ಬೆಂಗಳೂರು: ಕುಮುದಾ ರವರು ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಮೊ.ಸಂ 437/2025 ಕಲಂ 318(4), 351(2), 352 ಬಿ.ಎನ್.ಎಸ್-2023 ರೀತಿಯ ಪ್ರಕರಣ ದಾಖಲಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವಿದ್ಯಾರಣ್ಯಪುರ ಪೊಲೀಸರು ತಿಳಿಸಿದ್ದಾರೆ. ತರಬೇತಿ
ಸದರಿ ಕೇಸಿನಲ್ಲಿ ಆರೋಪಿತೆಯಾದ ಸುನದಾ ಮಾಲಾ ರವರು ದೇವಾಂಶ್ ಎಂಬ ಬೋಟಿಕ್ ಡಿಸೈನ್ ತರಬೇತಿ ಸಂಸ್ಥೆ ನಡೆಸುತ್ತಿದ್ದಾರೆ. ಕಸೂತಿ ಡಿಸೈನ್, ಕಟಿಂಗ್ ಸೇರಿದಂತೆ ವಿವಿಧ ರೀತಿಯ ತರಬೇತಿ ನೀಡುವುದಾಗಿ ಹೇಳಿ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಗುಣಮಟ್ಟದ ತರಬೇತಿಯನ್ನು ನೀಡಿಲ್ಲ, ನಾರ್ಮಲ್ ಕಟಿಂಗ್ ಕ್ಲಾಸ್ ಹೇಳಿ ನಿಮ್ಮ ಅವಧಿ ಮುಗಿದಿದೆ ಎಂದು ಮೋಸ ಮಾಡಿದ್ದಾರೆ. ಮತ್ತು ಹಣವನ್ನು ಸಹ ವಾಪಸ್ ಕೋಡದೇ ಮೋಸ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಕಟಿಂಗ್ ಕ್ಲಸ್ ಇಷ್ಟ ಎಂಬುದನ್ನು ಬಳಸಿಕೊಂಡು, ಸರಿಯಾಗಿ ತರಬೇತಿ ನೀಡದೆ ಮೋಸ ಮಾಡುವುದು ಸರಿಯಲ್ಲ ಎಂದು ಪ್ರಸ್ನಿಸಿದ್ದಕ್ಕೆ , ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಕುಮುದಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನೂರಾರು ಮಹಿಳೆಯರನ್ನು ಸಾಕ್ಷಿದಾರರಾಗಿ ಪರಿಗಣಿಸಲಾಗಿದ್ದು, ಅವರಿಗೆ ಸಹ ಸುನದಾ ಮಾಲಾ ರವರು ಮೋಸ ಮಾಡಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನವದೆಹಲಿ | ಮುಖ್ಯ ಮಾಹಿತಿ ಆಯುಕ್ತರಾಗಿ ರಾಜ್ಕುಮಾರ್ ಗೋಯಲ್ ಪ್ರಮಾಣ ಸ್ವೀಕಾರ
ಸದರಿ ಪ್ರಕರಣದ ತನಿಖೆ ಸಲುವಾಗಿ ಈ ಕೆಳಕಂಡ ದಾಖಲಾತಿಗಳೊಂದಿಗೆ ದೂರು ನೀಡಬಹುದು ಎಂದು ಪೊಲೀಸರು ಹೇಳಿದ್ದಾರೆ.
1] ನೀವು ಬೋಟಿಕ್ ಡಿಸೈನ್ ತರಬೇತಿಗೆ ಹಾಜರಾದ ದಾಖಲಾತಿಯ ಮತ್ತು ಪ್ರವೇಶ ಪತ್ರದ ದೃಡಿಕೃತ
2] ನೀವು ಹಣ ಪಾವತಿ ಮಾಡಿರುವ ಸಂಬಂಧದ ಬ್ಯಾಂಕಿನ ಸ್ಟೇಟ್ ಮೆಂಟ್ ಅಫ್ ಅಕೌಂಟ್ ಪ್ರತಿ
3] ದಾಖಲಾದ ಸಂದರ್ಭದಲ್ಲಿ ನೀಡಿದ ಷರತ್ತು ಮತ್ತು ನಿಭಂದನೆಗಳ ದಾಖಲಾತಿಗೆ ಸಹಿ ಮಾಡಿದ್ದಲ್ಲಿ ಸಂಬಂಧಿಸಿದ ದಾಖಲಾತಿಯ ದೃಡಿಕೃತ ಪ್ರತಿ
ಈ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಾಗಿ ತನಿಖೆಗೆ ಸಹಕರಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: ’ಕಸ ನಿರ್ವಹಣೆ–ಜನರಿಗೂ ಇದೆ ಹೊಣೆ’ Janashakthi Media
