ಕರ್ನಾಟಕದಿಂದ ಆಂಧ್ರಕ್ಕೆ ನಾಲ್ಕು ಆನೆಗಳ – ಮಾನವ-ಆನೆ ಸಂಘರ್ಷ ನಿವಾರಣೆಗೆ ಮಹತ್ವದ ಹೆಜ್ಜೆ

ಬೆಂಗಳೂರು: ಕರ್ನಾಟಕ ಸರ್ಕಾರವು ಆಂಧ್ರಪ್ರದೇಶದಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ನಾಲ್ಕು ಪಳಗಿಸಿದ (ಕುಂಕಿ) ಆನೆಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ. ಈ ಆನೆಗಳ ಹಸ್ತಾಂತರ ಸಮಾರಂಭವು ಮೇ 21, 2025 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಉಪಸ್ಥಿತರಿರುವರು.

ಇದನ್ನು ಓದಿ :-ಕಳಪೆ ರಸ್ತೆಯಿಂದ ಆರೋಗ್ಯ ಸಮಸ್ಯೆ; ಬಿಬಿಎಂಪಿಯಿಂದ 50 ಲಕ್ಷ ರೂ. ಪರಿಹಾರ ಕೇಳಿದ ನಾಗರಿಕ

ಈ ನಿರ್ಧಾರವು 2024 ರಲ್ಲಿ ಬೆಂಗಳೂರುದಲ್ಲಿ ನಡೆದ ಮಾನವ-ಪ್ರಾಣಿ ಸಂಘರ್ಷ ಕುರಿತ ಗ್ಲೋಬಲ್ ಸಮಿಟ್‌ನಲ್ಲಿ ಸಹಿ ಹಾಕಲಾದ “ಬೆಂಗಳೂರು ಚಾರ್ಟರ್” ಅಡಿಯಲ್ಲಿ ಕೈಗೊಳ್ಳಲಾದ ಸಹಕಾರದ ಭಾಗವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಮತ್ತು ಪರ್ವತೀಪುರಂ ಮಣ್ಯಂ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಈ ಆನೆಗಳು ಸಹಾಯಕವಾಗಲಿವೆ.

ಆಂಧ್ರಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗೆ ಆನೆಗಳನ್ನು ಹಿಡಿಯುವ, ಪಳಗಿಸುವ ಮತ್ತು ನಿರ್ವಹಿಸುವ ತರಬೇತಿಯನ್ನು ನೀಡಲು ಕರ್ನಾಟಕ ಸರ್ಕಾರ ಸಹಕಾರ ನೀಡಲಿದೆ. ಇದಕ್ಕಾಗಿ ಆಂಧ್ರಪ್ರದೇಶದಿಂದ ಆಯ್ಕೆಯಾದ ಮಾವುತರು ಮತ್ತು ಕಾವಾಡಿಗಳಿಗೆ ತರಬೇತಿ ನೀಡಲಾಗುವುದು.

ಇದನ್ನು ಓದಿ :-ಮೈಸೂರು| ಕೆಎಸ್‌ಆರ್‌ಟಿಸಿ ಬಸ್ ಗಳ ನಡುವೆ ಢಿಕ್ಕಿ; 35 ಮಂದಿಗೆ ಗಾಯ

ಈ ಕ್ರಮವು ಕರ್ನಾಟಕ ಮತ್ತು ಆಂಧ್ರಪ್ರದೇಶದ ಅರಣ್ಯ ಇಲಾಖೆಗಳ ನಡುವಿನ ಸಹಕಾರವನ್ನು ಬಲಪಡಿಸುವುದರ ಜೊತೆಗೆ, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

Donate Janashakthi Media

Leave a Reply

Your email address will not be published. Required fields are marked *