ಮುಂಬೈ: ರಸ್ತೆಯಲ್ಲಿ ನಿಂತಿದ್ದ ಪಾದಚಾರಿಗಳ ಮೇಲೆ ‘ಬೆಸ್ಟ್’ ಬಸ್ ಹರಿದು ನಾಲ್ವರು ಸಾವನ್ನಪ್ಪಿದ್ದೂ, ಹಲವರು ಗಾಯಗೊಂಡಿರುವ ಘಟನೆ ಮುಂಬೈನಲ್ಲಿ ಡಿಸೆಂಬರ್ 29ರಂದು ನಡೆದಿದೆ.
ಬೆಸ್ಟ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಬಿಎಂಸಿ ಹೇಳಿಕೆಯ ಪ್ರಕಾರ ಸೋಮವಾರ ರಾತ್ರಿ10:05 ರ ಸುಮಾರಿಗೆ ಈಘಟನೆ ನಡೆದಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಆಶಾಕಿರಣ SFI ಗೆ 56 ರ ಸಂಭ್ರಮ
ಮುಂಬೈ ಅಗ್ನಿಶಾಮಕ ದಳ, ಬೆಸ್ಟ್ ಸಿಬ್ಬಂದಿ ಜೊತೆಗೆ ಆಂಬ್ಯುಲೆನ್ಸ್ಗಳನ್ನು ನಿಯೋಜಿಸಲಾಗಿತ್ತು. ಮುಂಬೈ ಪೊಲೀಸರ ಪ್ರಕಾರ, ಬೆಸ್ಟ್ ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಘಟನೆ ಭಾಂಡಪ್ ಉಪನಗರದ ಜನನಿಬಿಡ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಆ ಪ್ರದೇಶದಲ್ಲಿ ಅವ್ಯವಸ್ಥೆ ಮತ್ತು ಭೀತಿ ಹರಡಿತು ಮತ್ತು ಸೈಟ್ನಿಂದ ಹಲವಾರು ವೀಡಿಯೊಗಳನ್ನು ಈಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (BEST) ಮುಂಬೈನ ನಾಗರಿಕ ಸಾರಿಗೆ ಸೇವೆಯಾಗಿದೆ.
ಇದನ್ನೂ ನೋಡಿ: ಕುವೆಂಪು ಜನ್ಮ ದಿನ | ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ – ಓದು : ಎಚ್.ವಿ. ನಟರಾಜ Janashakthi Media
