ಬಿಪಿಎಲ್ ಕುಟುಂಬಗಳಿಗೆ ಉಚಿತ ಎಂಆರ್​ಐ ಸ್ಕ್ಯಾನಿಂಗ್​: ಸಚಿವ ಸಂಪುಟ ಸಭೆ

ಬೆಂಗಳೂರು: ಬಿಪಿಎಲ್ ಕುಟುಂಬಗಳು ಇನ್ಮುಂದೆ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಮತ್ತು ಎಂಆರ್​ಐ ಸ್ಕ್ಯಾನಿಂಗ್​ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದೆಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾದೆ. ಕುಟುಂಬ

ಬಡವರು ಈ ಸೇವೆಗೆ ದುಬಾರಿ ವೆಚ್ಚ ಭರಿಸಬೇಕಿತ್ತು. ಹೀಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ ಸಿಟಿ ಮತ್ತು ಎಂಆರ್​ಐ ಸ್ಕ್ಯಾನ್​ಗಳನ್ನು ಉಚಿತವಾಗಿಸಲು ನಿರ್ಣಯಿಸಲಾಗಿದೆ. ಕುಟುಂಬ

ರೋಗಿಗಳು ಅನಗತ್ಯವಾಗಿ ಸ್ಕ್ಯಾನ್​ಗೆ ಒಳಪಡುವುದನ್ನು ತಪ್ಪಿಸಲು, ಯೋಜನೆ ನಿಜವಾದ ಫಲಾನುಭವಿಯನ್ನು ತಲುಪುವುದನ್ನು ಖಚಿತಪಡಿಸಲು ಪಿಹೆಚ್​ಹೆಚ್ ಫಲಾನುಭವಿಗಳಿಗೆ ಉಚಿತವಾಗಿ ಹಾಗೂ ಇತರರಿಗೆ ಶೇ.70 ವಿಧಿಸಲು ನಿರ್ಣಯ ಕೈಗೊಳ್ಳಲಾಗಿದೆ. ಕುಟುಂಬ

ಇದನ್ನೂ ಓದಿ: ಹಸಿರು ಬಣ್ಣಕ್ಕೆ ತಿರುಗುತ್ತಿದ್ದಾಳೆ ತುಂಗಭದ್ರೆ: ವಿಷಕಾರಿಯಾಗುತ್ತಿರುವ ನೀರಿನ ಬಗ್ಗೆ ಜನರಲ್ಲಿ ಆತಂಕ

ಬಿಪಿಎಲ್ ಕಾರ್ಡದಾರರಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಅಂಗಾಂಗ ಕಸಿ (ಜೀವಸಾರ್ಥಕಥೆ) ಯೋಜನೆಯಲ್ಲಿ ಶ್ವಾಸಕೋಶ, ಹೃದಯ ಮತ್ತು ಶ್ವಾಸಕೋಶ ಮತ್ತು ಮೂಳೆ ಮಜ್ಜೆಯ ಕಸಿಯನ್ನು ಸೇರಿಸಿ ಅಸ್ತಿತ್ವದಲ್ಲಿರುವ ಅಂಗಾಂಗ ಕಸಿ ಯೋಜನೆ ವಿಸ್ತರಿಸುವುದು. ಆ ಮೂಲಕ ಕಸಿ ವಿಧಾನದ ದರಗಳಂತೆ ಇಮ್ಯುನೋ ಸಪ್ರೆಶನ್ ಔಷಧ ಕೊಡಲು ಹಾಗೂ ಆಟೋಲೋಗಸ್ ಮೂಳೆ ಮಜ್ಜೆಯ ಕಸಿ ಕೈಗೊಳ್ಳಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಸಂಪುಟ ಸಭೆ ಮುಖ್ಯಾಂಶ

  • ಕಣ್ಣಿನ ಉಚಿತ ತಪಾಸಣೆ, ಕನ್ನಡಕ ವಿತರಿಸುವ ಆಶಾಕಿರಣ ಯೋಜನೆ ಎಲ್ಲ ಜಿಲ್ಲೆಗಳಿಗೆ ವಿಸ್ತರಣೆ
  • 10 ಮಹಾನಗರ ಪಾಲಿಕೆ, ಆಯ್ದ 24 ನಗರಗಳಲ್ಲಿ 34 ಅತ್ಯಾಧುನಿಕ ವಿದ್ಯುತ್/ಅನಿಲ ಚಿತಾಗಾರ ನಿರ್ಮಾಣ
  • 10 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ 211 ಕೋಟಿ ರೂ.ಗಳ ಅಂದಾಜಿಗೆ ಒಪ್ಪಿಗೆ
  • ಅಬಕಾರಿ ಇಲಾಖೆ ಅಧಿಕಾರಿ/ನೌಕರರ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ನಡೆಸಲು ನಿಯಮ ರಚಿಸಲು ಸಮ್ಮತಿ.

ಜಾತಿ ಗಣತಿ ವರದಿ ಮುಟ್ಟಲು ಸರ್ಕಾರಕ್ಕೆ ಹಿಂಜರಿಕೆಯಿಲ್ಲ

ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿ (ಜಾತಿ ಜನಗಣತಿ)ಯು ಮುಚ್ಚಿದ ಲಕೋಟೆಯಲ್ಲಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದನ್ನು ತೆರೆದು ದತ್ತಾಂಶಗಳನ್ನು ರ್ಚಚಿಸಲು ಸರ್ಕಾರ ನಿರ್ಧರಿಸಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ಈ ವಿಷಯವಿತ್ತು. ಆದರೆ ಸಾಮಾಜಿಕ, ಆಡಳಿತಾತ್ಮಕ ಕಾರಣಗಳಿಗಾಗಿ ಮುಂದೂಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಸಮಜಾಯಿಷಿ ನೀಡಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಮುಟ್ಟಲು ಸರ್ಕಾರಕ್ಕೆ ಯಾವುದೇ ಹಿಂಜರಿಕೆಯಿಲ್ಲ.

ಈ ಬಗ್ಗೆ ಬಹಿರಂಗವಾಗಿ ನಡೆಯುತ್ತಿರುವ ಚರ್ಚೆ, ರಾಜಕೀಯ ದಾಳವಾಗಿ ಬಳಕೆ, ಆಂತರಿಕ ಅಪಸ್ವರದಿಂದ ಹಿಂದೇಟು ಹಾಕಲಾಗಿದೆ ಎಂಬಿತ್ಯಾದಿಗಳೆಲ್ಲ ಊಹಾಪೋಹಗಳೆಂದು ಅಲ್ಲಗಳೆದರು. ಮೈಸೂರು ಮಹಾರಾಜರ ಉತ್ತರಾಧಿಕಾರಿ ಮೇಲೆ ನ್ಯಾಯಾಂಗ ನಿಂದನೆ ದಾವೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ಸುಪ್ರೀಂಕೋರ್ಟ್​ನ 2001ರ ಆದೇಶ ಉಲ್ಲಂಘಿಸಿ ಬೆಂಗಳೂರು ಅರಮನೆ ಮೈದಾನದಲ್ಲಿ ಎರಡು ಲಕ್ಷ ಚದರ ಮೀಟರ್ ಕಾಯಂ ಕಟ್ಟಡಗಳನ್ನು ಅನಧಿಕೃತವಾಗಿ ನಿರ್ವಿುಸಲಾಗಿದ್ದು, ಈ ಸಂಬಂಧ ಮೈಸೂರು ಮಹಾರಾಜರ ಉತ್ತರಾಧಿಕಾರಿ ಮೇಲೆ ನ್ಯಾಯಾಂಗ ನಿಂದನೆ ದಾವೆ ಹೂಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಅಲ್ಲದೆ, ಅನಧಿಕೃತವಾಗಿ ನಿರ್ವಿುಸಿದ ಕಟ್ಟಡಗಳನ್ನು 15 ದಿನಗಳೊಳಗೆ ತೆರವುಗೊಳಿಸಲು ತಿಳಿಸಿ, 9-1-2025ರಂದು ಸರ್ಕಾರದಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಇಂತಹ ಸ್ಥಳದಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ನೀಡದೇ ಇರಲು ಸಂಪುಟ ಸಭೆ ಅಸ್ತು ಎಂದಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಇದನ್ನೂ ನೋಡಿ: ಕಲಬುರಗಿ | ಬಹುತ್ವ ಸಂಸ್ಕತಿ ಭಾರತೋತ್ಸವ-2025 Janashakthi Media

Donate Janashakthi Media

Leave a Reply

Your email address will not be published. Required fields are marked *