ಟಿವಿ, ಸಂಪಾದಕೀಯ ಮೂಲಕ ಇಡೀ ವ್ಯವಸ್ಥೆ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ | ಸಂದರ್ಶನದಲ್ಲಿ ಮೋದಿ

ನವದೆಹಲಿ: ಸಂಪಾದಕೀಯಗಳು, ಟಿವಿ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ “ನಮ್ಮ” ಮೇಲೆ ಆರೋಪಗಳನ್ನು ಹೊರಿಸಲು ಇಡೀ ವ್ಯವಸ್ಥೆಯು “ಲಭ್ಯವಿರುವ ಸ್ವಾತಂತ್ರ್ಯವನ್ನು ಬಳಸಲಾಗುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಇಂಗ್ಲೇಂಡ್ ಮೂಲದ ಫೈನಾನ್ಷಿಯಲ್ ಟೈಮ್ಸ್‌ಗೆ ರಾಷ್ಟ್ರ ರಾಜಧಾನಿಯ ತಮ್ಮ ನಿವಾಸದಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರಿ ಅಪರೂಪದ ಸಂದರ್ಶನದ ಜೊತೆಗೆ ಹೆಚ್ಚುವರಿಯಾಗಿ ನೀಡಿರುವ ಲಿಖಿತ ಪ್ರತಿಕ್ರಿಯೆಗಳಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಮತ್ತು ಕೆನಡಾದಲ್ಲಿ ನಡೆದಿದೆ ಎನ್ನಲಾದ ಹತ್ಯೆಯ ಸಂಚುಗಳಲ್ಲಿ ಭಾರತದ ಪಾತ್ರದ ಬಗ್ಗೆ ಆರೋಪಗಳನ್ನು ಪ್ರಸ್ತಾಪಿಸಿ ಮಾತನಾಡಿದ್ದಾರೆ. ಇಷ್ಟೆ ಅಲ್ಲದೆ, ಸಾಂವಿಧಾನದ ತಿದ್ದುಪಡಿಗಳು, ಭಾರತದಲ್ಲಿನ ಮುಸ್ಲಿಂ ಅಲ್ಪಸಂಖ್ಯಾತರು, ಚೀನಾ ಮತ್ತು ಮುಂಬರುವ ಲೋಕಸಭೆ ಚುನಾವಣೆಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ ಮುಂದುವರೆದ ಪ್ರತಿಭಟನೆ | ಕುಸ್ತಿಪಟು ಭಜರಂಗ್ ಪುನಿಯಾರಿಂದ ಪದ್ಮಶ್ರೀ ಪ್ರಶಸ್ತಿ ವಾಪಾಸ್

ಲೋಕಸಭೆಯಲ್ಲಿ ಭದ್ರತಾ ಉಲ್ಲಂಘನೆ ಮತ್ತು ಸದನದಿಂದ 140ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿದ ಕುರಿತ ಸಂಸತ್ತಿನಲ್ಲಿ ನಡೆಯುತ್ತಿದ್ದ ಕೋಲಾಹಲದ ನಡುವೆ ಈ ಸಂದರ್ಶನ ಹೊರಬಂದಿದೆ.

ತನ್ನ ಟೀಕಾಕಾರರ ಮೇಲೆ ತನ್ನ ಸರ್ಕಾರವು ದಬ್ಬಾಳಿಕೆ ನಡೆಸುತ್ತಿದೆ ಎಂದು ಹೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, “ನಮ್ಮ ವಿಮರ್ಶಕರು ತಮ್ಮ ಅಭಿಪ್ರಾಯಗಳನ್ನು ಮತ್ತು ಅವುಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಅರ್ಹರಾಗಿದ್ದಾರೆ. ಆದಾಗ್ಯೂ, ಅದು ಸಾಮಾನ್ಯವಾಗಿ ಟೀಕೆಗಳಾಗಿ ಕಂಡುಬರುತ್ತದೆಯಾದರೂ, ಅಂತಹ ಆರೋಪಗಳಲ್ಲಿ ಮೂಲಭೂತ ಸಮಸ್ಯೆ ಇದೆ” ಎಂದು ಹೇಳಿದ್ದಾರೆ.

