ಕೊಡಗು: ರೆಸಾರ್ಟ್ ನ ಮಾಜಿ ನೌಕರರ ಓರ್ವ ರೆಸಾರ್ಟ್ ಮಾಲೀಕರು ಮತ್ತು ಪೊಲೀಸರು ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಕೊಟ್ಟು ಎಂಬಲ್ಲಿ ನಡೆದಿದೆ.
ಈ ಒಂದು ಘಟನೆಯು ರೆಸಾರ್ಟ್ ನ ಮಾಜಿ ನೌಕರ ಲೈವ್ ಸೂಸೈಡ್ ಮಾಡಿಕೊಂಡಿದ್ದು ಕೊಡಗು ಜಿಲ್ಲೆಯ ವಿರಾಜಪೇಟೆಯ ಮಾಕೋಟ್ಟು ರಸ್ತೆಯಲ್ಲಿ ನಡೆದಿದ್ದು, ಮ್ಯಾಗ್ನೋಲಿಯ ರೆಸಾರ್ಟ್ ಮಾಜಿ ನೌಕರ ಪ್ರವೀಣ್ ಆತ್ಮಹತ್ಯೆಗೆ ಶರಣಾಗಿ ರೆಸಾರ್ಟ್ ಮಾಲೀಕರು ಮತ್ತು ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 3ಕ್ಕೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಇ-ಖಾತಾ ವಿತರಣೆ
ರೆಸಾರ್ಟ್ ಮಾಲೀಕರಿಂದ ನನಗೆ ಅನ್ಯಾಯವಾಗಿದೆ. ಅರಣ್ಯ ಒತ್ತುವರಿಯಾಗಿದೆ. ಲೈಸೆನ್ಸ್ ಇಲ್ಲದೆ ವಿಲ್ಲಾ ನಿರ್ಮಾಣ ಮಾಡಿದ್ದಾರೆ. ನಾನು ನನ್ನ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಹೋಗುತ್ತಿದ್ದೇನೆ.
ನನ್ನ ದೇಹ ತೆಗೆಯುವ ಮೊದಲು ಮಾಲೀಕನನ್ನು ಬಂಧಿಸಿ ಎಂದು ಪ್ರವೀಣ್ 15 ನಿಮಿಷಗಳ ಕಾಲ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ನೋಡಿ: ಯುಗಾದಿ- ರಂಜಾನ್ ಸೌಹಾರ್ದ ಸಂಗಮ – ಕೆ.ಷರೀಫಾ Janashakthi Media