ಬೆಂಗಳೂರು: ನಗರದ ಬಾಗಲೂರು ಠಾಣೆ ಪೊಲೀಸರು ಅಮಾಯಕ ವ್ಯಕ್ತಿಯ ಬಳಿ 6 ಲಕ್ಷ ರೂ. ಹಣ ಸುಲಿಗೆ ಮಾಡಿದ್ದ ಮೂವರು ಪೊಲೀಸರು ಉದ್ಯಮದ ಹೆಸರಿನಲ್ಲಿ 50 ಲಕ್ಷ ರೂ. ಹಣ ಕಸಿದುಕೊಂಡು ಪರಾರಿ ಆಗಿದ್ದ ಗುಂಪಿನ ಒಬ್ಬ ಸದಸ್ಯ ಸೇರಿದಂತೆ ಒಟ್ಟು 4 ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಉದ್ಯಮ
ಬೆಂಗಳೂರಿನಲ್ಲಿ ದೂರುದಾರ ನಾಗರಾಜ್ ಜಿಎಸ್ಟಿ ಫೈಲಿಂಗ್ ಕೆಲಸ ಮಾಡಿಕೊಂಡಿದ್ದರು. ರಕ್ಷಿತ್ ಎಂಬಾತ ಅದಾನಿ ಗ್ರೀನ್ ಎನರ್ಜಿ ಲಿಮಿಟೆಟ್ಗೆ ಜಿಎಸ್ಟಿ ಬಿಲ್ ಕೇಳಿಕೊಂಡು ಬಂದು ನಾಗರಾಜ್ಗೆ ಪರಿಚಯವಾಗಿದ್ದನು. ನಂತರ ಇದೇ ರಕ್ಷಿತ್ ಎಂಬ ಯುವಕ ಪುನೀತ್ ಎಂಬಾತನಿಂದ ತನ್ನ ಕಂಪನಿಗೆ ಕ್ರಿಪ್ಟೋ ಕರೆನ್ಸಿ ಖರೀದಿಸುತ್ತಿದ್ದೇನೆ ಎಂದು ಪರಿಚಯ ಮಾಡಿಕೊಟ್ಟಿದ್ದಾನೆ. ಪುನೀತನಿಗೆ ಕೊಡುವುದಕ್ಕೆ 50 ಲಕ್ಷ ರೂ. ಜಿಎಸ್ಟಿ ಬಿಲ್ ಬೇಕು ಎಂದು ಕೇಳಿದಾಗ ನೀವು 65 ಲಕ್ಷ ರೂ. ಹಣವನ್ನು ಪಾವತಿ ಮಾಡಬೇಕು ಎಂದು ನಾಗರಾಜ್ ಕೇಳಿದ್ದಾರೆ. ಇದಕ್ಕೆ ರಕ್ಷಿತ್ ಮತ್ತು ಪುನೀತ್ ಒಪ್ಪಿಕೊಂಡಿದ್ದಾರೆ. ಉದ್ಯಮ
ಈ ಸಂಬಂಧ ಒಂದು ಹೋಟೆಲ್ನಲ್ಲಿ ಪುನೀತ್ನನ್ನು ಭೇಟಿ ಮಾಡಲು ನಾಗರಾಜು ಮತ್ತು ರಕ್ಷಿತ್ ಇಬ್ಬರೂ ಹೋಗಿದ್ದರು. ಆದರೆ, ಇಲ್ಲಿಗೆ ಏಕಾಏಕಿ ದಾಳಿ ಮಾಡುವ ರೀತಿಯಲ್ಲಿ ಬಂದ ಚಿಕ್ಕಜಾಲ ಠಾಣೆ ಮೂವರು ಪೊಲೀಸರು, ನಾಗರಾಜ್ ಮತ್ತು ಸ್ನೇಹಿತರನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲಿಂದ ಜೀಪಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಪೊಲೀಸರು ನೀವು ಅಕ್ರಮವಾಗಿ ಹಣದ ವ್ಯವಹಾರ ಮಾಡುತ್ತಿದ್ದೀರಿ ಎಂದು ಹೆದರಿಸಿ ನಾಗರಾಜ್ ಕಡೆಯಿಂದ 6 ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದಾರೆ. ಇದಾದ ನಂತರ ಇಂತಹ ವ್ಯವಹಾರಗಳನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿ ಅಲ್ಲಿಂದ ಹೋಗಿದ್ದಾರೆ. ಉದ್ಯಮ
ಇದನ್ನೂ ಓದಿ: ಭಾರಿ ಪ್ರಮಾಣದ ನಗದು ಹೊಂದಿದ್ದರೆ ಅದು ಅಪರಾಧವಲ್ಲ: ಹೈಕೋರ್ಟ್
