ಬಳ್ಳಾರಿ| 50 ಕೋಟಿಗೂ‌ ಹೆಚ್ಚು ಹಣ ಪಡೆದು ವಂಚನೆ ಆರೋಪಿ ಪರಾರಿ

ಬಳ್ಳಾರಿ: ಅಮಾಯಕ ಜನರಿಂದ ಕೋಟ್ಯಂತರ ರೂ ಲೂಟಿ ಮಾಡಿ ಆರೋಪಿ ಪರಾರಿ ಆಗಿರುವಂತಹ ಘಟನೆ ನಗರದಲ್ಲಿ ನಡೆದಿದೆ. ವಿಶ್ವನಾಥ್​​ ಎಂಬಾತನಿಂದ ಜನರಿಗೆ ಮೋಸ ಮಾಡಲಾಗಿದೆ. ಕಡಿಮೆ ಹಣ ಕೊಟ್ಟವರಿಗೆ ಕಡಿಮೆ ಬಡ್ಡಿ ಮತ್ತು ಹೆಚ್ಚು ಹಣ ಕೊಟ್ಟವರಿಗೆ ಹೆಚ್ಚು ಬಡ್ಡಿ ಎಂದು ನಂಬಿಸಿ ಮೋಸ ಮಾಡಲಾಗಿದೆ. ಬಳ್ಳಾರಿ

ಅಂದಾಜು 50 ಕೋಟಿಗೂ‌ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಆರೋಪ‌ ಕೇಳಿಬಂದಿದೆ. ಸದ್ಯ ಬ್ರೂಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಜನರು ಒತ್ತಾಯಿಸಿದ್ದಾರೆ. ಬಳ್ಳಾರಿ

ಹೊಸ ಹೊಸ ಸ್ಕೀಂಗಳ ಮೂಲಕ ಜನರಿಗೆ ಆಮಿಷ

ವಾಸವಿ ಸ್ವಗೃಹ ಹೋಮ್ ನೀಡ್ಸ್ ಆಯಂಡ್​ ಕನ್ಸಲ್ಟನ್ಸ್​ ಹೆಸರಲ್ಲಿ ವಿಶ್ವನಾಥ್​ ಜನರ ಬಳಿ‌ ಹಣ ಪಡೆದು ವಂಚನೆ ಮಾಡಿದ್ದಾರೆ. ಮೂರು ವರ್ಷದ ಹಿಂದೆ ವಿಶ್ವನಾಥ ಕಿರಾಣಿ ಅಂಗಡಿ ಹಾಕಿದ್ದರು.

ಇದನ್ನೂ ಓದಿ: ರಾಯಚೂರು| ಐವರ ಕೊಲೆ ಪ್ರಕರಣ: ಮೂವರಿಗೆ ಮರಣದಂಡನೆ

ಐದು ಸಾವಿರ ರೂ ಕಿರಾಣಿ ಪಡೆದರೆ ಎರಡು ಸಾವಿರ ರೂ ಮೌಲ್ಯದ ಅಡುಗೆ ಎಣ್ಣೆ ಕೊಡುವುದಾಗಿ ಮೊದಲು ಆಮಿಷ ಒಡ್ಡಿದ್ದರಂತೆ. ಹದಿನೈದು ಸಾವಿರ ರೂ ಕೊಟ್ಟರೆ ತಿಂಗಳ ನಂತರ 20 ಸಾವಿರ ರೂ ಕೊಡುವುದಾಗಿ ಮತ್ತು ಲಕ್ಷ ಲಕ್ಷ ಹಣ ಕೊಟ್ಟವರಿಗೆ 40% ಬಡ್ಡಿ ಕೊಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ.

ಬಳಿಕ ಎರಡು ತಿಂಗಳ ಕಿರಾಣಿ ತೆಗೆದುಕೊಂಡರೆ ಒಂದು ತಿಂಗಳ ಕಿರಾಣಿ ಉಚಿತ ಕೊಟ್ಟಿದ್ದನಂತೆ. ಹೀಗೆ ಮಾಡುತ್ತ ನಿಧಾನಕ್ಕೆ ಜನರ ವಿಶ್ವಾಸ ಗಳಿಸಿದ ವಿಶ್ವನಾಥ್​, ಹಲವು ಸ್ಕೀಂಗಳನ್ನ ನೀಡಿ ಮೊದಲಿಗೆ ಆಮಿಷವೊಡ್ಡಿ ಜನರಿಂದ ಹಣ ವಸೂಲಿ ಮಾಡಿದ್ದಾರೆ.

ಕಿರಾಣಿ ಅಂಗಡಿ ಮಾಲೀಕಕನ್ನು ನಂಬಿದ ಜನರು ಒಬ್ಬೊಬ್ಬರು ಮೂರು ಲಕ್ಷ, ಐದು ಲಕ್ಷ ಹೀಗೆ ಹತ್ತು ಲಕ್ಷದವರೆಗೆ ಹಣ ಹೂಡಿಕೆ ಮಾಡಿದ್ದಾರೆ. ಸುಮಾರು 50 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಸದ್ಯ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಮನೆಗೆ ಬೀಗ ಹಾಕಿ ವಿಶ್ವನಾಥ್ ಪರಾರಿಯಾಗಿದ್ದಾರೆ. ನಮ್ಮ‌ಹಣಕ್ಕೆ ಯಾರು ಗ್ಯಾರಂಟಿ ಅಂತಾ ಜನರು ಅಳಲು ತೊಡಿಕೊಂಡಿದ್ದು, ಬ್ರೂಸ್ ಪೇಟೆ ಪೊಲೀಸ್​ ಠಾಣೆ ಮುಂದೆ ಜಮಾಯಿಸಿದ್ದಾರೆ. ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಆರೋಗ್ಯ ಹಕ್ಕು | ಆರೋಗ್ಯ ಎಂದರೆ ರೋಗವಿಲ್ಲದಿರುವುದೇ?! | ಸರಣಿ ಕಾರ್ಯಕ್ರಮ – ಸಂಚಿಕೆ 01 Janashakthi Media

Donate Janashakthi Media

Leave a Reply

Your email address will not be published. Required fields are marked *