ಇನ್ಮುಂದೆ KPSC ವ್ಯಾಪ್ತಿಯ ಪರೀಕ್ಷೆಗಳನ್ನು ನೀಲಿ ಪೆನ್ನು ಬಳಸಿ ಬರೆಯಬೇಕು – KPSC ಆದೇಶ

ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ KPSC ಮಹತ್ವದ ಆದೇಶ ಒಂದನ್ನ ಹೊರಡಿಸಿದೆ.

ಇನ್ಮುಂದೆ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ ನನ್ನೆ ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಎಂದು ಸೂಚನೆ ನೀಡಿದೆ.

16 ರಿಂದ ನಡೆಯುವ ಎಲ್ಲಾ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ನೀಲಿ ಬಣ್ಣದ ಪೆನ್ ಕಡ್ಡಾಯ ಆಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈವರೆಗೆ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್‌ನಿಂದ ಪರೀಕ್ಷೆ ಬರೆಯಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗುತ್ತಿತ್ತು. ಆದರೆ ಈಗ ಸೂಚನೆಯಲ್ಲಿ ಮಾರ್ಪಾಡು ಮಾಡಿ ಕಪ್ಪು ಬಣ್ಣದ ಪೆನ್ ಬಳಸದಿರಲು ಸೂಚನೆ ನೀಡಿದೆ.

ಫೆಬ್ರವರಿ 16 ರಿಂದ ಕೆಪಿಎಸ್‌ಸಿ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಪೆನ್ ಮಾತ್ರ ಬಳಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *