ಹಾಸನ: ತಿರುಪತಿ ದೇವಸ್ಥಾನದಲ್ಲಿ ತಂಗುವ ವ್ಯವಸ್ಥೆ ಮಾಡುವುದಾಗಿ ನಂಬಿಸಿ ಹಾಸನ ನಗರದ ಶಾಂತಿನಗರದ ಸುರೇಶ್ ಎಂಬುವವರಿಗೆ ಬರೋಬ್ಬರಿ ₹9,22,923 ವಂಚನೆ ಮಾಡಿದ್ದಾರೆ.
ಸುರೇಶ್ ತಮ್ಮ ಕುಟುಂಬದೊಂದಿಗೆ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದು, ದೇವಸ್ಥಾನದಲ್ಲಿ ತಂಗುವ ವ್ಯವಸ್ಥೆಗಾಗಿ ಜುಲೈ 29 ರಂದು ದೇವಸ್ಥಾನದ ವೆಬ್ ಸೈಟ್‌ನಲ್ಲಿ ಹುಡುಕುತ್ತಿದ್ದರು.
ಅಪರಿಚಿತ ವ್ಯಕ್ತಿಯೊಬ್ಬ ಸುರೇಶ್ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿ, ಆಧಾರ್ ಕಾರ್ಡ್ ಪ್ರತಿ, ಅಗತ್ಯ ರೂಮಿನ ವಿವರಗಳನ್ನು ಕಳುಹಿಸುವಂತೆ ಹಾಗೂ ಪಾವತಿಸಬೇಕಾದ ಹಣದ ಬಗ್ಗೆ ವಿವರ ಕಳುಹಿಸಿದ್ದರು.
ಇದನ್ನೂ ಓದಿ: ಸಂಘರ್ಷ ಪೀಡಿತ ಮಣಿಪುರದ ಜನರನ್ನು ರಕ್ಷಿಸುವಲ್ಲಿ ಮೋದಿ ವಿಫಲ; ಮಲ್ಲಿಕಾರ್ಜುನ ಖರ್ಗೆ
ಅದರಂತೆ ಜುಲೈ 31ರಂದು ಅಪರಿಚಿತನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಸುರೇಶ್ ಹಣ ಪಾವತಿಸಿದ್ದರು. ಆದರೆ, ಹಣ ಬಂದಿಲ್ಲ ಎಂದು ಸು..ಳ್ಳು ಹೇಳಿ, ಜುಲೈ 31ರಿಂದ ಆಗಸ್ಟ್ 8ರವರೆಗೆ ಒಟ್ಟು ₹9,22,923 ಅನ್ನು ಅಪರಿಚಿತ ವ್ಯಕ್ತಿ ವರ್ಗಾಯಿಸಿಕೊಂಡಿದ್ದಾನೆ ಎನ್ನಲಾಗಿದೆ .
ಆಗಸ್ಟ್ 28 ರಂದು ಸುರೇಶ್, ಖುದ್ದು ಟಿ.ಟಿ.ಡಿ ಸಂಸ್ಥೆಯ ಶ್ರೀನಿವಾಸ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿ, ಅಲ್ಲಿಯ ಅಧಿಕಾರಿಗಳಿಗೆ ದಾಖಲಾತಿಗಳನ್ನು ತೋರಿಸಿದ್ದಾರೆ. ಆಗ ಆನ್‌ಲೈನ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಹಾಸನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಎನ್ ಆರ್ ಕಾಲೋನಿ | ಚರಂಡಿ ಕಾಮಗಾರಿ | ಎರಡೂ ಕಡೆ ರಸ್ತೆ ಅಗೆದರೆ ಓಡಾಡೋದು ಹೇಗೆ?- ಜನಾಕ್ರೋಶ Janashakthi Media