ನಾಲ್ಕು ಕಾರ್ಮಿಕ ಸಂಹಿತೆಗಳು; ಕಾರ್ಮಿಕರ ಮರಣ ಶಾಸನಗಳು: ಮೀನಾಕ್ಷಿ ಸುಂದರಂ ಟೀಕೆ

ಹಟ್ಟಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳು ಅತ್ಯಂತ ಅಪಾಯಕಾರಿಯಾಗಿವೆ. ಇವು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಕರಾಳ ಕಾನೂನುಗಳು ಎಂದು ಸಿಐಟಿಯು ರಾಜ್ಯಾಧ್ಯಕ್ಷರು ಕಾಮ್ರೆಡ್ ಮೀನಾಕ್ಷಿ ಸುಂದರಂ ಹೇಳಿದರು.

ಜನವರಿ 11ರಂದು ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಮುಖ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಫಲವಾಗಿ ಬಂದ ಕಾರ್ಮಿಕ ಪರ ಕಾನೂನುಗಳನ್ನು ರದ್ದುಪಡಿಸಿ, ದೇಶಿ–ವಿದೇಶಿ ಬಂಡವಾಳದಾರರ ಪರವಾಗಿ ಕೇಂದ್ರ ಸರ್ಕಾರ ಈ ಸಂಹಿತೆಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: “ಅವಳ ಹೆಜ್ಜೆ ಕಿರುಚಿತ್ರೋತ್ಸವ-2026”: ಕನ್ನಡ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಮಹಿಳಾ ನಿರ್ದೇಶಕಿಯರಿಗೆ ಕರೆ

ಸಭೆಯಲ್ಲಿ ಸಂಘದ ಅದ್ಯಕ್ಷ ಕೆ.ಮಹಾಂತೇಶ್ ‌ಮಾತನಾಡಿ ಕಾರ್ಪೊರೇಟ್ ಕಂಪನಿಗಳ ಲಾಭವನ್ನು ಹೆಚ್ಚಿಸಲು ರೂಪಿಸಿ ಜಾರಿ‌ಮಾಡಲಾಗಿರುವ ಈ ಸಂಹಿತೆಗಳಿಂದಾಗಿ ಕಾರ್ಮಿಕ ವರ್ಗ ಭವಿಷ್ಯದಲ್ಲಿ ತನ್ನ ಹಕ್ಕುಗಳನ್ನು ಕಳೆದುಕೊಂಡು ತೀವ್ರ ಶೋಷಣೆಗೆ ಒಳಗಾಗಲಿದೆ ಆದ್ದರಿಂದ ಈ ನೀತಿಗಳು ಜಾರಿಯಾಗದಂತೆ ಕಾರ್ಮಿಕ ವರ್ಗ ಐಕ್ಯತೆಯಿಂದ ಹೋರಾಡುವುದು ಇವತ್ತಿನ ಅನಿವಾರ್ಯತೆಯಾಗಿದೆ. ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಕೂಡ ಇಂತಹ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಇತರೆ ಜನವಿಭಾಗಗಳನ್ನು ಸೇರಿಸಿ ಫೆಬ್ರವರಿ 12 ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಶಫೀ, ಉಪಾಧ್ಯಕ್ಷ ಶಾಂತಪ್ಪ ಆನವೇರಿ,ಕಾರ್ಯದರ್ಶಿ ಗಳಾದ ವೆಂಕೋಬ ಮಿಯಾ ಪುರ, ಕೋಟಾ ಜಮದಗ್ನೀ, ಮಹ್ಮದ್ ಹನೀಫ್, ,ರಮೇಶ ಬಾಬು,ನಾಗರಾಜ, ಗೌಸಮೀಯಾ, ಖಜಾಂಚಿ, ಸಿದ್ದಪ್ಪಮುಂಡರಗಿ,ಉಪ ಖಜಾಂಚಿ ಚಂದ್ರಶೇಖರ್ ಗುಂಡಪ್ಪ ಗೌಡ, ಹನುಮಂತಗೌಡ, ಸಿಐಟಿಯು ಮುಖಂಡರಾದ, ಮೈನೂದ್ದೀನ್‌ ಮಾಲಗತ್ತಿ, ಸೋಮಣ್ಣ,ರಮೇಶ ವೀರಾಪೂರ,ಅಲ್ಲಾಭಕ್ಷ್ಯ,ಪಕೃದ್ದೀನ್ ಹುಸೇನ ಭಾಷಾ ಬೂಪೂರ ಬಾಬು,ಯಮನೂರ ಕೋಟಾ,ನವನೂರು ಬಸವರಾಜ್, ವೆಂಕಟೇಶ ಗೋರ್ಕಲ್, ವೆಂಕಟೇಶ ಮೇದಾನಪುರ,ರಫೀ ಮಲ್ಲಾಪುರ ಸೇರಿದಂತೆ ನೂರಕ್ಕೂ ಅಧಿಕ ಜನರ ಭಾಗವಹಿಸಿದ್ದರು.

ಇದನ್ನೂ ನೋಡಿ: ಒಳ್ಳೆಯ ದಿನಗಳು ಏನಾದವು? ಆರ್ಥಿಕ ಸುಧಾರಣೆ ಭಾರತದ್ದೋ.., ಬಿಜೆಪಿಯದ್ದೋ!?? Janashakthi Media

Donate Janashakthi Media

Leave a Reply

Your email address will not be published. Required fields are marked *