ಸಂವಿಧಾನದ ಬದಲಾವಣೆಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಮೋದಿ, “ಅದರ ಬಗ್ಗೆ ಮಾತನಾಡುವುದು ಅರ್ಥಹೀನ. ಸಂವಿಧಾನವನ್ನು ತಿದ್ದುಪಡಿ ಮಾಡದೆ ಮತ್ತು ಸಾರ್ವಜನಿಕ ಸಹಭಾಗಿತ್ವದ ಮೂಲಕ ನಮ್ಮ ಸರ್ಕಾರವು ಅತ್ಯಂತ ಪರಿವರ್ತನೆಯ ಕ್ರಮಗಳನ್ನು ಕೈಗೊಂಡಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನ್ಯೂಸ್‌ ಕ್ಲಿಕ್ ಪ್ರಕರಣ | ತನಿಖೆಗೆ ಹೆಚ್ಚಿನ ಸಮಯ ಕೋರಿದ್ದ ದೆಹಲಿ ಪೊಲೀಸ್‌ ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

ಖಲಿಸ್ತಾನ್ ನಾಯಕ ಗುರುಪತ್‌ವಂತ್ ಸಿಂಗ್ ಪನ್ನು ಮತ್ತು ಮತ್ತೊಬ್ಬ ಖಲಿಸ್ತಾನ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯ ಸಂಚಿನಲ್ಲಿ ಭಾರತೀಯ ಸರ್ಕಾರಿ ಏಜೆಂಟ್ ಕೈವಾಡ ಇರುವ ಆರೋಪದ ಮೇಲೆ ಭಾರತವು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ “ಪ್ರಬುದ್ಧ” ಸಂಬಂಧವನ್ನು ಹಂಚಿಕೊಳ್ಳುತ್ತವೆ, ಅದರಲ್ಲಿ “ಭದ್ರತೆ ಮತ್ತು ಭಯೋತ್ಪಾದನಾ ನಿಗ್ರಹ ಸಹಕಾರ” ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ. “ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳೊಂದಿಗೆ ಕೆಲವು ಘಟನೆಗಳನ್ನು ಜೋಡಿಸುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಭಾರತಕ್ಕೆ ವಿದೇಶಿ ವ್ಯವಹಾರಗಳಲ್ಲಿ ಅಗ್ರಗಣ್ಯ ಮಾರ್ಗದರ್ಶಿ ತತ್ವ ಅದರ ರಾಷ್ಟ್ರೀಯ ಹಿತಾಸಕ್ತಿಯಾಗಿದೆ” ಎಂದು ಅವರು ಪುನರುಚ್ಚರಿಸಿದ್ದಾರೆ.

ಇತ್ತೀಚೆಗೆ ಹಿಂದಿ ದೈನಿಕ ದೈನಿಕ್ ಜಾಗರಣಕ್ಕೆ ಪ್ರಧಾನಿ ಮೋದಿ ಸಂದರ್ಶನ ನೀಡಿದ್ದರು. ಅದಕ್ಕೂ ಹಿಂದೆ ಜೂನ್‌ನಲ್ಲಿ ಅಮೆರಿಕ ಮೂಲದ ವಾಲ್ ಸ್ಟ್ರೀಟ್ ಜರ್ನಲ್‌ಗೆ ಸಂದರ್ಶನ ನೀಡಿದ್ದರು. “ಪ್ರಧಾನಿ ಮೋದಿ ಬೇಕಾದಷ್ಟು ಭಾಷಣಗಳನ್ನು ನೀಡುತ್ತಾರೆ ವಿನಃ, ಸುದ್ದಿಗೋಷ್ಠಿಗಳು ಮತ್ತು ಸಂದರ್ಶನಗಳನ್ನು ನೀಡಲು ಭಯಪಡುತ್ತಾರೆ” ಎಂದು ಅವರ ಟೀಕಾಕಾರರು ಪದೇ ಪದೇ ಆರೋಪಿಸುತ್ತಿದ್ದಾರೆ.

ವಿಡಿಯೊ ನೋಡಿ: ಅಂಗನವಾಡಿ ನೌಕರರಿಗೆ ಇಡಿಗಂಟು : ಹೈಕೋರ್ಟ್ ನಿರ್ದೇಶನ ಸರಿ ಇಲ್ಲ – ಎಸ್ ವರಲಕ್ಷ್ಮೀ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *