ಬೆಂಗಳೂರು:ವಿಧಾನಸೌಧದ ಆವರಣದಲ್ಲಿ ರಾಜ್ಯಸಭಾ ಫಲಿತಾಂಶದ ವಿಜಯೋತ್ಸವ ಸಮಯದಲ್ಲಿ ʻಪಾಕಿಸ್ತಾನ್ ಜಿಂದಾಬಾದ್ʼ ಎಂದೇ ಕೂಗಲಾಗಿತ್ತು ಎಂಬುದನ್ನು ಬಿಂಬಿಸುವುದಕ್ಕಾಗಿ ಬಿಜೆಪಿಯ ಐಟಿ ಸೆಲ್ಲ ನಕಲಿ FSL ವರದಿಯನ್ನು ಹರಿ ಬಿಡುವ ಮೂಲಕ ವಿವಾದ ಸೃಷ್ಟಿಸಿದೆ.
ಬಿಜೆಪಿ ಕರ್ನಾಟಕ ತನ್ನ ಖಾತೆಗಳ ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವ್ಯಕ್ತಿ ಫಣೀಂದ್ರ ಬಿ. ಎನ್ ರವರು ಸಿದ್ದ ಪಡಿಸಿರುವ ವರದಿಯನ್ನು ಪೋಸ್ಟ್ ಮಾಡಲಾಗಿದೆ. ಖಾಸಗಿ ಸಂಸ್ಥೆ ಮಾಡಿಸಿರುವ ಪರೀಕ್ಷೆಯನ್ನು ಪೊಲೀಸ್ ಇಲಾಖೆ ಮಾಡಿಸಿರುವ ಅಧಿಕೃತ ಎಫ್ ಎಸ್ ಎಲ್ ವರದಿ ಎಂಬಂತೆ ಬಿಂಬಿಸಿ, ಅದರ ಪ್ರತಿಗಳನ್ನು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಅದನ್ನು ಮಾಧ್ಯಮಗಳಿಗೆ ನೀಡಿ ಇದು ಸರ್ಕಾರಿ FSL ವರದಿ ಎಂದು ದಾರಿ ತಪ್ಪಿಸುತ್ತಿದೆ. ಇದರ ಪೂರ್ವಾಪರ ಅರಿಯದೆ ಬಿಜೆಪಿಯ ಬಾಲಂಗೋಚಿ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಬಿತ್ತರಿಸುತ್ತಿವೆ.
ಇನ್ನೂ ಈ ಫಣೀಂದ್ರ ಬಿ.ಎನ್ ಯಾರು ಎಂಬುದನ್ನು ಬೆನ್ನುಹತ್ತಿಹೊರಟಾಗ ಸಿಕ್ಕ ಉತ್ತರ ಹುಬ್ಬೇರಿಸುವಂತಿದೆ. ಫಣೀಂದ್ರ ಬಿ.ಎನ್. ಆರ್ ಎಸ್ ಎಸ್ ಕಾರ್ಯಕರ್ತನಗಿದ್ದು. ಮುಸ್ಲಿಂ ದ್ವೇಷಿಯಾಗಿದ್ದಾನೆ. ಹಲವು ವರ್ಷಗಳಿಂದ ಕೋಮುಪ್ರಚೋದಕ ಪೋಸ್ಟ್ ಗಳ ಮೂಲಕ ವತಾವರಣ ಹದಗೆಡಿಸುವ ವ್ಯಕ್ತಿಯಗಿದ್ದಾನೆ.
ಸರ್ಕಾರದ ವರದಿ ಬಂದಿಲ್ಲ : ಸರ್ಕಾರದ FSL ವರದಿ ಬಂದಿಲ್ಲ, ಬಿಜೆಪಿಯವರು ಖಾಸಗಿ ವ್ಯಕ್ತಿಗಳಿಂದ ಮಾಡಿಸಿರುವ ವರದಿಯನ್ನು ಸ್ವಿಕರಿಸಲ್ಲ ಎಂದು ಗೃಹ ಸಚಿವ ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರಕಾರ ವಿವಾದಿತ ವಿಡಿಯೊದ ಎಫ್ಎಸ್ಎಲ್ ವಿಶ್ಲೇಷಣೆಗೆ ಕಳುಹಿಸಿಕೊಟ್ಟಿದ್ದು, ಅದರ ವರದಿ ಇನ್ನೂ ಬಂದಿಲ್ಲ. ಈಗ ಬಿಜೆಪಿ ಬಿಡುಗಡೆ ಮಾಡಿರುವ ಖಾಸಗಿ ವರದಿ ಅಧಿಕೃತವಲ್ಲ.ʻʻನಾವು ಖಾಸಗಿ ಸಂಸ್ಥೆ ವರದಿ ಗಣನೆಗೆ ತೆಗೆದುಕೊಳ್ಳಲ್ಲ. ಸರ್ಕಾರದ ಎಫ್ಎಸ್ಎಲ್, ಗೃಹ ಇಲಾಖೆಯ ಫಾರೆನ್ಸಿಕ್ ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಪಾಸಿಟಿವ್ ಆಗಿ, ಕೂಗಿರೋದು ದೃಢ ಆದಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆʼʼ ಎಂದು ಜಿ. ಪರಮೇಶ್ವರ್ ಹೇಳಿದ್ದಾರೆ.