- 25 ವರ್ಷ ಪೂರೈಸಿದ ಬಿಎಂಟಿಸಿ
- ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್
- ಎಲ್ಲ ರೀತಿಯ ಬಿಎಂಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ
ಬೆಂಗಳೂರು : ಬಿಎಂಟಿಸಿ 25 ವರ್ಷ ಪೂರೈಸಿದ ಹಾಗೂ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಬಿಎಂಟಿಸಿ ಬಸ್ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಪ್ರಯಾಣಿಸಲು ಸರ್ಕಾರ ಅವಕಾಶ ನೀಡಿದೆ. ಆಗಸ್ಟ್ 15 ರಂದು ಒಂದು ದಿನ ಸಂಸ್ಥೆಯ ಸಾಮಾನ್ಯ ಸಾರಿಗೆಗಳಲ್ಲಿ ಪಯಾಣಿಸುವ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಉಚಿತ ಪ್ರಯಾಣಕ್ಕೆ ಅನುಮತಿ ನೀಡುವಂತೆ ಬಿಎಂಟಿಸಿ ಎಂಡಿ ಸರ್ಕಾರದ ಅನುಮೋದನೆ ಕೋರಿದ್ದರು. ಸರ್ಕಾರ ಇದಕ್ಕೆ ಅನುಮೋದನೆ ನೀಡಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಂಟಿಸಿ ನಿಗಮ ಅಧ್ಯಕ್ಷ ನಂದೀಶ್ ರೆಡ್ಡಿ, ಆ.15ರಂದು ಎಸಿ ಬಸ್ ಸಹಿತ ಎಲ್ಲ ರೀತಿಯ ಬಿಎಂಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ. ಆ.14ರಂದು ಬೆಳಗ್ಗೆ 10.30ರಿಂದ ಹೊಸ 300 ಎಲೆಕ್ಟ್ರಿಕ್ ಬಸ್ ಕಾರ್ಯಾರಂಭ ಮಾಡಲಿವೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಎಲೆಕ್ಟ್ರಿಕ್ ಬಸ್ ಗಳು ವಾಯು ಮಾಲಿನ್ಯ ವಿಚಾರದಲ್ಲಿ ಸದಾ ಉಪಯುಕ್ತವಾಗಿವೆ. ಆ.16ರಂದು ಅಪಘಾತ ಆಗದೇ ವಾಹನ ಚಾಲನೆ ಮಾಡಿದ ಚಾಲಕ ಸಿಬ್ಬಂದಿಗೆ ಪದಕ ಸಮರ್ಪಣೆ ಮಾಡಲಾಗುತ್ತದೆ. ಹಾಗೆ, 45 ವರ್ಷಕ್ಕೂ ಮೇಲ್ಪಟ್ಟ ನಮ್ಮ ಕಾರ್ಮಿಕರಿಗೆ ಜಯದೇವ ಆಸ್ಪತ್ರೆ ಯಲ್ಲಿ ಉಚಿತ ಆರೋಗ್ಯ ತಪಾಸಣೆ ಆಯೋಜನೆ ಮಾಡಲಾಗಿದೆ. ಇದಕ್ಕೆ ಪ್ರತಿ ನಿತ್ಯ ಸ್ವಲ್ಪ ಜನರನ್ನ ಹಂತ ಹಂತವಾಗಿ ಕಳುಹಿಸಿ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಂದು ದಿನದ ಉಚಿತ ಪ್ರಯಾಣ ಘೋಷಿಸಿದ್ದರಿಂದ ಬಿಎಂಟಿಸಿಗೆ 3 ಕೋಟಿ ನಷ್ಟ ಆಗಲಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.