ಪೊಲೀಸರು ನಾಗರಾಜ್ನನ್ನು ಬಿಟ್ಟು ಹೋದ ಬಳಿಕ ಕರೆ ಮಾಡಿದ ಪುನೀತ್ 50 ಲಕ್ಷ ರೂ. ಮೌಲ್ಯದ ಜಿಎಸ್ಟಿ ಬಿಲ್ ನೀಡುವಂತೆ ತಾನು ಹಣ ನೀಡಲು ಸಿದ್ಧ ಎಂಬಂತೆ ಮಾತನಾಡಿದ್ದಾನೆ. ನಾಳೆ ಸ್ಥಳೀಯ ಒಂದು ಪಿಜಿಯ ಬಳಿ ಬರುವಂತೆ ಸೂಚಿಸಿದ್ದಾನೆ. ಆಗ ಪುನೀತ್ ತನ್ನ ಗ್ಯಾಂಗ್ನೊಂದಿಗೆ ಬಂದು ನಾಗರಾಜ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಬೇರೆಡೆ ಕರೆದೊಯ್ದಿದ್ದಾರೆ. ನಂತರ ನಾಗರಾಜ್ನಿಂದ 50 ಲಕ್ಷ ರೂ. ಹಣ ಹಾಗೂ ಮೈಮೇಲಿದ್ದ ಚಿನ್ನವನ್ನು ಕದ್ದು ಪರಾರಿ ಆಗಿದ್ದಾರೆ. ಈ ಸಂಬಂಧ ನಾಗರಾಜ್ ಅವರು ಬಾಗಲೂರು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದೀಗ ಚಿಕ್ಕಜಾಲ ಠಾಣೆಯ ಪೊಲೀಸ್ ಸಿಬ್ಬಂದಿ ವಿಜಯ್ ಕುಮಾರ್, ಸಂತೋಷ್, ಮಂಜುನಾಥ್ ಮತ್ತು ನಾಗರಾಜ್ನನ್ನು ಸುಲಿಗೆ ಮಾಡುವುದಕ್ಕೆ ಪೊಲೀಸರಿಗೆ ಮಾಹಿತಿ ಕೊಟ್ಟ ಯೂಟ್ಯೂಬರ್ ಪ್ರವೀಣ್ ಎಂಬಾತನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಹಣ ಪಡೆದಿದ್ದ ಪ್ರಮುಖ ಆರೋಪಿ ಪುನೀತ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
ಬೆಂಗಳೂರು ಪೊಲೀಸರಿಂದ ಮಾಮೂಲಿ ವಸೂಲಿ ಆರೋಪ..
ಜನರ ಕಷ್ಟಕ್ಕೆ ಸ್ಪಂದಿಸಬೇಕಿರುವ ಗಸ್ತು ವಾಹನದಿಂದಲೇ ವಸೂಲಿ ಆರೋಪ ಕೇಳಿಬಂದಿದೆ. ಹೆಚ್.ಎ.ಎಲ್ ಬಳಿಯ ಅನ್ನಸಂದ್ರ ಪಾಳ್ಯದಲ್ಲಿ ಗುಜುರಿ ಅಂಗಡಿಯವರಿಂದ ಪೊಲೀಸರು ಹಣ ವಸೂಲಿ ಮಾಡಲಾಗಿದೆ. ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರ ವಾಹನದ ಬಳಿ ಬಂದು ಗುಜರಿ ಅಂಗಡಿಯವನು ಹಣ ಕೊಟ್ಟು ಹೋಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಆಧರಿಸಿ ಸಾರ್ವಜನಿಕರು ಇಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ. ಜನರನ್ನು ರಕ್ಷಿಸುವ ಪೊಲೀಸರೇ ಹೀಗೆ ಮಾಡಿದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಹೆಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ನೋಡಿ: ಒಳ ಮೀಸಲಾತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪತ್ರಿಕಾಗೋಷ್ಠಿ Janashakthi Media