ಕೊಪ್ಪಳ: ಗವಿಸಿದ್ಧೇಶ್ವರ ಮಠದ ವತಿಯಿಂದಲೇ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ, ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸ್ಥಳೀಯ ವೈದ್ಯಕೀಯ ಸಿಬ್ಬಂದಿ ಸಹಯೋಗದೊಂದಿಗೆ ಔಷಧಿ ಹಾಗೂ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಗಂಗಾವತಿ | ರಾಸಾಯನಿಕ ಬಳಕೆ : ತುಂಗಭದ್ರಾ ಸೇರಿದಂತೆ ದೇಶದ 80 ನದಿಗಳು ಕಲುಷಿತ ಬಸವರಾಜ ವೀರಾಪುರ ಕಳವಳ
ಜ. 1ರಿಂದ 18ರ ತನಕ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 12ರ ತನಕ ಜಾರಿಯಲ್ಲಿರುತ್ತದೆ. ವಿಶೇಷವಾಗಿ ಜಾತ್ರೆಯ ಆವರಣ, ಪ್ರಸಾದ ನಿಲಯ, ಪೊಲೀಸ್ ಚೌಕಿ ಹತ್ತಿರ 24 ತಾಸು ತುರ್ತು ವೈದ್ಯಕೀಯ ಚಿಕಿತ್ಸೆ ಇರುತ್ತದೆ. ರಾತ್ರಿ 12 ಗಂಟೆಯ ನಂತರ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ. ಕೆ.ಎಸ್. ಆಸ್ಪತ್ರೆ, ಜಿಲ್ಲಾಸ್ಪತ್ರೆ ಮತ್ತು ಆಂಬುಲೆನ್ಸ್ ಸೇವೆ ವ್ಯವಸ್ಥೆ ಇರುತ್ತದೆ.
ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯ ಚಿಕಿತ್ಸಕರು, ಆಯುರ್ವೇದ ಮಹಾವಿದ್ಯಾಲಯದ 32 ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು 100, ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಪರಿಣಿತ 10 ವೈದ್ಯರು, ಮೂರು ಅಂಬುಲೆನ್ಸ್ ಇರುತ್ತದೆ. ಆಂಬುಲೆನ್ಸ್ ವವಸ್ಥೆಗಾಗಿ 9632002808, 9741624504, 8747926455 ಅಥವಾ 8088939400 ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಡಾ. ಗುರುರಾಜ್ (9480193373), ಡಾ ಎಂ. ಸೂರ್ಯನಾರಾಯಣ (9845631442), ಡಾ. ಎಸ್.ಎಂ. ಸಾಲಿಮಠ (9845010950), ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ (08539 -221989) ಸಂಪರ್ಕಿಸುವಂತೆ ಗವಿಮಠದ ಪ್ರಕಟಣೆ ತಿಳಿಸಿದೆ.
ಇದನ್ನೂ ನೋಡಿ : ದೇವದಾಸಿ, ಒಂಟಿ ಮಹಿಳೆ, ಮಸಣ ಕಾರ್ಮಿಕರಿಗೆ 6000 ರೂ ಮಾಸಿಕ ಪಿಂಚಣಿ ನೀಡಿ Janashakthi Media
