಗದೆ ಸಾವನ್ನಪ್ಪಿದ ಘಟನೆಯನ್ನು ಇಲ್ಲಿ ಗಮನಿಸ ಬಹುದು. ಬಹುತೇಕ ಗದಗ ಜಿಲ್ಲೆಯ ತಾಲೂಕಾ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೇ ರೋಗಿಗಳು ಪರದಾಟ ನಡೆಸುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಇತ್ತ ಕಡೆ ಮುತುವರ್ಜಿ ವಹಿಸಿ ರೋಗಿಗಳ ಜೀವ ಕಾಪಾಡಲು ಮುಂದಾಗಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು..
ವರದಿ: ದಾವಲಸಾಬ ತಾಳಿಕೋಟಿ
ಬಿಜೆಪಿ ಸರಕಾರ ಸಾವಿನ ಭಾಗ್ಯ ಕರುಣಿಸಿದೆ