ನವದೆಹಲಿ: ಜಿ 20 ಶೃಂಗಸಭೆ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ವಿವಿಧ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ಪ್ರಧಾನಿ ಮೋದಿ ಅವರು ಸುಮಾರು 15 ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಜಿ20 ಶೃಂಗಸಭೆ | ಬಡತನವನ್ನು ಪ್ಲಾಸ್ಟಿಕ್ ಹಾಕಿ ಮುಚ್ಚುತ್ತಿರುವ ಕೇಂದ್ರ ಸರ್ಕಾರ!
ಸೆ. 8ರಂದು ಅಮೆರಿಕಾ, ಮಾರಿಷಸ್ ಹಾಗೂ ಬಾಂಗ್ಲಾದೇಶದ ಪ್ರಮುಖರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಸೆ. 9ರಂದು ಜಿ 20 ಸಭೆ ನಡೆಯಲಿದೆ. ಸಭೆಯ ನಂತರ ಬ್ರಿಟನ್, ಜಪಾನ್, ಇಟಲಿ ಹಾಗೂ ಜರ್ಮನಿ ದೇಶದ ಪ್ರಮುಖರೊಂದಿಗೆ ನರೇಂದ್ರ ಮೋದಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಸೆ. 10ರಂದು ಫ್ರಾನ್ಸ್ನ ಅಧ್ಯಕ್ಷ ಇಮಾನ್ಯುಯಲ್ ಮಾಕ್ರಾನ್ ಜತೆ ಮಧ್ಯಾಹ್ನದ ಭೋಜನ ಮಾಡಲಿದ್ದಾರೆ. ಇದೇ ವೇಳೆ ಇಬ್ಬರು ನಾಯಕರು ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.