ಆದೇಶ ಮಾರ್ಪಡಿಸಿದ ಯುಕೆ: ಕೊವಿಶೀಲ್ಡ್​ ಲಸಿಕೆ ಪಡೆದ ಭಾರತದ ಪ್ರಯಾಣಿಕರಿಗೆ ಕ್ವಾರಂಟೈನ್​ ಇಲ್ಲ

ನವದೆಹಲಿ: ಭಾರತದ ಕೊವಿಶೀಲ್ಡ್​ ಲಸಿಕೆ ನಾವು ಅನುಮೋದಿಸುತ್ತೇವೆ. ಆದರೂ ಭಾರತದಿಂದ ನಮ್ಮ ದೇಶಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ 10 ದಿನಗಳ ಕಾಲ ಕ್ವಾರಂಟೈನ್​​ಗೆ ಒಳಗಾಗಬೇಕು ಎಂಬ ನೀತಿ ಬದಲಾವಣೆ ಮಾಡಿರುವ ಯುಕೆ (ಇಂಗ್ಲೆಂಡ್​) ಸರ್ಕಾರ ಅಕ್ಟೋಬರ್​ 11ರಿಂದ ಜಾರಿಗೆ ಬರುವಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೊಸ ನಿಯಮದ ಪ್ರಕಾರ ಕೊವಿಶೀಲ್ಡ್​ ಎರಡೂ ಡೋಸ್​ ಲಸಿಕೆ ಮತ್ತು ಯುಕೆ ಸರ್ಕಾರ ಅನುಮೋದನೆ ನೀಡಿರುವ ಯಾವುದೇ ಲಸಿಕೆ ಪಡೆದುಕೊಂಡ ಭಾರತದ ಪ್ರಯಾಣಿಕರು ಇಂಗ್ಲೆಂಡಿಗೆ ಆಗಮಿಸಿದ್ದಲ್ಲಿ ಅವರು ಕ್ವಾರಂಟೈನ್​​ಗೆ ಒಳಗಾಗಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.  ಈ ಸಂಬಂಧ ಭಾರತದಲ್ಲಿರುವ ಬ್ರಿಟಿಷ್​ ಹೈಕಮಿಷನರ್​  ಅಲೆಕ್ಸ್​ ಎಲ್ಲಿಸ್​ ಟ್ವೀಟರ್‌ನಲ್ಲಿ ಸ್ಪಷ್ಟಪಡಿಸಿದೆ.

ಇದನ್ನು ಓದಿ: ಎಲ್ಲಾ ದೇಶಗಳಿಗೂ ಡಬ್ಲ್ಯುಎಚ್‌ಒ ನಿಯಮಗಳೇ ಅನ್ವಯ-ಯಾರು ಮೀರುವಂತಿಲ್ಲ: ಸೌಮ್ಯ ಸ್ವಾಮಿನಾಥನ್

ವಿಡಿಯೋವೊಂದನ್ನು ಶೇರ್​ ಮಾಡಿರುವ ಅಲೆಕ್ಸ್​ ಎಲ್ಲಿಸ್​, ಭಾರತದ ಕೊವಿಶೀಲ್ಡ್​ ಲಸಿಕೆಯನ್ನು ಎರಡೂ ಡೋಸ್​ ಪಡೆದವರು ಅಥವಾ ಯುಕೆ ಅನುಮೋದಿತ (ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ, ಫಿಜರ್ ಬಯೋಟೆಕ್, ಮಾಡರ್ನಾ, ಜಾನ್ಸೆನ್) ಕೊವಿಡ್​-19 ಲಸಿಕೆ ಪಡೆದವರು ಭಾರತ ಆಗಮಿಸಿದಲ್ಲಿ ಕ್ವಾರಂಟೈನ್​​ಗೆ ಒಳಗಾಗುವುದು ಬೇಡ ಎಂದಿದ್ದಾರೆ.

ಈ ಹಿಂದೆ ಕೊವಿಶೀಲ್ಡ್​ ಲಸಿಕೆಗೆ ಮಾನ್ಯತೆ ನೀಡಲು ಹಿಂದೇಟು ಹಾಕಿತ್ತು. ಆದರೆ ಭಾರತ ತನ್ನು ನಿಲುವನ್ನು ಕಠಿಣವಾಗಿಸಿದ ಮೇಲೆ ಸೆಪ್ಟೆಂಬರ್​ 22ರಂದು ಲಸಿಕೆಗೆ ಅನುಮೋದನೆ ನೀಡಿತ್ತು. ಭಾರತ ನೀಡುತ್ತಿರುವ ಸರ್ಟಿಫಿಕೇಟ್​ ಬಗ್ಗೆ ನಮಗೆ ಆಕ್ಷೇಪವಿದೆ ಎಂದು ಹೇಳಿತ್ತು. ಅದರಲ್ಲಿ ಜನ್ಮದಿನಾಂಕದ ಉಲ್ಲೇಖವಿಲ್ಲ ಎಂದು ಹೇಳಿತ್ತು. ನಂತರ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಆವೃತ್ತಿಯ ಕೊವಿಡ್​-19 ಲಸಿಕೆಯನ್ನೂ ಭಾರತ ಬಿಡುಗಡೆ ಮಾಡಿತ್ತು. ಅಷ್ಟಾದರೂ ಯುಕೆ ಸರ್ಕಾರ ಭಾರತದ ಪ್ರಯಾಣಿಕರಿಗೆ 10 ದಿನಗಳ ಕಾಲ ಕ್ವಾರಂಟೈನ್​ ಕಡ್ಡಾಯಗೊಳಿಸಿತ್ತು.

ಭಾರತದಿಂದಲೂ ಇದೇ ನಿಯಮ ಜಾರಿ

ಇಂಗ್ಲೆಂಡ್ ಸರ್ಕಾರದ ಮಾರ್ಗಸೂಚಿಗೆ ಸಂಬಂಧಪಟ್ಟಂತೆ ಭಾರತ ಸರ್ಕಾರ ನಿರಂತರ ಮಾತುಕತೆ ನಡೆಸಿದಾಗ್ಯೂ ಕೂಡ ಯುಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯದೆ ಇದ್ದಾಗ ಭಾರತ ಕೂಡ ಇದೇ ನಿಯಮವನ್ನು ಜಾರಿಗೊಳಿಸಿತ್ತು. ಇಂಗ್ಲೆಂಡ್​​ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೂ 10 ದಿನಗಳ ಕಾಲ ಕ್ವಾರಂಟೈನ್​ ಕಡ್ಡಾಯ. ಭಾರತ ಪ್ರಯಾಣಕ್ಕೆ 72 ಗಂಟೆ ಮುಂಚಿತವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು. ಭಾರತಕ್ಕೆ ಬಂದ ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು. ಲಸಿಕೆ ಪಡೆದಿರಲಿ, ಪಡೆಯದೇ ಇರಲಿ ಪರೀಕ್ಷೆ ಮತ್ತು ಕ್ವಾರಂಟೈನ್ ಕಡ್ಡಾಯ ಎಂದು ಹೇಳಿತ್ತು.

Donate Janashakthi Media

Leave a Reply

Your email address will not be published. Required fields are marked *