ಗಬ್ಬೆದ್ದು ನಾರುತ್ತಿದೆ ಗಬ್ಬೂರು ಹಾಸ್ಟೇಲ್‌!

ಹರಿದ ಹಾಸಿಗೆ, ತುಕ್ಕು ಹಿಡಿದ ಮಂಚ, ಶುಚಿತ್ವ ಇಲ್ಲದ ಶೌಚಾಲಯ, ಗಬ್ಬುನಾಥ, ಪಾಳು ಬಿದ್ದ ಮನೆಯಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳು, ಮಲಗಿದಾಗ ಮೈಮೇಲೆ ಹರಿದಾಡುವ ಹಾವು ಚೇಳು. ಅಬ್ಬಬ್ಬಾ ನರಕದ ನರಳಾಟದಲ್ಲಿ ವಿದ್ಯಾರ್ಥಿಗಳು ದಿನದೂಡುತ್ತಿದ್ದಾರೆ.

ಹೌದು, ಇಂತಹದ್ದೊಂದು ಭಯನಾಕ ಚಿತ್ರಣ ಕಾಣುವುದು ರಾಯಚೂರು ಜಿಲ್ಲೆಯ, ದೇವದುರ್ಗ ತಾಲ್ಲೂಕಿನ ಗಬ್ಬೂರು ಹಾಸ್ಟೇಲ್‌ನಲ್ಲಿ ಮೂಲ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳು ದಿನ ನಿತ್ಯ ಕಣ್ಣೀರು ಹಾಕುತ್ತಾ ಶಾಲೆಗೆ ತೆರಳುತ್ತಾರೆ. ಮೆಟ್ರಿಕ್ ಪೂರ್ವ್ ಹಾಸ್ಟೇಲ್ ಇದಾಗಿದ್ದು, ಇಲ್ಲಿ ನೂರಾರು ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದಾರೆ. ಈ ಹಾಸ್ಟೇಲ್ ಸಮಸ್ಯೆಗಳನ್ನೆ ಮೈಮೇಲೆ ಹೊದ್ದು ಮಲಗಿದೆ. ಹರದ ಹಾಸಿಗೆ, ತುಕ್ಕು ಹಿಡಿದ ಮಂಚ, ಶುಚಿತ್ವ ಇಲ್ಲದ ಶೌಚಾಲಯ ಹೀಗೆ ಗಬ್ಬೂರು ಹಾಸ್ಟೇಲ್ ಗಬ್ಬೆದ್ದು ನಾರುತ್ತಿದೆ.

ಈ ಘಟನೆಗೆ ಎಸ್ಎಫ್‌ಐ ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ ಆಕ್ರೋಶ ಹೊರಹಾಕಿದ್ದಾರೆ.  ಇಲ್ಲಿರುವ ಮಕ್ಕಳಿಗೆ ಸರಿಯಾದ ಊಟವನ್ನು ನೀಡುತ್ತಿಲ್ಲ,  ಪ್ರಶ್ನೆ ಮಾಡಿದರೆ ವಿದ್ಯಾರ್ಥಿಗಳನ್ನು ಹಾಸ್ಟೇಲ್‌ನಿಂದ ಹೊರಗೆ ಕಳಿಸುವುದಾಗಿ ವಾರ್ಡನ್ ಬೆದರಿಕೆ ಹಾಕುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.  ಪೋಷಕರ ಸ್ಥಾನದಲ್ಲಿದ್ದ ಮಕ್ಕಳನ್ನು ನೋಡಿಕೊಳ್ಳಬೇಕಿದ್ದ ವಾರ್ಡನ್‌ ಈ ರೀತಿ ಉಡಾಫೆಯಾಗಿ ಮಾತನಾಡುತ್ತಿರುವುದು ಸರಿಯಲ್ಲ, ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು.  ಸಮಸ್ಯೆ ಗಮನಕ್ಕೆ ತಂದಾಗ ಮಾತ್ರ ಅಧಿಕಾರಿಗಳು ಬಗೆ ಹರಿಸುತ್ತಾರೆ. ಸುಮ್ಮನೆ ಕುಳಿತರೆ ಈ ಕಡೆ ಮುಖ ಮಾಡಿಯೂ ನೋಡುವುದಿಲ್ಲ. ಅಧಿಕಾರಿಗಳು ಹಾಗೂ ಸರಕಾರ ಹಾಸ್ಟೇಲ್‌ಗಳನ್ನು ಇಷ್ಟೊಂದು ನಿರ್ಲಕ್ಷಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿಹಾಸ್ಟೇಲ್‌ ನರಕ : ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?!

ಜನಶಕ್ತಿ ಮೀಡಿಯಾ ಜೊತೆ ಪೋಷಕ ರಾಮಪ್ಪ ಮಾತನಾಡುತ್ತಾ, ಮಕ್ಕಳು ಕಲಿಯಲು ಎಂದು ನಾವು ಹಾಸ್ಟೇಲ್‌ಗೆ ಕಳಿಸುತ್ತೇವೆ. ನಾವು ಖಾಸಗಿ ಶಾಲೆಯಲ್ಲಿ ಅಥವಾ ಖಾಸಗಿ ಹಾಸ್ಟೇಲ್‌ನಲ್ಲಿ ಓದಿಸುವಷ್ಟು ಸ್ಥಿತಿವಂತರಲ್ಲ. ಹಾಗಾಗಿ ಬಡವರಿಗಾಗಿ ಇರುವ ಹಾಸ್ಟೇಲ್‌ಗಳನ್ನು ಸರಕಾರ ಬಲಪಡಿಸಬೇಕು. ಪೋಷಕರು ನೆಮ್ಮದಿಂದ ಇರುವಂತೆ ನೋಡಿಕೊಳ್ಳಬೇಕಾದ ಜಾವಾಬ್ದಾರಿ ಸರಕಾರ ಹಾಗೂ ಅಧಿಕಾರಿಗಳದ್ದು,ಆ ನಿಟ್ಟನಲ್ಲಿ ಅವರು ಹಾಸ್ಟೇಲ್‌ಗಳಿಗೆ ಕೂಡಲೇ ಮೂಲಸೌಲಭ್ಯ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿಜನಶಕ್ತಿ ಮೀಡಿಯಾ ವರದಿ ಫಲಶೃತಿ: ಹಾಸ್ಟೇಲ್ ಸರ್ವೆಗೆ ಮುಂದಾದ ಸಮಾಜ ಕಲ್ಯಾಣ ಇಲಾಖೆ

ಹಾಸ್ಟೇಲ್ ನರಕ : ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು ಎಂದು ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾದ ಸುದ್ದಿಗೆ ಅಧಿಕಾರಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಹಾಸ್ಟೇಲ್‌ನಲ್ಲಿರುವ ಸಮಸ್ಯೆಗಳ ಮಾಹಿತಿಯನ್ನು ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಜಿಲ್ಲೆಗಳಿಗೆ ಪತ್ರ ಬರೆದಿದ್ದಾರೆ. ಹಾಸ್ಟೇಲ್ ಗಳ ಇನ್ನಷ್ಟು ಕರಾಳ ಚಿತ್ರಣವನ್ನು ನಾವು ಬಿತ್ತರಿಸಲಿದ್ದೇವೆ. ಪೋಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು 6361984022 ಈ ದೂರವಾಣಿ ಸಂಖ್ಯೆಗೆ ಮಾಹಿತಿಯನ್ನು ನೀಡಬಹುದಾಗಿದೆ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲು ಜನಶಕ್ತಿ ಮೀಡಿಯಾ ಕೆಲಸ ಮಾಡಲು ಬಯಸುತ್ತದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

Donate Janashakthi Media

Leave a Reply

Your email address will not be published. Required fields are marked *