ಜೈಪುರ್: ರಾಜಸ್ಥಾನ ರಾಜ್ಯದ ಜೋಧಪುರದಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷಗಳು ನಡೆದಿವೆ. ಈದ್ ಹಬ್ಬದ ಪ್ರಯುಕ್ತ ಜೋಲಾರಿ ಗೇಟ್ ನಲ್ಲಿ ನೆನ್ನೆ(ಮೇ 02) ರಾತ್ರಿ ಹಬ್ಬದ ಮುಂಚಿತವೇ ಬಾವುಟ ಹಾರಿಸಿದ್ದಕ್ಕಾಗಿ ಹಿಂಸಾಚಾರಕ್ಕೆ ಕಾರಣವಾಗಿದ್ದು, ಇಂದು ಎರಡು ಸಮುದಾಯಗಳು ಸಂಘರ್ಷಕ್ಕೆ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ನಾಲ್ವರು ಪೊಲೀಸರು ಸೇರಿದಂತೆ ಕನಿಷ್ಠ 16 ಜನರು ಗಾಯಗೊಂಡಿದ್ದಾರೆ. ಘಟನೆಯ ನಂತರ ಕೂಡಲೇ ವಂದಂತಿ ಹರಡುವುದನ್ನು ನಿಯಂತ್ರಿಸಲು ಇಂಟರ್ನೆಟ್ ಕಡಿತಗೊಳಿಸಲಾಗಿತ್ತು ಹಾಗೂ ನಮಾಜ್ ಮಾಡಲು ಪೊಲೀಸರು ರಕ್ಷಣೆ ನೀಡಿದರು.
ರಂಜಾನ್ ಆಚರಣೆ ಸಂದರ್ಭದಲ್ಲಿಯೇ ಮೂರು ದಿನದಿಂದ ಪರಶುರಾಮ ಜಯಂತಿ ಆಚರಣೆಯೂ ಕೈಗೊಳ್ಳಲಾಗಿದೆ. ಅದೇ ಸಮಯದಲ್ಲಿ ಎರಡು ಸಮುದಾಯಗಳು ತಮ್ಮ ಧರ್ಮ ಸಂಕೇತದ ಬಾವುಟವನ್ನು ಹಾರಿಸಿದ್ದ ಕಾರಣ ಗಲಭೆಗೆ ಕಾರಣವಾಯಿತೆಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಹೇಳಿದ್ದಾರೆ.
ಭದ್ರತೆ ಕಾಪಡಾಲು ನಿಯೋಜಿನೆಗೊಂಡಿದ್ದ ಪೊಲೀಸರು ಗಲಭೆಯನ್ನು ನಿಯಂತ್ರಿಸಲು ಅಶ್ರುವಾಯು ಶೆಲ್ ಹಾರಿಸಿದರು ಹಾಗು ಗುಂಪು ಚದುರಿಸಲು ಲಾಠಿ ಬೀಸಿದರು. ಸ್ಥಳೀಯ ಪೋಲೀಸ್ ಪಡೆಗಳ ಮೇಲು ದಾಳಿ ನಡೆದಿದೆ. ಗಲಭೆಯಲ್ಲಿ ನಾಲ್ಕು ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಾಂತಿ ಕಾಪಾಡಿಕೊಳ್ಳುವಂತೆ ಜೋಧ್ ಪುರ್ ಪ್ರಜೆಗಳಲ್ಲಿ ಮನವಿ ಮಾಡಿದ್ದು, ಜೋಧಪುರ ಮಾರ್ವರ್ ಸಂಸ್ಕೃತಿಯನ್ನು ಎಲ್ಲರು ಗೌರವಿಸುವಾಗ ಸಹೋದರತ್ವ ಮನಸ್ಥಿತಿ ಕಾಪಾಡಿಕೊಳ್ಳಿ. ನಾನು ಎಲ್ಲ ಪಕ್ಷಗಳಿಗೆ ಶಾಂತಿಯನ್ನು ಕಾಪಾಡಲು ಹಾಗು ಕಾನೂನು, ಸುವ್ಯವಸ್ಥೆ ಪುನಃ ಸ್ಥಾಪಿಸಲು ಮನವಿ ಮಾಡಿಕೊಳ್ಳತ್ತೇನೆಂದು ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದ ನಾನಾ ಕಡೆಗಳಲ್ಲಿ ಕೋಮು ಹಿಂಸಾಚಾರ ಮತ್ತು ಉದ್ವಿಗ್ನತೆಯ ಉಲ್ಬಣಗೊಳ್ಳುತ್ತಿವೆ. ಧಾರ್ಮಿಕ ಮತ್ತು ರಾಜಕೀಯ ನಾಯಕರ ದ್ವೇಷ ತುಂಬಿದ ಭಾಷಣಗಳಿಂದಲೂ ಪ್ರಚೋದನೆ ನೀಡಲಾಗುತ್ತಿವೆ.
ದೆಹಲಿ, ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ದಂತಹ ಪ್ರದೇಶಗಳಲ್ಲಿ ರಾಮನವಮಿ, ಹನುಮ ಜಯಂತಿ ಹಬ್ಬಗಳ ಆಚರಣೆ ವೇಳೆಯಲ್ಲಿ ಸರಣಿಯಂತೆ ಘರ್ಷಣೆಗಳು ಸಂಭವಿಸುತ್ತಿವೆ.